SHOCKING NEWS : ಪದೇ ಪದೇ ಕನಸಿನಲ್ಲಿ ಬರುತ್ತಿದ್ದ ನಾಗರಾಜ | ಹಾವಿನ ಮುಂದೆ ನಾಲಗೆ ಚಾಚು ಎಂದ ಜ್ಯೋತಿಷಿ | ನಂತರ ನಡೆದದ್ದು ಭಯಾನಕ!!!

ಕೆಲವೊಮ್ಮೆ ಮೂಢನಂಬಿಕೆಗಳಿಗೆ ಜೋತು ಬಿದ್ದು, ಯಾರದ್ದೋ ಮಾತು ಕೇಳಿ ಅನಾಹುತಕ್ಕೆ ಎಡೆ ಮಾಡಿಕೊಡುವ ಘಟನೆಗಳು ಆಗಾಗ ಕೇಳಿ ಬರುತ್ತವೆ. ಇದೇ ರೀತಿ ಜ್ಯೋತಿಷಿಯೊಬ್ಬರ ಮಾತನ್ನು ಕೇಳಿ ಹಾವಿನ ಮುಂದೆ ಕ್ಷಮೆ ಯಾಚಿಸಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

 


ಮತ್ತೊಬ್ಬರ ಮಾತನ್ನು ಕಣ್ಣು ಮುಚ್ಚಿ ನಂಬುವ ಮೊದಲು ಅದನ್ನು ಪರಾಮರ್ಶನೆ ನಡೆಸುವುದು ಉತ್ತಮ. ಇಲ್ಲದೇ ಹೋದರೆ ಕೆಲವೊಮ್ಮೆ ನಸೀಬು ಕೆಟ್ಟರೆ ದೊಡ್ಡ ಪ್ರಮಾದಕ್ಕೆ ಈಡಾಗಿ ಸಾವಿನ ದವಡೆಗೆ ಸಿಲುಕಿದರು ಅಚ್ಚರಿಯಿಲ್ಲ.!!

ತಮಿಳುನಾಡಿನ ಈರೋಡು ಎಂಬಲ್ಲಿ ಸ್ವಪ್ನದಲ್ಲಿ ದಿನವೂ ಹಾವು ಕಾಣಿಸುತ್ತಿದ್ದ ಕಾರಣಕ್ಕೆ ವ್ಯಕ್ತಿಯೊಬ್ಬರು ಜ್ಯೋತಿಷಿಗೆ ಮೊರೆ ಹೊಕ್ಕ ವ್ಯಕ್ತಿಯೊಬ್ಬರು ಪರಿಹಾರ ಪೂಜೆಗಾಗಿ ಹಾವಿನ ಮುಂದೆ ನಾಲಿಗೆ ಚಾಚಿದಾಗ ಹಾವು ಕಚ್ಚಿ ಅಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಹೌದು!! ತಮಿಳುನಾಡಿನ ಕೇಂದ್ರ , ವ್ಯಕ್ತಿಯೊಬ್ಬರಿಗೆ ಸ್ಪಪ್ನದಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರು ಮನೆಯವರ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದು, ಹಾಗಾಗಿ, ಮನೆಯವರು ಜ್ಯೋತಿಷ್ಯರ ಮೊರೆ ಹೋಗಿದ್ದಾರೆ.

ಜ್ಯೋತಿಷ್ಯರು ಈರೋಡಿನಲ್ಲಿರುವ ಹಾವು ಪೂಜಿಸುವ ಪೂಜಾರಿಯ ಬಳಿಗೆ ಕಳುಹಿಸಿದ್ದು, ಈ ವೇಳೆ ಪೂಜಾರಿಯು ಕನಸಿನಲ್ಲಿ ಯಾವ ರೀತಿಯ ಹಾವು ಕಾಣಿಸುತ್ತದೆ ಎಂದು ಕೇಳಿದಾಗ, ಅದಕ್ಕೆ ವ್ಯಕ್ತಿ ಕನ್ನಡಿ ಹಾವು ಕಾಣಿಸುತ್ತದೆ ಎಂದು ಹೇಳಿದ್ದು, ಇದನ್ನು ಆಲಿಸಿದ ಪೂಜಾರಿಯು ಆ ಹಾವನ್ನು ಪೂಜಿಸಿ ಕ್ಷಮೆಯಾಚಿಸಬೇಕೆಂದು ಹೇಳಿದ್ದಾರೆ. ಅದರಂತೆ ಮನೆಯವರು ಒಪ್ಪಿ ಪೂಜೆಗೆ ಏರ್ಪಾಡು ಮಾಡಿದ್ದು, ಪೂಜಾರಿಯು ಹಾವನ್ನು ಕೈಯಲ್ಲಿ ಹಿಡಿದು ಮೂರು ಬಾರಿ ಊದುವಂತೆ ಹೇಳಿದ್ದಾರೆ ಎನ್ನಲಾಗಿದೆ.

ವ್ಯಕ್ತಿ ಅವರು ಹೇಳಿದಂತೆ ಎರಡು ಬಾರಿ ಊದುವಾಗ ಸುಮ್ಮನಿದ್ದ ಹಾವು ಮೂರನೇ ಬಾರಿ ಊದುವ ವೇಳೆ ನಾಲಿಗೆಯನ್ನೇ ಕಚ್ಚಿದೆ. ಇಷ್ಟಕ್ಕೆ ಸುಮ್ಮನಾಗದ ಪೂಜಾರಿ ವಿಷ ಹರಡದಂತೆ ರಕ್ಷಿಸುತ್ತೇನೆ ಎಂದು ನಾಲಿಗೆಯನ್ನೇ ತುಂಡರಿಸಿದ್ದು, ಆ ಬಳಿಕ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಂತಾಜನಕ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ಏಳು ದಿನಗಳ ಕಾಲ ಚಿಕಿತ್ಸೆ ನೀಡಲಾಗಿದ್ದು, ಇದೀಗ ವ್ಯಕ್ತಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಈ ಘಟನೆಯನ್ನು ಕೇಳಿದಾಗ ಇದನ್ನು ದಡ್ಡತನದ ಪರಮಾವಧಿ ಎನ್ನಬೇಕೋ ಅಥವಾ ಮುಗ್ಧತೆಯೋ ತಿಳಿಯದು!! ಏನೇ ಆಗಲಿ.. ಸಂತ್ರಸ್ತ ವ್ಯಕ್ತಿಯ ಅವಸ್ಥೆ ಹಗಲು ಕಂಡ ಬಾವಿಗೆ ಇರುಳಲ್ಲಿ ಹೋಗಿ ಬಿದ್ದಂತೆ ಆಗಿದೆ!!

Leave A Reply

Your email address will not be published.