Shocking News: ಮಗುವಿನ ನಾಲಿಗೆಯ ಬದಲು ಜನನಾಂಗದ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು

ವೈದ್ಯರ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿ ಎಂಬಂತಹ ಘಟನೆಯೊಂದು ಮುನ್ನಲೆಗೆ ಬಂದಿದೆ. ಹೌದು!!!   ತಮಿಳುನಾಡಿನ ಮಧುರೈ ಸರ್ಕಾರಿ ಆಸ್ಪತ್ರೆಯಲ್ಲಿ ಆಘಾತಕಾರಿ ಪ್ರಕರಣ ವರದಿಯಾಗಿದೆ.


ತಮಿಳುನಾಡಿನ ಮಧುರೈ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಒಂದು ವರ್ಷದ ಮಗುವಿನ  ನಾಲಿಗೆ ಬದಲಿಗೆ ಜನನಾಂಗಕ್ಕೆ ಶಸ್ತ್ರಚಿಕಿತ್ಸೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಮಧುರೈನ ರಾಜಾಜಿ ಆಸ್ಪತ್ರೆಯ ವೈದ್ಯರು ಮಗುವಿನ ನಾಲಿಗೆಯ ಬದಲಿಗೆ ಜನನಾಂಗದ ಮೇಲೆ ಆಪರೇಷನ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿರುದುನಗರ ಜಿಲ್ಲೆಯ ಅಮೀರಪಾಳ್ಯದ ಕಾರ್ತಿಕಾ ಮತ್ತು ಅಜಿತ್ ಕುಮಾರ್ ದಂಪತಿಗೆ ಮಗು ಜನಿಸಿದ್ದು ಈ ಸಂದರ್ಭ, ನವಜಾತ ಶಿಶುವಿನ ನಾಲಿಗೆಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹಾಗಾಗಿ, ರಾಜಾಜಿ ಆಸ್ಪತ್ರೆಯಲ್ಲಿ ಕೆಲವು ದಿನಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಎರಡನೇ ಶಸ್ತ್ರಚಿಕಿತ್ಸೆಗಾಗಿ ದಂಪತಿಯನ್ನು ಒಂದು ವರ್ಷದ ಬಳಿಕ ಹಿಂತಿರುಗುವಂತೆ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.


ವೈದ್ಯರು ತಿಳಿಸಿದಂತೆ,  ಈ ತಿಂಗಳ ಆರಂಭದಲ್ಲಿ ಅಜಿತ್ ಮತ್ತು ಕಾರ್ತಿಕಾ ಮಗುವನ್ನು ಎರಡನೇ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ದಿನನಿತ್ಯದ ತಪಾಸಣೆಯ ನಂತರ ವೈದ್ಯರು ಮಗುವನ್ನು ಆಪರೇಷನ್ ಥಿಯೇಟರ್‌ಗೆ ಒಯ್ದಿದ್ದು ಆದರೆ, ನಾಲಿಗೆಯ ಬದಲು ಮಗುವಿನ ಜನನಾಂಗದ ಮೇಲೆ ಶಸ್ತ್ರಚಿಕಿತ್ಸೆ ಮಾಡಿರುವುದನ್ನು ಕಂಡು ಪೋಷಕರು ಗಾಬರಿ ಗೊಂಡಿದ್ದಾರೆ. ಈ ವೇಳೆ ಪೋಷಕರು ಆಘಾತಗೊಂಡಿದ್ದು,ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಮಾಹಿತಿ ಹೇಳಿಕೊಂಡಿದ್ದಾರೆ.ಹಾಗಾಗಿ, ಮಗುವನ್ನು ನಾಲಿಗೆ ಶಸ್ತ್ರಚಿಕಿತ್ಸೆಗಾಗಿ ಮತ್ತೆ ಆಪರೇಷನ್ ಥಿಯೇಟರ್‌ಗೆ ಹಿಂತಿರುಗಿಸಲಾಗಿದೆ.

ಇದರಿಂದ ಗಾಬರಿಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಈ ಕುರಿತಾಗಿ ಆಸ್ಪತ್ರೆಯು ಹೇಳಿಕೆ ಬಿಡುಗಡೆ ಮಾಡಿದ್ದು, ಮಗುವಿನ ಜನನಾಂಗವನ್ನು ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದು, ಆಸ್ಪತ್ರೆಯ ಪ್ರಕಾರ, ಮೂತ್ರನಾಳದಲ್ಲಿ ಮಗುವಿನ ಮುಂದೊಗಲು ಕಿರಿದಾಗಿದ್ದರಿಂದ ಶಸ್ತ್ರಚಿಕಿತ್ಸೆಯ ನಂತರ ಮಗು ಸರಿಯಾಗಿ ಆಹಾರ ಸೇವನೆ ಮಾಡುತ್ತಿದೆ ಜೊತೆಗೆ ಮೂತ್ರ ವಿಸರ್ಜಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

Leave A Reply

Your email address will not be published.