ಕೇಂದ್ರದಿಂದ ಹಿರಿಯ ನಾಗರಿಕರಿಗೆ ಗುಡ್‌ ನ್ಯೂಸ್‌ : ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಥವಾ ಎಸ್​ಸಿಎಸ್​ಎಸ್ (SCSS) ಯೋಜನೆಗಳ ಬಗ್ಗೆ ಮಹತ್ವದ ಮಾಹಿತಿ

ಮುಂದಿನ ದಿನದ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಇಂದೇ ಸರಿಯಾದ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಈ ನಡುವೆ ಹಣ ಹೂಡಿಕೆ ಮಾಡುವ ಹಿರಿಯರಿಗೆ ಕೇಂದ್ರ ಸರ್ಕಾರದಿಂದ ಹೊಸ ಉಳಿತಾಯ ಯೋಜನೆಯನ್ನು ಜಾರಿಗೆ ತಂದಿದೆ.
ಹಿರಿಯ ನಾಗರಿಕರಿಗೆ ಖಾತರಿಪಡಿಸಿದ ಆದಾಯ ಅಥವಾ ಗ್ಯಾರಂಟೀಡ್ ರಿಟರ್ನ್ಸ್ ನೀಡುವ ಹೂಡಿಕೆ ಯೋಜನೆಗಳೆರಡನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಪರಿಚಯಿಸಿದೆ.

ಇವುಗಳಲ್ಲಿ ಪ್ರಮುಖವಾದದ್ದು:

  • ‘ಪ್ರಧಾನ ಮಂತ್ರಿ ವಯ ವಂದನಾ ಯೋಜನೆ’ ಅಥವಾ ಪಿಎಂವಿವಿವೈ (PMVVY).
  • ‘ಹಿರಿಯ ನಾಗರಿಕರ ಉಳಿತಾಯ ಯೋಜನೆ’ ಅಥವಾ ಎಸ್​ಸಿಎಸ್​ಎಸ್ (SCSS).

ಎರಡೂ ಯೋಜನೆಗಳ ಸಂಪೂರ್ಣ ವಿವರ ಇಲ್ಲಿದೆ:
ಪ್ರಧಾನ ಮಂತ್ರಿ ವಯ ವಂದನಾ ಯೋಜನೆ’ ಅಥವಾ ಪಿಎಂವಿವಿವೈ (PMVVY) ಯೋಜನೆಯ ವಿವರ :

  • ‘ಪ್ರಧಾನ ಮಂತ್ರಿ ವಯ ವಂದನಾ ಯೋಜನೆ’ಯನ್ನು ಎಲ್​ಐಸಿ ಮೂಲಕ ಸರ್ಕಾರ ಒದಗಿಸಿಕೊಡುತ್ತಿದೆ.
  • ಇದು 60 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಾದವರಿಗೆ ಸಂಬಂಧಪಟ್ಟ ಯೋಜನೆ.
  • ಈ ಯೋಜನೆಯಡಿ ಹಿರಿಯ ನಾಗರಿಕರು ಒಂದು ಬಾರಿಗೆ 15 ಲಕ್ಷ ರೂ. ಹೂಡಿಕೆ ಮಾಡಬೇಕಾಗುತ್ತದೆ.
  • ತಿಂಗಳ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಪಿಂಚಣಿ ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬೇಕು.ನಂತರ ಪಿಂಚಣಿ ಪಡೆಯಲು ಹೂಡಿಕೆದಾರರು ಅರ್ಹರಾಗಿರುತ್ತಾರೆ.
  • ಪಿಎಂವಿವಿವೈ ಖಾತೆದಾರರಿಗೆ 10 ವರ್ಷಗಳ ವರೆಗೆ ಪಿಂಚಣಿ ದೊರೆಯಲಿದೆ. ಹೂಡಿಕೆ ಮಾಡಿದ ಮೊತ್ತಕ್ಕೆ ಬಡ್ಡಿಯನ್ನು ಪಿಂಚಣಿಯಾಗಿ ನೀಡಲಾಗುತ್ತದೆ.
  • 10 ವರ್ಷ ಕಳೆದ ಬಳಿಕ ಹೂಡಿಕೆಯ ಮೊತ್ತ ವಾಪಸ್ ನೀಡಲಾಗುತ್ತದೆ.
  • ಪಿಎಂವಿವಿವೈ ಯೋಜನೆಯಡಿ ಶೇಕಡಾ 7.4ರ ವಾರ್ಷಿಕ ಬಡ್ಡಿ ದರ ನಿಗದಿಪಡಿಸಲಾಗಿದೆ.
  • ಹೂಡಿಕೆದಾರರು ಆಯ್ಕೆಗೆ (ತಿಂಗಳ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ) ಅನುಗುಣವಾಗಿ ಪಿಂಚಣಿ ನೀಡಲಾಗುತ್ತದೆ. 15 ಲಕ್ಷ ರೂ.ಗಳ ಪಿಎಂವಿವಿವೈ ಹೂಡಿಕೆಗೆ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 9,250 ರೂ. ಪಿಂಚಣಿ ದೊರೆಯಲಿದೆ.
  • ಪಿಎಂವಿವಿವೈ ಯೋಜನೆಯಡಿ ಹೂಡಿಕೆಗೆ 2023ರ ಮಾರ್ಚ್ 31ರ ವರೆಗೆ ಅವಕಾಶ ನೀಡಲಾಗಿದೆ. ನಂತರ ಈ ಯೋಜನೆ ಲಭ್ಯವಿರುವುದಿಲ್ಲ.

ಎಸ್​ಸಿಎಸ್​ಎಸ್ ಯೋಜನೆ ವಿವರ:

  • ಇದು ಕೂಡ ಹಿರಿಯ ನಾಗರಿಕರಿಗಾಗಿ ಸರ್ಕಾರ ಖಾತರಿಪಡಿಸಿರುವ ಹೂಡಿಕೆ ಯೋಜನೆಯಾಗಿದೆ.
  • ಈ ಯೋಜನೆಯಡಿ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಪಿಂಚಣಿ ಪಡೆಯಬಹುದಾಗಿದೆ.
  • ಎಸ್​ಬಿಐ, ಅಂಚೆ ಕಚೇರಿಗಳ ಮೂಲಕ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
  • ಈ ಯೋಜನೆಯಡಿ 15 ಲಕ್ಷ ರೂ.ವರೆಗೆ ಹೂಡಿಕೆ ಮಾಡಿ 5 ವರ್ಷಗಳ ವರೆಗೆ ಪಿಂಚಣಿ ಪಡೆಯಲು ಅವಕಾಶವಿದೆ.
  • ಬಡ್ಡಿಯ ಮೊತ್ತ ಪಿಂಚಣಿಯಾಗಿ ಸಿಗಲಿದ್ದು, ಅವಧಿ ಮುಗಿದ ಬಳಿಕ ಹೂಡಿಕೆ ಮಾಡಿದ ಮೊತ್ತ ವಾಪಸ್ ಸಿಗಲಿದೆ.
  • ಈ ಯೋಜನೆಯಡಿ ಮಾಡುವ ಹೂಡಿಕೆಗೆ ಶೇಕಡಾ 7.6ರ ಬಡ್ಡಿ ದರ ನಿಗದಿಪಡಿಸಲಾಗಿದೆ. ಈ ಮೇಲಿನಂತೆ ಹಿರಿಯರಿಗೆ ಕೇಂದ್ರ ಸರ್ಕಾರದಿಂದ ಜಾರಿ ತಂದಿರುವ ಹೊಸ ಉಳಿತಾಯ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬಹುದು.

Leave A Reply

Your email address will not be published.