ಬರೋಬ್ಬರಿ 140 ವರ್ಷಗಳ ನಂತರ ಕ್ಯಾಮರಾಕ್ಕೆ ಸೆರೆಸಿಕ್ಕ ‘ಕಪ್ಪು ಪಾರಿವಾಳ’ !

ಪ್ರಾಣಿ ಪಕ್ಷಿಗಳು ಒಂದಕ್ಕೊಂದು ವಿಭಿನ್ನ ಆಗಿವೆ. ಅದಲ್ಲದೆ ಅವುಗಳ ಪರಿಪೂರ್ಣ ಆಗುಹೋಗುಗಳನ್ನು ತಿಳಿಯಲು ನಮಗೆ ಸಾಧ್ಯವಿಲ್ಲ. ಮತ್ತು ಸುತ್ತ ಮುತ್ತಲು ಎಷ್ಟೋ ಬಗೆಯ ಪ್ರಾಣಿ ಪಕ್ಷಿಗಳಿವೆ ಅಂತ ನಿಖರವಾಗಿ ಲೆಕ್ಕವಿಡಲು ಸಹ ಸಾಧ್ಯವೇ ಆಗುವುದಿಲ್ಲ.

ಎಷ್ಟೋ ಪಕ್ಷಿಗಳನ್ನು ನಾವು ನಮ್ಮ ಸುತ್ತಮುತ್ತಲೂ ಪರಿಸರದಲ್ಲಿ ನೋಡಿರುತ್ತೇವೆ. ಎಷ್ಟೋ ಬಾರಿ ಸುಮಾರು ವರ್ಷಗಳ ಹಿಂದೆ ಕಾಣಿಸಿಕೊಂಡ ಪಕ್ಷಿಯ ಪ್ರಭೇದಗಳು ನಮಗೆ ಅಪರೂಪಕ್ಕೆ ಎಂಬಂತೆ ಮತ್ತೆ ನೋಡಲು ಸಿಗುತ್ತವೆ . ನಾವೆಲ್ಲರೂ ಬೂದು ಬಣ್ಣದ ಪರಿವಾಳವನ್ನು ನೋಡಿರುತ್ತೇವೆ, ಆದರೆ ಕಪ್ಪು ಮತ್ತು ಹಳದಿ ಮಿಶ್ರಿತ ಬಣ್ಣದ ಪಾರಿವಾಳವನ್ನು ನಾವೆಂದಿಗೂ ನೋಡಿರುವುದಿಲ್ಲ.

ವರದಿಯ ಪ್ರಕಾರ, 140 ವರ್ಷಗಳ ಹಿಂದೆ ಕಾಣಿಸಿಕೊಂಡ ಅಪರೂಪದ ಪಕ್ಷಿಯಾದ ಕಪ್ಪು-ನೇಪ್ಡ್ ಫೆಸೆಂಟ್-ಪಾರಿವಾಳವನ್ನು ವಿಜ್ಞಾನಿಗಳು ಮತ್ತೆ ಈಗ ಮರು ಶೋಧಿಸಿದ್ದಾರೆ ಎಂಬ ಮಾಹಿತಿ ಇದೆ.

ಪಪುವಾ ನ್ಯೂ ಗಿನಿಯಾದ ಅರಣ್ಯದಲ್ಲಿ ಪಕ್ಷಿಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ವೀಡಿಯೋವನ್ನು ಸೆರೆಹಿಡಿದ ತಂಡವು ಸ್ಥಳೀಯರನ್ನು ಸಂದರ್ಶಿಸಿ ಮತ್ತು ಕ್ಯಾಮೆರಾ ಟ್ರ್ಯಾಪ್ ಗಳನ್ನು ಸ್ಥಾಪಿಸುತ್ತಾ ಒಂದು ತಿಂಗಳ ಕಾಲ ಹುಡುಕಾಟ ನಡೆಸಿತು ಎಂದು ಮಾಹಿತಿ ಮೂಲಗಳು ತಿಳಿಸಿದೆ.

ಸದ್ಯ ಅಂತಿಮವಾಗಿ ಸೆಪ್ಟೆಂಬರ್ ನಲ್ಲಿ ಈ ಅಪರೂಪದ ಪಕ್ಷಿಯ ನೋಟವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಯಶಸ್ಸನ್ನು ಕಂಡರು.

ಜಾಗತಿಕ ಸಂರಕ್ಷಣಾ ಉಪಕ್ರಮವಾದ ಎಡ್ಜ್ ಆಫ್ ಎಕ್ಸಿಸ್ಟೆಂಟ್ ಪ್ರಕಾರ, ಕಪ್ಪು-ನಾಪ್ಡ್ ಫೆಸೆಂಟ್-ಪಾರಿವಾಳವು ಪಪುವಾ ನ್ಯೂಗಿನಿಯಾದ ಫರ್ಗುಸನ್ ದ್ವೀಪದಲ್ಲಿ ಕಂಡು ಬಂದಿದೆ ಎಂದು ಮಾಹಿತಿ ಇದೆ.

ಸಂಶೋಧನಾ ತಂಡವು ದಿ ಸರ್ಚ್ ಫಾರ್ ಲಾಸ್ಟ್ ಬರ್ಡ್ಸ್ ನ ಒಂದು ಭಾಗವಾಗಿದೆ, ಇದು ಬರ್ಡ್ ಲೈಫ್ ಇಂಟರ್ನ್ಯಾಷನಲ್, ರೀವಿಲ್ಡ್ ಮತ್ತು ಅಮೇರಿಕನ್ ಬರ್ಡ್ ಕನ್ಸರ್ವೆನ್ಸಿ ನಡುವಿನ ಸಹಯೋಗವಾಗಿದೆ. ಅಳಿದು ಹೋಗಿದೆ ಎಂದು ಘೋಷಿಸದ ಆದರೆ 10 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಕಂಡು ಬರದ ಪಕ್ಷಿ ಪ್ರಭೇದಗಳನ್ನು ಮರುಶೋಧಿಸುವುದು ಇದರ ಉದ್ದೇಶವಾಗಿದೆ. ಅಂತಹ 150 ಪ್ರಭೇದಗಳಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸಂಶೋಧಕರು 2019 ರಲ್ಲಿಯೂ ಈ ಪಾರಿವಾಳವನ್ನು ಪತ್ತೆಹಚ್ಚಲು ಪ್ರಯತ್ನಿಸಿದ್ದರು, ಆದರೆ ವಿಫಲರಾದರು. ಈ ಬಾರಿ, ದ್ವೀಪದ ಅತ್ಯುನ್ನತ ಶಿಖರವಾದ ಮೌಂಟ್ ಕಿಲ್ಕೆರಾನ್ ನ ಪಶ್ಚಿಮ ಇಳಿಜಾರಿನಲ್ಲಿ ಅವರು ಯಶಸ್ಸನ್ನು ಕಂಡುಕೊಂಡರು ಎಂದು ವರದಿಯಲ್ಲಿ ತಿಳಿಸಿದೆ.

ಕಡಿದಾದ ಕಣಿವೆಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ಪಕ್ಷಿಯನ್ನು ಗುರುತಿಸಲಾಗಿದೆ ಎಂದು ಸ್ಥಳೀಯರು ಸಂಶೋಧನಾ ತಂಡಕ್ಕೆ ತಿಳಿಸಿದರು. ನಂತರ ತಂಡವು ಆ ಪ್ರದೇಶದಲ್ಲಿ ಅನೇಕ ಕ್ಯಾಮೆರಾಗಳನ್ನು ಅಳವಡಿಸಿತು ಮತ್ತು ಅಂತಿಮವಾಗಿ ಕೆಲವು ದಿನಗಳ ಮೊದಲು ಆ ಪಕ್ಷಿಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಸ್ತಿತ್ವದ ಅಂಚಿನಲ್ಲಿರುವ ಈ ಕಪ್ಪು ಬಣ್ಣದ ಪಾರಿವಾಳವು ಚಿಕ್ಕಪುಟ್ಟ ಬೀಜಗಳು ಮತ್ತು ಬಿದ್ದ ಹಣ್ಣುಗಳನ್ನು ತಿನ್ನುತ್ತದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಹೌದು ಒಂದು ಪಕ್ಷಿಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಇಷ್ಟೊಂದು ಹರಸಾಹಸ ಪಡಬೇಕಾಯಿತು. ಕೊನೆಗೂ ಪ್ರಯತ್ನ ಸಫಲವಾಗಿದೆ.

Leave A Reply

Your email address will not be published.