Smoooooch….ಅಬ್ಬಾ ! ಏನ್ ಗುರು ? ಬರೋಬ್ಬರಿ 58 ಗಂಟೆಗಳ ಕಾಲ ‘ಲಿಪ್ ಕಿಸ್’ ಮಾಡಿ ಗಿನ್ನಿಸ್ ದಾಖಲೆ ಮಾಡಿದ ಜೋಡಿ!!!

ಪ್ರೇಮಿಗಳು ಲಿಪ್ ಕಿಸ್ ಮಾಡೋದು ಸಾಮಾನ್ಯ. ಆದರೆ ಅದರಲ್ಲೂ ಕೂಡ ದಾಖಲೆ ಸೃಷ್ಟಿಸಬಹುದು ಅಂತ ಯಾರಿಗೂ ತಿಳಿದಿರಲಿಕ್ಕಿಲ್ಲ ಅಲ್ವಾ!! ಇಲ್ಲೊಂದು ದಂಪತಿಗಳು ಸತತವಾಗಿ 58 ಗಂಟೆಗಳ ಕಾಲ ʻಲಿಪ್‌ ಟು ಲಿಪ್‌ ಕಿಸ್ʼ ಮಾಡಿ ಗಿನ್ನೆಸ್ ದಾಖಲೆ ಮಾಡಿದ್ದಾರೆ.

 

ಇನ್ನೂ ಈ ದಾಖಲೆ ಸೃಷ್ಟಿಸಿರೋದು ಇತ್ತೀಚೆಗೆ ಅಲ್ಲಾ. ಕಳೆದ 2013 ರಲ್ಲಿ ನಡೆದಿರುವ ಘಟನೆಯಾಗಿದೆ. ಎಕ್ಕಾಚೈ ತಿರಾನರತ್ ಮತ್ತು ಲಕ್ಷನಾ ತಿರಾನರತ್ ದಂಪತಿಗಳು 58 ಗಂಟೆಗಳು, 35 ನಿಮಿಷಗಳು ಮತ್ತು 58 ಸೆಕೆಂಡ್‌ಗಳ ಕಾಲ ಲಿಪ್ ಕಿಸ್ ಮಾಡಿದ್ದಾರೆ. ಈ ಮೂಲಕ ಅವರ ಹೆಸರು ಗಿನ್ನೆಸ್ ದಾಖಲೆ ಪುಟಕ್ಕೆ ಸೇರಿದೆ. ಹೌದು, ಈಗೇಕೆ ಈ ವಿಷಯದ ಪ್ರಸ್ತಾಪ, ಈ ಘಟನೆ ನಡೆದು ವರ್ಷಗಳೇ ಉರುಳಿತು ಅಲ್ವಾ! ಆದರೆ ಇಲ್ಲಿಯವರೆಗೂ ಇವರ ಈ ದಾಖಲೆಯನ್ನು ಯಾರೂ ಬ್ರೇಕ್‌ ಮಾಡಿಲ್ಲ. ಹಾಗಾಗಿ ಈ ಹಳೆಯ ಸುದ್ದಿ ಮತ್ತೆ ವೈರಲ್‌ ಆಗಿದೆ.

ಇದೊಂದು ಸ್ಪರ್ಧೆಯಾಗಿತ್ತು. ಸ್ಪರ್ಧೆಯ ನಿಯಮಗಳನ್ನು ಅನುಸರಿಸಿ ಈ ದಂಪತಿಗಳು 58 ಗಂಟೆಗಳು, 35 ನಿಮಿಷಗಳು ಮತ್ತು 58 ಸೆಕೆಂಡ್‌ಗಳ ಕಾಲ ಲಿಪ್ ಕಿಸ್ ಮಾಡಿ World’s longest kiss ಪ್ರಶಸ್ತಿಯನ್ನು ಪಡೆದರು. ಇನ್ನು ಇಷ್ಟು ಗಂಟೆಗಳ ಕಾಲ ಲಿಪ್ ಕಿಸ್ ಮಾಡಿದ್ದಾರೆ ಅಂದ್ರೆ ಸ್ಪರ್ಧೆಯ ನಿಯಮ ಹೇಗಿತ್ತು? ದಂಪತಿಗಳಿಗೆ ಎದುರಾದ ಸವಾಲುಗಳೇನು? ಅಂತ ನೋಡ್ಲೇಬೇಕು ಅಲ್ವಾ!

ಸ್ಪರ್ಧೆಯಲ್ಲಿ ಒಟ್ಟು ಒಂಬತ್ತು ವಿವಾಹಿತ ಜೋಡಿಗಳು ಭಾಗವಹಿಸಿದ್ದರು. ಸ್ಪರ್ಧೆಯ ನಿಯಮಗಳ ಪ್ರಕಾರ, ಎಲ್ಲಾ ಜೋಡಿಗಳು ನಿಂತುಕೊಂಡು ಕಿಸ್‌ ಮಾಡಬೇಕಿತ್ತು. ಈ ಚಾಲೆಂಜ್‌ ಸ್ವೀಕರಿಸಿದ ಎಕ್ಕಾಚೈ ತಿರಾನರತ್ ಮತ್ತು ಲಕ್ಷನಾ ತಿರಾನರತ್ ದಂಪತಿಗಳು ಸವಾಲುಗಳನ್ನು ಎದುರಿಸಬೇಕಾಯಿತು. ಅವರಿಗೆ ಒಣಹುಲ್ಲಿನ ಮೂಲಕ ಆಹಾರ ಮತ್ತು ದ್ರವವನ್ನು ನೀಡಲಾಯಿತು. ಮತ್ತು ಚುಂಬಿಸುತ್ತಿರುವಾಗ ಶೌಚಾಲಯಕ್ಕೆ ಇಬ್ಬರೂ ಒಟ್ಟಿಗೇ ಹೋಗಬೇಕಾದ ಪರಿಸ್ಥಿತಿ ಎದುರಾಯಿತು. ಸತತವಾದ ಚುಂಬನದಿಂದ ದಂಪತಿಗಳು ಎರಡೂವರೆ ದಿನಗಳ ಕಾಲ ನಿದ್ರೆ ಮಾಡದೆ ತುಂಬಾ ದಣಿದಿದ್ದರು. ನಿಯಮದ ಪ್ರಕಾರ ಎಲ್ಲಾ ಸಮಯದಲ್ಲೂ ನಿಲ್ಲಬೇಕಾದ ಕಾರಣ ಅವರು ತುಂಬಾ ದುರ್ಬಲರಾಗಿದ್ದರು.

ಹಾಗೂ ಇವರೊಂದಿಗೆ ಭಾಗವಹಿಸಿದ್ದ ಜೋಡಿಗಳು ತೀವ್ರ ಬಳಲಿಕೆಯಿಂದ ಮೂರ್ಛೆ ಹೋದರು. ಆದರೆ ಈ ದಂಪತಿಗಳು ತಮ್ಮ ಛಲ ಬಿಡದೆ ಸ್ಪರ್ಧೆಯಲ್ಲಿ ಗೆದ್ದು ಗಿನ್ನೆಸ್ ದಾಖಲೆ ಪುಟ ಸೇರಿದ್ದಾರೆ. ಈ ಜೋಡಿ ದೀರ್ಘಾವಧಿಯ ಲಿಪ್ ಕಿಸ್‌ ಮಾಡಿ ಗಿನ್ನೆಸ್ ದಾಖಲೆಯ ಜೊತೆಗೆ ಎರಡು ವಜ್ರದ ಉಂಗುರಗಳು ಹಾಗೂ 100,000 ನಗದು ಬಹುಮಾನವನ್ನು ಗೆದ್ದಿದ್ದಾರೆ. ಈ ಹಣ ಆ ಸಮಯದಲ್ಲಿ $3,300 ಗೆ ಸಮನಾಗಿತ್ತು.

Leave A Reply

Your email address will not be published.