WhatsApp : ವಾಟ್ಸಪ್ ನಲ್ಲಿ ಬಂತು, ನಿಮಗೆ ನೀವೇ ಮೆಸೇಜ್ ಮಾಡೋ ಹೊಸ ಫೀಚರ್ಸ್ | ಹೇಗೆ ಅಂತೀರಾ?
ಮೆಟಾ-ಮಾಲೀಕತ್ವದ ಜನಪ್ರಿಯ ವಾಟ್ಸಪ್ ಸಂದೇಶ ರವಾನೆ ಮಾಡಲು ಅತಿ ಹೆಚ್ಚು ಬಳಕೆಯಾಗುವ ಪ್ಲಾಟ್ ಫಾರಂ ಆಗಿದ್ದು, ಜನಪ್ರಿಯ ಅಪ್ಲಿಕೇಶನ್ ವಾಟ್ಸ್ಆ್ಯಪ್ 2022 ರಲ್ಲಿ ಸಾಕಷ್ಟು ಬೆಳವಣಿಗೆ ಕಂಡು ಅತಿ ಹೆಚ್ಚು ಫೀಚರ್ಗಳನ್ನು ಪರಿಚಯಿಸಿದೆ. ಇದಕ್ಕಾಗಿಯೇ ಇಂದು ವಿಶ್ವದಲ್ಲಿ ವಾಟ್ಸ್ಆ್ಯಪ್ ಬಳಸುವವರ ಸಂಖ್ಯೆ 2 ಬಿಲಿಯನ್ ದಾಟಿದ್ದು, ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಈ ಅಪ್ಲಿಕೇಶನ್ ಬಳಸುತ್ತಿದ್ದಾರೆ.
ವಿಶ್ವದಲ್ಲಿಂದು ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಅಪ್ಲಿಕೇಶನ್ ಆಗಿ ಬೆಳೆದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್ಫಾರ್ಮ್ (Messaging Platform) ವಾಟ್ಸಪ್ (WhatsApp) ದಿನಕ್ಕೊಂದು ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿರುವ ವಾಟ್ಸ್ಆ್ಯಪ್ ಇದೀಗ ಬಹುನಿರೀಕ್ಷಿತ ಕಮ್ಯೂನಿಟಿ ಫೀಚರ್ಸ್ ಅನ್ನು (WhatsApp Community) ಪರಿಚಯಿಸಿದ ಬಳಿಕ ಸ್ಟೇಟಸ್ ನಲ್ಲಿ ವಾಯ್ಸ್ ನೋಟ್ ಹಾಕುವ ಫೀಚರ್ ಪರಿಚಯಿಸಲು ಮುಂದಾಗಿದೆ. ಇದೀಗ ಮತ್ತೊಂದು ವೈಶಿಷ್ಟ್ಯವನ್ನು ಪರಿಚಯ ಮಾಡಿದೆ . ಸದ್ಯದಲ್ಲೇ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ವಾಯ್ಸ್ ಮೆಸೇಜ್ ಅನ್ನು ಹಂಚಿಕೊಳ್ಳಬಹುದ್ದಾಗಿದ್ದು, ವಾಯ್ಸ್ ನೋಟ್ ಅನ್ನು ಸ್ಟೇಟಸ್ನಲ್ಲಿ ಹಂಚಿಕೊಳ್ಳಬಹುದಾದ ಆಯ್ಕೆ ಮೊದಲಿಗೆ ಐಒಎಸ್ ಬಳಕೆದಾರರಿಗೆ ಲಭ್ಯವಾಗಲಿದೆ. ಈವರೆಗೆ ಸ್ಟೇಟಸ್ನಲ್ಲಿ ವಿಡಿಯೋ, ಫೋಟೋ, ಲಿಂಕ್ ಮತ್ತು ಬರಹಗಳನ್ನು ಮಾತ್ರ ಹಂಚಿಕೊಳ್ಳಬಹುದಾಗಿತ್ತು. ಆದರೆ ಇನ್ನೂ ಮುಂದೆ, ವಾಯ್ಸ್ ನೋಟ್ ಎಂಬ ಹೊಸ ಫೀಚರ್ ಬಂದರೆ ಬಳಕೆದಾರರು ಸ್ಟೇಟಸ್ನಲ್ಲಿ ವಾಯ್ಸ್ ನೋಟ್ ಅಥವಾ ವಾಯ್ಸ್ ಕ್ಲಿಪ್ಗಳನ್ನು ಶೇರ್ ಮಾಡಬಹುದಾಗಿದೆ. 30 ಸೆಕೆಂಡ್ಗಳ ಕಾಲ ಇದು ಇರಲಿದೆ.
Message Yourself: ಇನ್ನುಂದೆ ವಾಟ್ಸ್ಆ್ಯಪ್ನಲ್ಲಿ (WhatsApp) ನಿಮ್ಮ ನಂಬರ್ಗೆ ನೀವೇ ಮೆಸೇಜ್ ಮಾಡಬಹುದಾದ ಆಯ್ಕೆಯನ್ನು ಮೆಟಾ ಒಡೆತನದ ಕಂಪನಿ ಬಿಡುಗಡೆ ಮಾಡಿದ್ದು, ಈ ಹೊಸ ಮೆಸೇಜ್ ವಿಥ್ ಯುವರ್ಸೆಲ್ಫ್ ಎಂಬ ಫೀಚರ್ ಕಾಂಟೆಕ್ಟ್ ಲಿಸ್ಟ್ನಲ್ಲಿ ಕಾಣಿಸಿಕೊಳ್ಳಲಿದೆ.
ಪ್ರಸಿದ್ಧ ಮೆಸೇಜಿಂಗ್ ವಾರಕ್ಕೆ ಒಂದು ಹೊಸ ಫೀಚರ್ಗಳ ಬಗ್ಗೆ ಘೋಷಣೆ ಮಾಡುವ ವಾಟ್ಸ್ಆ್ಯಪ್ನಲ್ಲಿ ಇನ್ನಷ್ಟು ಅನೇಕ ಅಪ್ಡೇಟ್ಗಳು ಬರಲಿಕ್ಕಿದ್ದು ಉಳಿದವು ಪರೀಕ್ಷಾ ಹಂತದಲ್ಲಿವೆ ಎನ್ನಲಾಗಿದೆ . ಇದರ ನಡುವೆ ವಾಟ್ಸ್ಆ್ಯಪ್ ಆಂಡ್ರಾಯ್ಡ್ (Android) ಮತ್ತು ಐಓಎಸ್ ಬಳಕೆದಾರರಿಗೆ ಹೊಸ ಆಯ್ಕೆಯೊಂದನ್ನು ಪರಿಚಯಿಸಿದ್ದು, ಇನ್ನೂ ಮುಂದೆ, ವಾಟ್ಸ್ಆ್ಯಪ್ನಲ್ಲಿ (WhatsApp) ನಿಮ್ಮ ನಂಬರ್ಗೆ ನೀವೇ ಮೆಸೇಜ್ ಮಾಡಬಹುದಾದ ಆಯ್ಕೆಯನ್ನು ಮೆಟಾ ಒಡೆತನದ ಕಂಪನಿ ಪರಿಚಯಿಸಿದೆ.
ಪ್ರಸ್ತುತ ಆಯ್ದ ಬಳಕೆದಾರರಿಗೆಷ್ಟೆ ಈ ಫೀಚರ್ ಲಭ್ಯವಾಗಿದ್ದು, ಮುಂದಿನ ವಾರದಿಂದ ಎಲ್ಲರಿಗೂ ಬಳಕೆಗೆ ಸಿಗಲಿದೆ ಎನ್ನಲಾಗುತ್ತಿದೆ. ವಾಟ್ಸ್ಆ್ಯಪ್ನ ಈ ಹೊಸ ಮೆಸೇಜ್ ವಿಥ್ ಯುವರ್ಸೆಲ್ಫ್ ಎಂಬ ಫೀಚರ್ ಕಾಂಟೆಕ್ಟ್ ಲಿಸ್ಟ್ನಲ್ಲಿ ಕಾಣಲಿದ್ದು, ವಾಟ್ಸ್ಆ್ಯಪ್ ತೆರೆದು ನ್ಯೂ ಚಾಟ್ನಲ್ಲಿ ಕಾಂಟೆಕ್ಟ್ ಲಿಸ್ಟ್ ತೆರೆದಾಗ ಅಲ್ಲಿಬಳಕೆದಾರರಿಗೆ ಅವರದ್ದೇ ನಂಬರ್ ಕಾಣಸಿಗುತ್ತದೆ.
ಅದರ ಮೇಲೆ ಕ್ಲಿಕ್ ಮಾಡಿದರೆ ಚಾಟ್ ಬಾಕ್ಸ್ ಓಪನ್ ಆಗಲಿದ್ದು ನಿಮಗೆ ನೀವೇ ಮೆಸೇಜ್ ಕಳುಹಿಸುವ ಹೊಸ ಫೀಚರ್ ದೊರೆಯಲಿದೆ. ಈ ಮೆಸೇಜ್ ಚಾಟ್ ಬಾಕ್ಸ್ನಲ್ಲಿ ಬಳಕೆದಾರರಿಗೆ ಎಲ್ಲ ರೀತಿಯ ಆಯ್ಕೆ ದೊರೆಯಲಿದ್ದು, ಫೋಟೋ, ವಿಡಿಯೋ, ಡಾಕ್ಯುಮೆಂಟ್, ಆಡಿಯೋ ಎಲ್ಲ ರೀತಿಯ ಫೈಲ್ಗಳನ್ನು ರವಾನೆ ಮಾಡಬಹುದಾಗಿದೆ. ಅಲ್ಲದೆ, ಅಗತ್ಯ ದಾಖಲೆಗಳನ್ನು ಕೂಡ ಸೇವ್ ಮಾಡಬಹುದಾಗಿದೆ.