ಆಧಾರ್ ಕಾರ್ಡ್ ಕಳೆದು ಹೋಗಿದೆಯೇ? ಆಧಾರ್ ಸುರಕ್ಷಿತವಾಗಿಟ್ಟುಕೊಳ್ಳುವ ಬಗ್ಗೆ ಇಲ್ಲಿದೆ ಮಾಹಿತಿ.
ಕೆಲವೊಂದು ಬಾರಿ ಮರೆತು,ಕಳವು ಅಥವಾ ಇನ್ನೇನೋ ಕಾರಣಗಳಿಂದ ಆಧಾರ್ ಕಾರ್ಡ್ ಕಳೆದು ಹೋಗಿರುತ್ತದೆ. ಆ ಕ್ಷಣ ಏನು ಮಾಡಬೇಕು ಎಂದು ಕೆಲವರಿಗೆ ತೋಚುವುದಿಲ್ಲ. ಹಾಗಾಗಿ ನಿಮ್ಮ ಆಧಾರ್ ಕಾರ್ಡ್ ಕಳೆದು ಹೋದಾಗ ಏನು ಮಾಡಬೇಕು ಹಾಗೂ ಆಧಾರ್ ಕಾರ್ಡ್ ಅನ್ನು ಹೇಗೆ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಆಧಾರ್ ಕಾರ್ಡ್ ಕಳೆದುಹೋದರೆ ತತ್‌ಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ. ಹಾಗೂ ಯುಐಡಿಎಐ ವೆಬ್‌ಸೈಟ್‌ಗೆ ಹೋಗಿ ನಕಲಿ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ. ಇಲ್ಲವೇ ನಿಮ್ಮ ಮನೆಯ ಹತ್ತಿರದ ನೋಂದಣಿ ಕೇಂದ್ರ ಅಥವಾ ಆಧಾರ್ ಸಹಾಯವಾಣಿಗೆ ಅರ್ಜಿ ಸಲ್ಲಿಸಿ.
ಇನ್ನೂ ಆಧಾರ್ ಕಾರ್ಡ್ ಅನ್ನು ಹೇಗೆ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಎಂದರೆ, ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿಗಳ ಸುರಕ್ಷತೆಗಾಗಿ ಎಂಆಧಾರ್ ಎಂಬ ಆ್ಯಪ್ ಅನ್ನು ಡೌನ್ಲೋಡ್ ಮಾಡಿ ಅದರಲ್ಲಿ ಆಧಾರ್ ಕಾರ್ಡ್ ಅನ್ನು ಲಾಕ್ ಮಾಡಬಹುದು. ಹಾಗೇ ಆಧಾರ್ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಅಷ್ಟೇ ಅಲ್ಲದೆ, ವಿಳಾಸ ದೃಢೀಕರಣಕ್ಕಾಗಿ ಅಥವಾ ಇನ್ನೇನೋ ಕಾರಣಕ್ಕೆ ನೀವು ಆಧಾರ್ ಫೋಟೋ ಕಾಪಿ ಕೊಡುತ್ತಿದ್ದರೆ ಇನ್ನು ಮುಂದೆ ಕೊಡಬೇಡಿ. ಯಾಕೆಂದರೆ ಇದರ ದುರ್ಬಳಕೆ ಆಗಬಹುದು. ಹಾಗಾಗಿ ಇದಕ್ಕೆ ಬದಲಾಗಿ ವಿಐಡಿ ಅಥವಾ ಮಾಸ್ಕ್ ಆಧಾರ್ ಬಳಸಿ ಇದು ಉತ್ತಮ. ಇನ್ನೂ ಯಾರಾದರೂ ಆಧಾರ್ ಸಂಖ್ಯೆ ಕೇಳಿದರೆ ಸರಿಯಾದ ಆಧಾರ್ ಸಂಖ್ಯೆ ನೀಡಬೇಡಿ ಬದಲಾಗಿ ವಚ್ಯುìವಲ್ ಐಡಿ ಸಿಗುತ್ತದೆ, ಅದನ್ನು ಕೊಡಿ. ಇದು ಆಧಾರ್ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.