ಹೆಂಡತಿಯೊಂದಿಗೆ ಸಂಭಾಷಣೆ ಮಾಡುವುದನ್ನು ತಪ್ಪಿಸಲು 62 ವರ್ಷಗಳ ಕಾಲ ಕಿವುಡ,ಮೂಗನಂತೆ ನಟಿಸಿದ ಗಂಡ!!

ದಾಂಪತ್ಯ ಜೀವನ ಎಂಬುದು ಕೆಲವೊಬ್ಬರಿಗೆ ಖುಷಿ ತರಿಸಿದ್ರೆ, ಇನ್ನೂ ಕೆಲವೊಂದಷ್ಟು ಜನರಿಗೆ ಕಿರಿ-ಕಿರಿ ಉಂಟಾಗುತ್ತದೆ. ಬಹುಶಃ ಈ ಅನುಭವ ಮದುವೆ ಆದವರಿಗೆ ಮಾತ್ರ ತಿಳಿದಿರುತ್ತದೆ. ಅದರಲ್ಲೂ ಕೆಲವೊಂದಷ್ಟು ಜನ ಪ್ರೀತಿಯಿಂದ, ಸಹಬಾಳ್ವೆಯಿಂದ ಜೀವನ ನಡೆಸಿದ್ರೆ, ಕೆಲವೊಬ್ಬರನ್ನು ನೋಡಿದಾಗ ಅಂತೂ ಅಯ್ಯೋ ಯಾಕಪ್ಪ ಇವರು ಮದುವೆ ಆಗಬೇಕಿತ್ತು ಎಂದು ಅನಿಸುತ್ತದೆ.


Ad Widget

Ad Widget

Ad Widget

Ad Widget
Ad Widget

Ad Widget

ಅದರಲ್ಲೂ ಈ ಕಿರಿಕಿರಿ ತಪ್ಪಿಸಲು ಪ್ಲಾನ್ ಕೂಡ ಮಾಡುತ್ತಾರೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ ಮಾಡಿದ ಪ್ಲಾನ್ ಕೇಳಿದ್ರೆ ವಾವ್ ಭೇಷ್ ಎಂದು ಮುಗುಳ್ನಗದೆ ಇರಲು ಸಾಧ್ಯವಿಲ್ಲ. ಇವರು ಅಮೇರಿಕಾದ ವ್ಯಕ್ತಿ. ಇವರು ಹೆಂಡತಿಯ ಜೊತೆ ಸಂಭಾಷಣೆ ಮಾಡುವುದನ್ನು ತಪ್ಪಿಸಿಕೊಳ್ಳಲು 62 ವರ್ಷ ಸುದೀರ್ಘ ಕಾಲ ಕಿವುಡ, ಮೂಗನಂತೆ ನಟಿಸಿದ್ದಾನೆ. ಆದ್ರೆ, ಈಗ ಮಾತ್ರ 80 ವರ್ಷದ ಪತ್ನಿ ಗರಂ ಆಗಿದ್ದು, ಈ ರೀತಿ ಮಾಡಿದ ಪತಿಗೆ ವಿಚ್ಛೇದನ ನೀಡುದಕ್ಕಾಗಿ ಕೋರ್ಟ್​ ಮೆಟ್ಟಿಲೇರಿದ್ದಾರೆ.


Ad Widget

ಈ ಫೇಮಸ್ ಜೋಡಿಯೇ (84 ) ಮತ್ತು ಆಕೆಯ ಪತ್ನಿ ಡೊರೋತಿ(80). ಇವರಿಬ್ಬರು 62 ವರ್ಷಗಳ ಹಿಂದೆ ಮದುವೆ ಆಗಿದ್ದರು. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರೋವಂತೆ ಮಹಿಳೆಯರ ಬಾಯಿ ವಟ-ವಟ ಅನ್ನದೆ ಇರಲು ಸಾಧ್ಯವಿಲ್ಲ. ಅದರಂತೆ ಆತನ ಹೆಂಡತಿ ಡೊರೋತಿ ಕೂಡ ವಿಪರೀತ ಮಾತನಾಡುತ್ತಿದ್ದಳು. ಇದೇ ಕಾರಣಕ್ಕೆ ಡಾಸನ್​​ ಕಿವುಡ ಮತ್ತು ಮೂಕನಂತೆ ವರ್ತಿಸಿದ್ದಾನೆ.

ಆದ್ರೆ, ಹೆಂಡತಿ ಮಾತ್ರ ಆತನನ್ನು ನಂಬಿ, ಆಕೆಯೂ ಕಿವುಡ ಮತ್ತು ಮೂಕರ ಜತೆಗೆ ಮಾತನಾಡುವ ಭಾಷೆಯನ್ನು ತನ್ನ ಗಂಡನ ಜೊತೆಗೆ ಮಾತನಾಡಲು ಈ ಭಾಷೆ ಕಲಿತಿದ್ದಳು. ಹಾಗೆ, ದಾಂಪತ್ಯ ಜೀವನದಲ್ಲಿ ತನ್ನ ಪತ್ನಿ ಡರೋತಿಗೆ ಯಾವುದೇ ರೀತಿಯ ಅನುಮಾನ ಬಾರದ ರೀತಿ ಬೇರಿ ಡಾಸನ್​​​ ನಟಿಸಿದ್ದಾನೆ. ಆದ್ರೆ, ಆತನ ನತದೃಷ್ಟವೊ ಏನೋ ಈ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ಕೋರ್ಟ್​​ ಮೆಟ್ಟಿಲೇರಿದೆ.

error: Content is protected !!
Scroll to Top
%d bloggers like this: