ಮಂಗಳೂರು : ರಿಕ್ಷಾ ಬಾಂಬ್ ಬ್ಲಾಸ್ಟ್ ಪ್ರಕರಣ : ಸಿಎಂ ಕಾರ್ಯಕ್ರಮ ಮಿಸ್ಸಿಂಗ್ | ಅನಂತರ ಸಂಘನಿಕೇತನ ಟಾರ್ಗೆಟ್?!

ಮಂಗಳೂರು ನಗರದ ಕಂಕನಾಡಿ ಸಮೀಪದ ನಾಗುರಿಯಲ್ಲಿ ಆಟೋರಿಕ್ಷಾದಲ್ಲಿ ನ.19ರ ಶನಿವಾರ ಸಂಜೆ ಸಂಭವಿಸಿದ ಸ್ಪೋಟದ ಕುರಿತಾಗಿ ಆರೋಪಿಗಳ ಬಂಧನದ ಬಳಿಕ ರೋಚಕ ಮಾಹಿತಿಗಳು ಹೊರ ಬೀಳುತ್ತಿವೆ.
ಮಂಗಳೂರು ನಗರದ ಕಂಕನಾಡಿ ಸಮೀಪದ ನಾಗುರಿಯಲ್ಲಿ ಆಟೋರಿಕ್ಷಾದಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಆಕಸ್ಮಿಕ ಅವಘಡ ವಲ್ಲ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಅದೊಂದು ಉದ್ದೇಶಿತ ಭಯೋತ್ಪಾದಕ ಕೃತ್ಯ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಟ್ವಿಟ್ಟರ್ ಮೂಲಕ ಸ್ಪಷ್ಟ ಪಡಿಸಿದ್ದಾರೆ.
ತನಿಖೆಯಲ್ಲಿ ಮತ್ತೊಂದು ಆಘಾತಕಾರಿ ಸಂಗತಿ ಮುನ್ನಲೆಗೆ ಬಂದಿದ್ದು, ಆರೋಪಿಯು ಸಿಎಂ ಕಾರ್ಯಕ್ರಮ ಮಿಸ್ಸಿಂಗ್ ಬಳಿಕ ಸಂಘನಿಕೇತನ ಟಾರ್ಗೇಟ್ ಮಾಡಲು ಮಾಸ್ಟರ್ ಪ್ಲಾನ್ ರೆಡಿ ಮಾಡಿಟ್ಟು ಕೊಂಡಿದ್ದ ಎಂಬ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಈ ಹಿಂದೆ ಗೋಡೆ ಬರಹದ ಮೂಲಕ ಬಂಧನಕ್ಕೆ ಒಳಗಾಗಿ ರಾಜ್ಯದಲ್ಲಿ ಶಾಂತಿ ಕಲಕುವ ನಿಟ್ಟಿನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ ಹಾಗೂ ಐಸಿಸ್ ಜತೆ ನಂಟು ಹೊಂದಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡು ಪರಾರಿಯಾಗಿದ್ದ ಆರೋಪಿ ತೀರ್ಥಹಳ್ಳಿಯ ಮೊಹಮ್ಮದ್ ಶಾರೀಕ್ ಈ ಕೃತ್ಯದ ಪ್ರಮುಖ ಆರೋಪಿ ಎಂಬುದು ಬಯಲಾಗಿದೆ.

ಇದರ ಬೆನ್ನಲ್ಲೇ, ಮೊಹಮ್ಮದ್ ಶಾರೀಕ್‌ ವಿಚಾರಣೆಯ ಸಂದರ್ಭ ಪೊಲೀಸರಿಗೆ ಸ್ಫೋಟ ಸ್ಥಳದಲ್ಲಿ ಸಿಕ್ಕಿದ ಮೊಹಮ್ಮದ್ ಶಾರೀಕ್‌ನ ಅ್ಯಂಡ್ರಾಡ್ಡ್ ಮೊಬೈಲ್ ಪ್ರಮುಖ ಸಾಕ್ಷಿಯಾಗಿ ಪರಿಣಮಿಸಿದೆ. ಈಗಾಗಲೇ ಈ ಆಂಡ್ರಾಡ್ಡ್ ಮೊಬೈಲ್‌ನ್ನು ಪರಿಶೀಲನೆ ನಡೆಸಿದ ಪೊಲೀಸರು ಈತನಿಗಿರುವ ಸಂಪರ್ಕದ ಜಾಲದ ಆಳ ತಿಳಿಯುವಲ್ಲಿ ಕಾರ್ಯ ಪ್ರವೃತ್ತ ರಾಗಿದ್ದಾರೆ. ಈ ಕುರಿತಾದ ಪ್ರಮುಖ ದಾಖಲೆಗಳನ್ನು ಕಲೆ ಹಾಕಿದ್ದಾರೆ.
ಆರೋಪಿ ಮೊಹಮ್ಮದ್ ಶಾರೀಕ್‌ನ ಮೊಬೈಲ್‌ನಲ್ಲಿ ಬಳಸುವ ಸಿಮ್ ಬಳ್ಳಾರಿ ಸಂಡೂರಿನ ಅರುಣ್ ಎಂಬವರದ್ದಾಗಿದ್ದು, 2019ರಲ್ಲಿ ಬಳ್ಳಾರಿ ಸಂಡೂರಿನ ಅರುಣ್ ಎಂಬವರ ನಕಲಿ ದಾಖಲೆಯನ್ನು ನೀಡಿ ಆರೋಪಿಯು ಸಿಮ್ ಪಡೆದಿದ್ದಾನೆ. ಪ್ರಸ್ತುತ ಅದೇ ಸಿಮ್‌ನ್ನು ಸ್ಫೋಟದ ವೇಳೆಯೂ ಬಳಸಿದ್ದ ಬಗ್ಗೆ ಇಂಟೆಲಿಜೆನ್ಸಿ ಬ್ಯೂರೊ ಮಾಹಿತಿ ನೀಡಿದ್ದಾರೆ.
ಕುಕ್ಕರ್ ಬಾಂಬ್‌ಗೆ ಟೈಮರ್ ಅಳವಡಿಸಿದ್ದರಿಂದ ನಿಗದಿತ ಸಮಯದೊಳಗೆ ತನ್ನ ಯೋಜನೆಯನ್ನು ಪೂರ್ಣಗೊಳಿಸಲು ಆರೋಪಿಯು ಗೂಗಲ್ ಲೊಕೇಷನ್ ಸರ್ಚ್ ಮಾಡುವ ಸಂದರ್ಭ ಪದೇ ಪದೆ ಮಂಗಳೂರು ಟ್ರಾಪಿಕ್ ಬಗ್ಗೆಯೂ ಸರ್ಚ್ ಮಾಡಿರುವ ಬಗ್ಗೆ ಐಬಿ ಮಾಹಿತಿ ಕಲೆ ಹಾಕುವಲ್ಲಿ ನಿರತವಾಗಿದೆ. ಇದರ ಜೊತೆಗೆ ಆರೋಪಿಯು ಮೈಸೂರಿನಿಂದ ಮಂಗಳೂರು ತಲುಪುವ ವೇಳೆ 3 ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದ್ದು, ಆ ವ್ಯಕ್ತಿಗಳ ಚಲನವಲನದ ಜೊತೆಗೆ ವ್ಯವಹಾರಗಳ ಬಗ್ಗೆ ಐಬಿ ಗಮನ ಹರಿಸಲು ಮುಂದಾಗಿದೆ.

ಆರೋಪಿ ಮುಹಮ್ಮದ್ ಶಾರಿಕ್ ಕುಕ್ಕರ್ ಬಾಂಬ್ ಸಹಿತ ಬಸ್‌ನಲ್ಲಿ ಮೈಸೂರು ಮಡಿಕೇರಿ ಪುತ್ತೂರು ಮಾರ್ಗವಾಗಿ ಮಂಗಳೂರಿಗೆ ಆಗಮಿಸಿದ್ದ ಎನ್ನಲಾಗಿದ್ದು, ಆರೋಪಿಯು ಮೈಸೂರಿನಲ್ಲಿ ಹೊರಡುವ ಸಂದರ್ಭ ಬಸ್ ಮಿಸ್ ಆಗಿದ್ದರಿಂದ ಆರೋಪಿಗಳ ಟಾರ್ಗೆಟ್ ರೀಚ್ ಆಗುವಲ್ಲಿ ಅದರಲ್ಲೂ ಕೂಡ ಸಿಎಂ ಯೋಜನೆ ಮಿಸ್ ಆಗಿದೆ.
ಈತ ಒಂದೇ ದಿನದಲ್ಲಿ ಗೂಗಲ್‌ನಲ್ಲಿ ಬರೋಬ್ಬರಿ 8 ಬಾರಿ ಮಂಗಳೂರು ಲೊಕೆಷನ್ ಸರ್ಚ್ ಮಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಮಂಗಳೂರು ತಲುಪುತ್ತಿದ್ದಂತೆ ಕೊನೆಯದಾಗಿ 2 ಬಾರಿ ಮಣ್ಣಗುಡ್ಡ-ಗಾಂಧಿನಗರ ಲೊಕೆಷನ್ ಸರ್ಚ್ ಮಾಡಿರುವ ದಾಖಲೆ ತನ್ನ ಮೊಬೈಲ್‌ನ ಗೋಗಲ್ ಸರ್ಚ್ ಹಿಸ್ಟರಿಯಲ್ಲಿ ಪತ್ತೆಯಾಗಿರುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

ಇದರ ಜೊತೆಗೆ ಮಂಗಳೂರಿಗೆ ತಡವಾಗಿ ಆಗಮಿಸಿದ್ದು, ಅರಿವಾಗಿದ್ದರಿಂದ ತಾನು ಮಂಗಳೂರು ತಲುಪುವ ನಿಖರ ಸಮಯ ತಿಳಿದುಕೊಳ್ಳುವ ನಿಟ್ಟಿನಲ್ಲಿ ಮೊಬೈಲ್‌ನಲ್ಲಿ ಪದೇ ಪದೇ ಮಂಗಳೂರು ಲೊಕೆಶನ್ ಸರ್ಚ್‌ ಮಾಡುತ್ತಿದ್ದ .
ಆರೋಪಿ ಮೈಸೂರಿನಿಂದ ಮಂಗಳೂರು ತಲುಪುತ್ತಿದ್ದಂತೆ 2ಬಾರಿ ತನ್ನ ಮೋಬೈಲ್‌ನಲ್ಲಿ ಮಣ್ಣಗುಡ್ಡ-ಗಾಂಧಿನಗರದ ಲೊಕೇಷನ್ ಸರ್ಚ್ ಮಾಡಿರುವ ಬಗ್ಗೆ ಈಗಾಗಲೇ ಇಂಟೆಲಿಜೆನ್ಸಿ ಬ್ಯೂರೊ ತನಿಖೆ ನಡೆಸಿದ್ದು, ಮಾಹಿತಿಯ ಅನ್ವಯ ನ.19ರಂದು ಸಿಎಂ ಮಂಗಳೂರು ಬೇಟಿ ವೇಳೆ ಕರಾವಳಿಯ ಸಂಘಪರಿವಾರದ ಶಕ್ತಿಕೇಂದ್ರ ಮಣ್ಣಗುಡ್ಡ ಗಾಂಧಿನಗರದಲ್ಲಿರುವ ಸಂಘನಿಕೇತನಕ್ಕೆ ಭೇಟಿ ನೀಡುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾನೆ. 2 ಬಾರಿ ಶ್ವಾನದಳ ಹಾಗೂ ಬಾಂಬ್‌ಸ್ಕ್ವಾಡ್ ತಂಡ ಸಂಘನಿಕೇತನಕ್ಕೆ ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿದ್ದು, ಕೊನೆ ಕ್ಷಣದಲ್ಲಿ ಸಿಎಂ ಸಂಘನಿಕೇತನ ಬೇಟಿ ರದ್ದಾಗಿದೆ. ಆದರೆ ಇದೇ ಸಂಘನಿಕೇತನದಲ್ಲಿ ಆರ್‌ಎಸ್‌ಎಸ್ ಅಧೀನದ ಕೇಶವ ಸ್ಮತಿ ಸಂವರ್ಧನ ಸಮಿತಿ ವತಿಯಿಂದ ರಾಜ್ಯಮಟ್ಟದ ಮಕ್ಕಳ ಹಬ್ಬ ಆಯೋಜಿಸಲಾಗಿದ್ದು, ದೇಶದ ಪ್ರಮುಖ ಆರ್‌ಎಸ್‌ಎಸ್ ನಾಯಕರು ಏರಿದಂತೆ 10 ಸಾವಿರಕ್ಕೂ ಅಧಿಕ ಜನ ಸಂಘನಿಕೇತನದಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಆರೋಪಿಯು ಸಂಘನಿಕೇತನದಲ್ಲಿ ಹಿಂದೂ ವಿದ್ಯಾರ್ಥಿಯಂತೆ ನಟಿಸಿ, ಎಲ್ಲರನ್ನು ಯಾಮರಿಸಿ ಕುಕ್ಕರ್ ಬಾಂಬ್ ಸ್ಫೋಟಿಸಲು ಪ್ಲಾನ್ ರೂಪಿಸಿರುವ ಸಾಧ್ಯತೆ ದಟ್ಟವಾಗಿದೆ.

ಪೂರ್ವ ತಯಾರಿಯೊಂದಿಗೆ ಭಯೋತ್ಪಾದಕ ಕೃತ್ಯ ಎಸಗಲು ಮುಂದಾಗಿದ್ದು, ಆದರೆ ಕಾರಣಾಂತರಗಳಿಂದ ಯೋಜನೆ ವಿಫಲಗೊಂಡಿದೆ. ಸರ್ಕಾರ ಈ ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಿದ್ದು, ಆರೋಪಿಯ ನಿಜವಾದ ಯೋಜನೆ ಏನಾಗಿತ್ತು?? ಯಾವ ಸ್ಥಳದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಲು ಪ್ಲಾನ್ ಮಾಡಿಕೊಂಡಿದ್ದ ಎಂಬುದರ ಬಗ್ಗೆ ಪ್ರಾಥಮಿಕ ತನಿಖೆಯಿಂದ ಗುರುತಿಸಲಾಗಿದ್ದು, ತನಿಖಾಧಿಕಾರಿಗಳು ಆರೋಪಿಯ ಹೇಳಿಕೆ ಪಡೆದ ಮೇಲೆ ಹೆಚ್ಚಿನ ಮಾಹಿತಿ ನಡೆಸಲಿದ್ದು, ಈ ಪ್ರಕರಣದ ಕುರಿತಾಗಿ ಹೆಚ್ಚಿನ ವಿಚಾರಗಳನ್ನು ಕಲೆ ಹಾಕುವಲ್ಲಿ ಖಾಕಿ ಪಡೆ ಕಾರ್ಯಾಚರಣೆ ಮುಂದುವರೆಸುತ್ತಿದೆ.

Leave A Reply

Your email address will not be published.