ಮಹಿಳೆಯರೇ ನಿಮಗೊಂದು ಮಹತ್ವದ ಮಾಹಿತಿ | ಸ್ಯಾನಿಟರಿ ಪ್ಯಾಡ್ ಹಾಗೂ ಆರೋಗ್ಯ ಸಮಸ್ಯೆ – ಅಧ್ಯಯನದಿಂದ ಶಾಕಿಂಗ್ ಮಾಹಿತಿ!!!

ಹೆಣ್ಣು ಮಕ್ಕಳು ವಯಸ್ಸಿಗೆ ಬಂದಾಗ ಮುಟ್ಟು ಆಗುವುದು ಸಹಜ. ಇದೊಂದು ಹೆಣ್ಣು ಮಕ್ಕಳ ಪ್ರಕೃತಿ ದತ್ತವಾದ ಕ್ರಿಯೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಮುಟ್ಟಿನ ತೊಂದರೆ ಹೆಚ್ಚು ಸಾಮಾನ್ಯವಾಗುತ್ತಿದೆ. ಅದಲ್ಲದೆ ಇಳಿ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳು ಮುಟ್ಟು ಆಗುತ್ತಿದ್ದಾರೆ. ಪ್ರಸ್ತುತ ಹೆಣ್ಣು ಮಕ್ಕಳು ಸ್ಯಾನಿಟರಿ ಪ್ಯಾಡ್‌ಗಳನ್ನು ಶೇಕಾಡ 90ರಷ್ಟು ಮುಟ್ಟಿನ ಸಂದರ್ಭದಲ್ಲಿ ಉಪಯೋಗಿಸುತ್ತಾರೆ. ಆದರೆ ಮಹಿಳೆಯರು ಬಳಸುವ ಈ ಪ್ಯಾಡ್‌ಗಳಿಂದ ನಿಮ್ಮ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.


Ad Widget

Ad Widget

Ad Widget

Ad Widget
Ad Widget

Ad Widget

ಹೌದು ಪ್ರಸ್ತುತ ಸ್ಯಾನಿಟರಿ ಪ್ಯಾಡ್‌ಗಳನ್ನು ಅಧ್ಯಯನಕ್ಕೆ ಒಳಪಡಿಸಿದ ಬಳಸಿ ಸಂಶೋಧನೆಯಲ್ಲಿ ತಿಳಿದ ಅಂಶಗಳ ವಿವರ ಇಲ್ಲಿದೆ. ನೀವು ಬಳಸುವ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಇರುವ ಕೆಲವು ರಾಸಾಯನಿಕಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಅಧ್ಯಯನವು ಕಂಡುಹಿಡಿದಿದೆ.


Ad Widget

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿ ಪ್ರಕಾರ ಭಾರತದಲ್ಲಿ 4 ರಲ್ಲಿ 3 ಹದಿಹರೆಯದ ಹುಡುಗಿಯರು ಸ್ಯಾನಿಟರಿ ಪ್ಯಾಡ್‌ಗಳನ್ನು ಅವಲಂಬಿಸಿದ್ದಾರೆ. ಏಕೆಂದರೆ ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಮಹಿಳೆಯ ಯೋನಿಯ ಮೂಲಕ ರಾಸಾಯನಿಕಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಸ್ಯಾನಿಟರಿ ಪ್ಯಾಡ್ ಹೊಂದಿದೆ. ಭಾರತದಲ್ಲಿ 15 ರಿಂದ 24 ವರ್ಷ ವಯಸ್ಸಿನ ಸುಮಾರು 64 ಪ್ರತಿಶತ ಮಹಿಳೆಯರು ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ಅದಲ್ಲದೆ ರಾಪ್ಡ್ ಇನ್ ಸೀಕ್ರೆಸಿ ಎಂಬ ಶೀರ್ಷಿಕೆಯ ಅಡಿಯಲ್ಲಿ ನಡೆಸಲಾದ ಈ ಅಧ್ಯಯನ ಪ್ರಕಾರ ಭಾರತದಾದ್ಯಂತ ಸಾಮಾನ್ಯವಾಗಿ ಲಭ್ಯವಿರುವ ಹತ್ತು ಸ್ಯಾನಿಟರಿ ಪ್ಯಾಡ್ ಬ್ರಾಂಡ್‌ಗಳ ಮೇಲೆ ಅಧ್ಯಯನ ನಡೆಸಲಾಗಿದೆ. ಈ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಕಾರ್ಸಿನೋಜೆನ್‌ಗಳು, ರಿಪ್ರೊಡಕ್ಟಿವ್ ಟಾಕ್ಸಿನ್‌ಗಳು, ಎಂಡೋಕ್ರೈನ್ ಡಿಸ್ರಪ್ಟರ್‌ಗಳು ಮತ್ತು ಅಲರ್ಜಿನ್‌ಗಳಂತಹ ವಿಷಕಾರಿ ರಾಸಾಯನಿಕಗಳು ಸೇರಿವೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಇಂತಹ ರಾಸಾಯನಿಕಗಳು ನಿಮ್ಮ ದೇಹದ ಮೇಲೆ ಕಾಲ ಕ್ರಮೇಣ ಮಾರಕ ಕಾಯಿಲೆಗೆ ಕಾರಣವಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇದಲ್ಲದೇ ನೀವು ಪ್ರತಿ ನಿತ್ಯ ಬಳಸುವ ಡಿಯೋಡರೆಂಟ್‌ಗಳು, ಏರ್ ಫ್ರೆಶ್‌ನರ್‌ಗಳು, ಉಗುರು ಬಣ್ಣ, ಇಂಧನಗಳು ಮತ್ತು ವಾಹನ ಉತ್ಪನ್ನಗಳಲ್ಲಿ ಬಳಸಲಾಗುವ ಕೃತಕ ಪರಿಮಳಕಾರಗಳು ಕೂಡ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಇಂತಹ ರಾಸಯನಿಕಗಳು ನಿಮ್ಮ ದೇಹದ ಮೇಲೆ ನಿಧಾನವಾಗಿ ಕಾಲಕ್ರಮೇಣ ಮಾರಕವಾಗುತ್ತಾ ಹೋಗುತ್ತದೆ ಎಚ್ಚರದಿಂದಿರಿ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಈ ಮೇಲಿನ ಆಧಾರದ ಮಾಹಿತಿ ಪ್ರಕಾರ ಮಹಿಳೆಯರು ಡಿಯೋಡರೆಂಟ್‌ಗಳು, ಏರ್ ಫ್ರೆಶ್‌ನರ್‌ಗಳು, ಉಗುರು ಬಣ್ಣ, ಇಂಧನಗಳು ಮತ್ತು ವಾಹನ ಉತ್ಪನ್ನಗಳಲ್ಲಿ ಬಳಸಲಾಗುವ ಕೃತಕ ಪರಿಮಳಕಾರಗಳು ಇವುಗಳಿಂದ ಜಾಗೃತರಾಗಿರಿ. ಮುಖ್ಯವಾಗಿ ಸ್ಯಾನಿಟರಿ ಪ್ಯಾಡ್ ಗೆ ಬದಲಿ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. ಯಾಕೆಂದರೆ ಸ್ಯಾನಿಟರಿ ಪ್ಯಾಡ್ ಮಹಿಳೆಯರ ಯೋನಿಯ ಧ್ವಾರದ ಸಂಪರ್ಕ ಇರುವ ಕಾರಣ ಎಚ್ಚರ ವಹಿಸುವುದು ಉತ್ತಮ.

error: Content is protected !!
Scroll to Top
%d bloggers like this: