ನಂಬಲಸಾಧ್ಯ | ಸೇಡು ತೀರಿಸಿಕೊಳ್ಳಲೆಂದೇ 6 ತಿಂಗಳ ಬಳಿಕ ಮತ್ತೆ ಬಂದ ಕಾಡಾನೆ

ಕಾಡಾನೆಯೊಂದರ ಸೇಡಿಗೆ (Elephant Revenge) ಒಂದು ಕುಟುಂಬವೇ ದಂಗಾದ ಪ್ರಸಂಗವೊಂದು ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ (Hassan News) ಸಕಲೇಶಪುರ ತಾಲ್ಲೂಕಿನ ಕೆಸಗುಲಿ ಗ್ರಾಮದ ಕುಟುಂಬವೊಂದು ಈ ವಿಚಿತ್ರ ಘಟನೆಗೆ ಸಾಕ್ಷಿಯಾಗಿದೆ.ಆರು ತಿಂಗಳ ಹಿಂದೆ ದಾಳಿ ಮಾಡಿದ್ದ ಕಾಡಾನೆ ಮತ್ತೆ ಅದೇ ಮನೆಯನ್ನು ಶೋಧಿಸಿಕೊಂಡು ಬಂದು ದಾಂಧಲೆ (Elephant Attack In Hassan) ನಡೆಸಿರುವ ವಿಚಿತ್ರ ಘಟನೆ ನಡೆದಿದೆ.

ಕೆಸಗುಲಿ ಗ್ರಾಮದ ಗಿರೀಶ್ ಎಂಬುವವರ ಮನೆ ಮೇಲೆ ಈ ಹಿಂದೆ ದಾಳಿ ಮಾಡಿ ದಾಂದಲೆ ಮಾಡಿದ್ದ ಒಂಟಿ ಸಲಗವನ್ನು ಮಲೆಮಹದೇಶ್ವರ ಬೆಟ್ಟಕ್ಕೆ ಸ್ಥಳಾಂತರ ಮಾಡಲಾಗಿತ್ತು. ಸಲಗವನ್ನು ಸೆರೆಹಿಡಿದು ಸ್ಥಳಾಂತರ ಮಾಡಿದ ಬಳಿಕವೂ 6 ತಿಂಗಳ ನಂತರ ವಾಪಸ್ ಬಂದು ಮತ್ತೆ ಅದೇ ಮನೆ ಮೇಲೆ ಕಾಡಾನೆ ದಾಳಿ ಮಾಡಿದೆ.

ಲಾರಿಯ ಮೇಲೆ ಆನೆಯನ್ನು ಮಲೆ ಮಹದೇಶ್ವರ ಬೆಟ್ಟಕ್ಕೆ ಸ್ಥಳಾಂತರಿಸಲಾಗಿತ್ತು ಎಂದು ತಿಳಿದುಬಂದಿದ್ದು, ವಾಹನದ ಮೇಲೆ ಬೇರೆಡೆ ಸ್ಥಳಾಂತರಿಸಲಾಗಿದ್ದರೂ ಮತ್ತೆ ಕಾಲ್ನಡಿಗೆಯಲ್ಲೇ ಆನೆ ಮರಳಿ ಬಂದು ದಾಳಿ ಮಾಡಿದ್ದು, ಅಚ್ಚರಿ ಮೂಡಿಸಿದೆ.

ಕೇವಲ ಮೂರು ತಿಂಗಳ ಅಂತರದಲ್ಲಿ, ನೂರಾರು ಕಿಲೋಮೀಟರ್ ದೂರದಿಂದ ಹಳೆ ಜಾಗವನ್ನು ಅರಸಿ ಬಂದಿದ್ದ ಸಲಗ ಕುಟುಂಬದ ಮೇಲೆ ದಾಳಿ ನಡೆಸಿದ್ದು, ಒಂಟಿ ಸಲಗದ ಆರ್ಭಟಕ್ಕೆ ಮನೆಯ ಬಾಗಿಲು ಕಿಟಕಿ ಪುಡಿಪುಡಿಯಾಗಿವೆ.ಈ ಹಿಂದೆ ಮನೆ ಮೇಲೆ ದಾಳಿ ಮಾಡುತ್ತಿದ್ದ ಆನೆಯನ್ನು ಅರಣ್ಯ ಇಲಾಖೆ (Karnataka Forest Department) ಸೆರೆ ಹಿಡಿದು ಸ್ಥಳಾಂತರ ಮಾಡಿದ ಬೆನ್ನಲ್ಲೆ ಆನೆ ಇದೀಗ 6 ತಿಂಗಳ ಬಳಿಕ ಕಾಡಾನೆ ಮತ್ತೆ ದಾಳಿ ನಡೆಸಿದೆ.

ಮುಂಜಾನೆ ಎರಡು ಗಂಟೆ ಸುಮಾರಿಗೆ ಮನೆ ಮಂದಿಯೆಲ್ಲಾ ನಿದ್ರೆಯಲ್ಲಿರುವಾಗ ಏಕಾಏಕಿ ಮನೆ ಮೇಲೆ ದಾಳಿ ಮಾಡಿದ್ದು, ಸಲಗದ ಅಬ್ಬರ ಕಂಡು ಮನೆಯವರು ಚಕಿತರಾಗಿದ್ದು, ಆತಂಕಗೊಂಡಿದ್ದಾರೆ. ಆನೆಯನ್ನು ಮಲೆ ಮಹದೇಶ್ವರ ಬೆಟ್ಟಕ್ಕೆ ಸ್ಥಳಾಂತರಿಸಿದ 6 ತಿಂಗಳ ಬಳಿಕ ಮತ್ತೆ ಮನೆಯನ್ನು ಹೇಗೆ ಹುಡುಕಿ ಬಂದಿದೆ ಎಂಬ ಅನುಮಾನ ಬುಗಿಲೆದ್ದಿವೆ.

Leave A Reply

Your email address will not be published.