ಸೌಂದರ್ಯ ಹೆಚ್ಚು ಮಾಡುತ್ತೆ ಹೂವಿನ ಪ್ಯಾಕ್!

ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮನುಷ್ಯ ತನ್ನ ಜೀವನದಲ್ಲಿ ಎಷ್ಟೇ ಬಿಡುವಿಲ್ಲದೇ ಇದ್ದರೂ ಸಹ ತನ್ನ ಸೌಂದರ್ಯ ಬಗ್ಗೆ ಕಾಳಜಿ ವಹಿಸುತ್ತಾನೆ. ಅದಲ್ಲದೆ ಹಿಂದಿನಿಂದಲೂ ಮಹಿಳೆಯರು ತಮ್ಮ ಸೌಂದರ್ಯ ವರ್ಧನೆಗೆ ವಿಶೇಷ ಕಾಳಜಿ ವಹಿಸುತ್ತಾರೆ. ಎಷ್ಟೇ ದುಬಾರಿ ಆದರೂ ಸಹ ಖರ್ಚು ಮಾಡಲು ಸಿದ್ದರಿರುತ್ತಾರೆ.

ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕಗಳನ್ನು ಬಳಸಿ ಸುಂದರವಾಗಿ ಕಾಣಲು ಬಯಸುತ್ತಾರೆ. ಹಾಗೂ ಪಾರ್ಲರ್ ಮೊರೆ ಹೋಗುತ್ತಾರೆ. ಮನೆಯಲ್ಲಿ ಕೆಲವು ತರಕಾರಿ, ಹಣ್ಣಿನ ಫೇಸ್ ಪ್ಯಾಕ್ ಹಚ್ಚಿಕೊಂಡು ತ್ವಚೆಯ ಸೌಂದರ್ಯ ಇಮ್ಮಡಿಗೊಳಿಸಿಕೊಳ್ಳುವ ಬಗ್ಗೆ ಸಹ ಪ್ರಯತ್ನ ಮಾಡುವವರು ಇದ್ದಾರೆ.

ಇವೆಲ್ಲವನ್ನೂ ಮೀರಿ ಸುಲಭವಾಗಿ ಸಿಗುವಂತಹ ಹೂವಿನಿಂದಲೂ ಫೇಸ್ ಪ್ಯಾಕ್ ತಯಾರಿಸಬಹುದು. ಹೌದು ದಾಸವಾಳ ಹೂವಿನ 2 ಎಸಳುಗಳನ್ನು 2 ಚಮಚ ಮೊಸರಿನಲ್ಲಿ ಸೇರಿಸಿ ರುಬ್ಬಿ ಅದಕ್ಕೆ 4-5 ಹನಿ ನಿಂಬೆ ರಸ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿರಿ, 20 ನಿಮಿಷದ ನಂತರ ಮುಖ ತೊಳೆದರೆ ಬೇಸಿಗೆಯ ಬಿಸಿಲಿನಿಂದ ಬಸವಳಿದ ಚರ್ಮಕ್ಕೆ ಒಳ್ಳೆಯ ಫೇಸ್ ಪ್ಯಾಕ್ ಆಗುತ್ತದೆ.

ಅದಲ್ಲದೆ ಗುಲಾಬಿ ಹೂವಿನ ದಳಗಳನ್ನು ಬಿಡಿಸಿ ಸ್ವಲ್ಪ ನೀರಿನಲ್ಲಿ ಅರ್ಧ ಗಂಟೆ ಕಾಲ ನೆನೆಸಿಡಿ. ಅದಕ್ಕೆ 1 ಸ್ಪೂನ್ ಜೇನುತುಪ್ಪ ಸೇರಿಸಿ ರುಬ್ಬಿ ಅದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ ತೊಳೆದುಕೊಂಡರೆ ಮುಖ ಹೂವಿನಂತೆ ಅರಳುವುದು.

ಹೌದು ಈ ರೀತಿಯಾಗಿ ಹಣದ ವ್ಯಯ ಆಗದೆ ಫೇಸ್ ಪ್ಯಾಕ್ ಬಳಸಿಕೊಂಡು ನೈಸರ್ಗಿಕವಾಗಿ ನಿಮ್ಮ ಮುಖವನ್ನು ಹೊಳಪು ಗೊಳಿಸಬಹುದು ಮತ್ತು ಇದರಿಂದಾಗಿ ಯಾವುದೇ ಅಡ್ಡ ಪರಿಣಾಮಗಳು ಸಹ ಇರುವುದಿಲ್ಲ.

Leave A Reply

Your email address will not be published.