Kantara : OTT ಯಲ್ಲಿ ಕಾಂತಾರ ನೋಡುವಿರಾ ? ಹಾಗಿದ್ರೆ ನಿಮಗಿದೆ ಬಿಗ್ ಶಾಕಿಂಗ್ ನ್ಯೂಸ್ | ರೆಂಟ್ ವಿಷಯ ಖಂಡಿತಾ ಅಲ್ಲ!

ಎಲ್ಲೆಡೆ ಸಂಚಲನ ಮೂಡಿಸಿದ್ದ ಕನ್ನಡದ ಹಿಟ್ ಸಿನಿಮಾ ಕಾಂತಾರ ಓಟಿಟಿಯಲ್ಲಿ ಯಾವಾಗ ಬರುತ್ತೆ ಎಂದು ಕಾತುರದಿಂದ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ನೆನ್ನೆಯಷ್ಟೇ ಸಿಹಿ ಔತಣದ ಸುದ್ದಿ ಲಭ್ಯವಾಗಿದೆ. ಅಮೆಜಾನ್ ಪ್ರೈಮ್​ನಲ್ಲಿ ಸಿನಿಮಾ ನೋಡಬಹುದಾದ ಭಾಗ್ಯ ಎಲ್ಲರಿಗೂ ಲಭ್ಯವಾಗಿದೆ. ಹೌದು, 4 ಭಾಷೆಯಲ್ಲಿ ಅಮೆಜಾನ್ ಪ್ರೈಮ್ ನಲ್ಲಿ ಕಾಂತಾರ (24 ನವೆಂಬರ್‌ ) ಒಟಿಟಿಯಲ್ಲಿ ಪ್ರಸಾರವಾದರು ಕೂಡ ಅಭಿಮಾನಿಗಳಿಗೆ ನಿರಾಸೆಯ ವಿಚಾರವೊಂದು ಹೊರ ಬಿದ್ದಿದೆ.


ಕಾಂತಾರ ಸಿನಿಮಾವನ್ನು ಒಟಿಟಿಯಲ್ಲಿ ನೋಡುತ್ತಿರುವವರಿಗೆ ಬೇಸರ ಮೂಡಿಸೋದು ಮಾತ್ರ ಪಕ್ಕಾ ಎನ್ನಲಾಗುತ್ತಿದೆ. ಅರೇ ಹೌದಾ?? ಯಾಕೆ ರೆಂಟ್​ಗೆ ಎಕ್ಸ್ಟ್ರಾ ಹಣ ಕೊಡಬೇಕು ಅಂತಾನಾ?? ಎಂದು ನೀವು ಊಹಿಸುತ್ತಿದ್ದರೆ ಖಂಡಿತ ಅದಕ್ಕಲ್ಲ …ಬೇಸರ ಮೂಡಿಸೋಕೆ ಬೇರೆ ಕಾರಣ ಬೇರೇನೇ ಇದೆ.


ಈ ಚಿತ್ರವನ್ನು 14ರಿಂದ 16 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಚಿತ್ರ ಗಳಿಸಿದ ಹಣ ಒಟ್ಟು 400 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ನೆನ್ನೆ ವರೆಗೆ ಎಲ್ಲರ ಚಿತ್ತ ಇದ್ದದ್ದು ಕೇವಲ ಒಟಿಟಿ ರಿಲೀಸ್ ಬಗ್ಗೆ ಮಾತ್ರ. ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದ್ದು, ಕಾಂತಾರ ನವೆಂಬರ್ 24, 2022 ರಂದು ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಿದೆ.

ಆಕ್ಷನ್ ಹಾಗೂ ಸಾಹಸಮಯವಾದ ʼಕಾಂತಾರʼ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಿಸಿದ್ದು, ರಿಷಬ್ ಶೆಟ್ಟಿ ಅವರ ರಚನೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಸಪ್ತಮಿ ಗೌಡ, ರಘು ಪಾಂಡೇಶ್ವರ, ಅಚ್ಯುತ್ ಕುಮಾರ್ ಸೇರಿದಂತೆ ಅನೇಕ ಜನಪ್ರಿಯ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ
ಕಾಂತಾರ ಸಿನಿಮಾ ಕರ್ನಾಟಕದಲ್ಲಿ ಮಾತ್ರವಲ್ಲದೆ, ಹೊರ ದೇಶದಲ್ಲಿ ಸಹ ಕರಾವಳಿಯ ಕಲೆಯನ್ನು ಬಿಂಬಿಸಿ , ದೈವಿಕ ಶಕ್ತಿ, ಆಚರಣೆಯ ಬಗ್ಗೆ ನಂಬಿಕೆಯನ್ನು ಎಲ್ಲೆಡೆ ಪಸರಿಸಿದೆ.

ಎಲ್ಲ ಚಿತ್ರಮಂದಿರಗಳಲ್ಲಿ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಮಾಯಿ ಮಾಡಿದ್ದು, ಅಲ್ಲದೆ, 50 ದಿನ ಪೂರೈಸಿರುವ ಕಾಂತಾರ ಸಿನಿಮಾ ಒಟ್ಟು 400 ಕೋಟಿ ಕಲೆಕ್ಷನ್​ ಮಾಡಿ, ನವೆಂಬರ್​ 24 ರಿಂದ ಪ್ರೈಮ್​ನಲ್ಲಿ ಕೂಡ ಅಭಿಮಾನಿಗಳಿಗೆ ಸಿನಿಮಾ ನೋಡಲು ಅವಕಾಶ ಕಲ್ಪಿಸಲಾಗಿದೆ.

ಕಾಂತಾರ ಸಿನಿಮಾ ವರಾಹ ರೂಪಂ ಹಾಡಿನ ವಿವಾದ ಎಲ್ಲರಿಗೂ ತಿಳಿದಿರುವ ವಿಚಾರವೇ!!.ಈ ಟ್ಯೂನ್​ ಅನ್ನು ಮಲಯಾಳಂ ಆಲ್ಬಂ ಸಾಂಗ್​ನ ನಕಲು ಎಂದು ಆರೋಪ ಮಾಡಲಾಗಿದ್ದು, ಕೇರಳ ಹೈ ಕೋರ್ಟ್ ಈ ಹಾಡನ್ನು ಕಾಂತಾರ ಸಿನಿಮಾದಲ್ಲಿ ಬಳಸದಿರುವಂತೆ ತೀರ್ಪು ಕೂಡ ನೀಡಿದೆ. ಹೀಗಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿರುವ ಕಾಂತಾರ ಸಿನಿಮಾದಲ್ಲಿ ವರಾಹ ರೂಪಂ ಹಾಡಿನ ಟ್ಯೂನ್​ ಕಂಪ್ಲೀಟ್​ ಚೇಂಜ್​ ಆಗಿದ್ದು, ಈ ಹಾಡನ್ನು ಅತಿಯಾಗಿ ಮೆಚ್ಚಿಕೊಂಡ ಸಿನಿ ಪ್ರಿಯರಿಗೆ ಶಾಕ್ ಜೊತೆಗೆ ಬೇಸರ ಕೂಡ ಉಂಟಾಗಿದೆ.



ಕಾಂತಾರ ಸಿನೆಮಾದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ವರಾಹ ರೂಪಂ ಮೆಚ್ಚಿಕೊಳ್ಳದೆ ಇರುವವರೇ ವಿರಳ ಎಂದರೂ ತಪ್ಪಾಗಲಾರದು. ವರಾಹ ರೂಪಂ ಹಾಡಿದ್ದರೂ ಟ್ಯೂನ್ ಮಾತ್ರ ಚೇಂಜ್ ಮಾಡಲಾಗಿದ್ದು, ಹೊಸ ಹಾಡನ್ನು ರೆಕಾರ್ಡ್ ಮಾಡಲಾಗಿರುವುದರಿಂದ ಒರಿಜಿನಲ್​ ವರಾಹ ರೂಪಂ ಹಾಡನ್ನು ಎಲ್ಲರೂ ಮಿಸ್ ಮಾಡಿ ಕೊಳ್ಳುತ್ತಿದ್ದಾರೆ.


ಈ ಹಾಡಿನ ರಾಗ ಮತ್ತು ಇದರಲ್ಲಿ ಬಳಸಲಾಗಿರುವ ಸಂಗೀತ ಒರಿಜಿನಲ್ ಅಲ್ಲವೆಂದು ತೈಕ್ಕುಡಂ ಬ್ರಿಡ್ಜ್ ತಂಡ ಹೇಳಿಕೊಂಡಿತ್ತು. ಆದರೆ, ಕಾಂತಾರ ಚಿತ್ರ ತಂಡ ಕೂಡ ಆರೋಪವನ್ನು ತಳ್ಳಿ ಹಾಕುತ್ತಲೇ ಬಂದಿದೆ. ಈ ಚಿತ್ರತಂಡದ ವಿರುದ್ಧ ಇತ್ತೀಚೆಗೆ ಮಲಯಾಳಂ ಸಂಗೀತ ತಂಡವೊಂದು ಕೇಸ್ ದಾಖಲಿಸಿ ಈ ಪ್ರಕರಣದ ವಿಚಾರಣೆ ನಡೆಸಿದ ಕೇರಳ ಕೋರ್ಟ್ ವರಾಹ ರೂಪಂ ಹಾಡಿಗೆ ತಡೆಯಾಜ್ಞೆ ನೀಡಿದೆ.


ವರಾಹ ರೂಪಂ ಹಾಡನ್ನು ಮಲಯಾಳಂ ಹಾಡಿನಿಂದ ಕದ್ದಿದ್ದಾರೆ ಎನ್ನುವುದನ್ನು ಅಭಿಮಾನಿಗಳು ಕೂಡ ನಂಬುತ್ತಿಲ್ಲ. ಏನೇ ಆದರೂ ವರಾಹ ರೂಪಂ ಹಾಡನ್ನು ಮಾತ್ರ ಎಲ್ಲರು ಮಿಸ್ ಮಾಡಿಕೊಳ್ಳು ತ್ತಿರುವುದಂತು ಸುಳ್ಳಲ್ಲ.

Leave A Reply

Your email address will not be published.