ಕಾಂತಾರ : ವರಾಹ ರೂಪಂ ಹಾಡಿನ ವಿವಾದ, ಹೊಂಬಾಳೆಗೆ ಹಿನ್ನಡೆ | ಅರ್ಜಿ ವಜಾ ಮಾಡಿದ ಕೋರ್ಟ್‌

ಕಾಂತಾರ ಸಿನಿಮಾ ಸದ್ಯ ಬಾಕ್ಸ್ ಆಫೀಸ್ ನಲ್ಲಿ ದೊಡ್ದ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸಿನಿಮಾವಾಗಿದ್ದು, kgf 2 ರ ದಾಖಲೆಯನ್ನು ಕೂಡ ಪುಡಿ ಮಾಡಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿರುವ ಕಾಂತಾರ ಸಿನಿಮಾ ತಂಡಕ್ಕೆ ಹಾಡಿನ ವಿಚಾರ ದೊಡ್ಡ ತಲೆನೋವಾಗಿ ಪರಿಣಮಿಸಿದೆ.ಹೌದು!!..ಕೇರಳದ ಸ್ಥಳೀಯ ನ್ಯಾಯಾಲಯಗಳು ‘ವರಾಹ ರೂಪಂ..’ ಹಾಡಿಗೆ ತಡೆ ನೀಡಿದ್ದನ್ನು ಪ್ರಶ್ನಿಸಿದ ಹೊಂಬಾಳೆ ಫಿಲ್ಮ್ಸ್​ಗೆ ಹೈಕೋರ್ಟ್​ನಲ್ಲಿ ಈಗ ಹಿನ್ನಡೆ ಉಂಟಾಗಿದೆ.

ವಿಶ್ವಾದ್ಯಂತ ಸದ್ದು ಮಾಡಿದ್ದ ಕಾಂತಾರ ಸಿನಿಮಾಕ್ಕೆ ಸಂಕಷ್ಟವೊಂದು ಎದುರಾಗಿದ್ದು, ವರಾಹ ರೂಪಂ ಹಾಡಿಗೆ ಕೇರಳ ಕೋರ್ಟ್ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದ ಬೆನ್ನಲ್ಲೆ ಅದನ್ನು ಪ್ರಶ್ನಿಸಿ ಹೈ ಕೋರ್ಟ್ ಮೆಟ್ಟಿಲೇರಿದ್ದ ಚಿತ್ರ ತಂಡಕ್ಕೆ ತೀರ್ಪು ನಿರಾಸೆ ಮೂಡಿಸಿದೆ.
ಸಿನಿಮಾದಲ್ಲಿರುವ ವರಾಹ ರೂಪಂ ಹಾಡು ಎಲ್ಲರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

‘ವರಾಹ ರೂಪಂ..’ಹಾಡು ವಿವಾದದ ‘ನ ‘ನವರಸಂ..’ ಹಾಡಿನ ಟ್ಯೂನ್​ ‘ವರಾಹ ರೂಪಂ..’ನಲ್ಲಿ ಬಳಕೆ ಆಗಿದೆ ಎಂಬ ಆರೋಪ ಹಲವಾರು ಬಾರಿ ಕೇಳಿಬಂದಿದ್ದು ,ಈ ಹಾಡಿನ ಟ್ಯೂನ್ ಮೇಲೆ ಕೃತಿಚೌರ್ಯದ ಆರೋಪವನ್ನೂ ಕೂಡ ಮಾಡಲಾಗಿದೆ.
ಮಲಯಾಳಂನ ಖ್ಯಾತ ಮ್ಯೂಸಿಕ್ ಬ್ಯಾಂಡ್ ‘ತೈಕ್ಕುಡಂ ಬ್ರಿಡ್ಜ್’ (Thaikkudam Bridge) ಕೋರ್ಟ್ ಮೆಟ್ಟಿಲೇರಿತ್ತು.

ಕೇರಳದ ಕೋಯಿಕ್ಕೋಡ್ ಹಾಗೂ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯಗಳು ಅರ್ಜಿ ವಿಚಾರಣೆಯನ್ನು ಮಾಡಿ ‘ಹಾಡನ್ನು ಅನುಮತಿ ಇಲ್ಲದೆ ಪ್ರಸಾರ ಮಾಡಬಾರದು’ ಎಂದು ಆದೇಶ ನೀಡಿದ್ದಲ್ಲದೆ ಈ ಹಾಡಿನ ರಾಗ ಮತ್ತು ಇದರಲ್ಲಿ ಬಳಸಲಾಗಿರುವ ಸಂಗೀತ ಒರಿಜಿನಲ್ ಅಲ್ಲವೆಂದು ಹೇಳಿದ್ದನ್ನು ಕಾಂತಾರ ಚಿತ್ರ ತಂಡ ಕೂಡ ಆರೋಪವನ್ನು ತಳ್ಳಿ ಹಾಕಿದೆ.

ನವರಸಂ..’ ಹಾಡಿನಲ್ಲಿರುವ ಟ್ಯೂನ್​ ‘ವರಾಹ ರೂಪಂ..’ನಲ್ಲಿ ಬಳಕೆ ಆಗಿದೆ ಎಂದು ಕೇಳುಗರು ಅಭಿಪ್ರಾಯಪಟ್ಟಿದ್ದು,ಇದನ್ನು ‘ತೈಕ್ಕುಡಂ ಬ್ರಿಡ್ಜ್​​’ ಗಂಭೀರವಾಗಿ ಪರಿಗಣಿಸಿ ಕೇಸ್ ದಾಖಲಿಸಿದೆ. ಕೇರಳದ ಸ್ಥಳೀಯ ನ್ಯಾಯಾಲಯಗಳು ‘ವರಾಹ ರೂಪಂ..’ ಹಾಡಿಗೆ ತಡೆ ನೀಡಿದ್ದವು.

ಹಾಗಾಗಿ, ‘ಕಾಂತಾರ’ ಚಿತ್ರವನ್ನು ನಿರ್ಮಿಸಿದ ಹೊಂಬಾಳೆ ಫಿಲ್ಮ್ಸ್ ಈ ಆದೇಶವನ್ನು ಪ್ರಶ್ನಿಸಿ,ಕೇರಳ ಹೈಕೋರ್ಟ್​ ಮೆಟ್ಟಿಲೇರಿದೆ. ಆದರೆ, ​ ಈ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿ ಚಿತ್ರ ತಂಡಕ್ಕೆ ನಿರಾಸೆ ಮೂಡಿಸಿದೆ.

ವರಾಹ ರೂಪಂ..’ ಹಾಡನ್ನು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ‘ಹೊಂಬಾಳೆ ಫಿಲ್ಮ್ಸ್​’ ಯೂಟ್ಯೂಬ್ ಚಾಚಾನೆಲ ಗಳಲ್ಲಿ ಕೂಡ ಟ್ರೆಂಡ್ ಆಗಿತ್ತು. ಸದ್ಯ ‘ಹೊಂಬಾಳೆ ಫಿಲ್ಮ್ಸ್​’ ಯೂಟ್ಯೂಬ್ ಚಾನೆಲ್​ನಿಂದ ಈ ಹಾಡನ್ನು ಡಿಲೀಟ್ ಮಾಡಿದ್ದು, ಮ್ಯೂಸಿಕ್ ಆ್ಯಪ್​ಗಳಾದ​ ಜಿಯೊ ಸಾವನ್ ಮೊದಲಾದ ಕಡೆಗಳಲ್ಲಿ ಈ ಹಾಡು ಪ್ರಸಾರ ಕೂಡ ಆಗುತ್ತಿಲ್ಲ ಎನ್ನಲಾಗಿದೆ.


‘ಅಧೀನ ನ್ಯಾಯಾಲಯಗಳ ಕಾರ್ಯನಿರ್ವಹಣೆಯಲ್ಲಿ ಮಧ್ಯಪ್ರವೇಶಿಸಿದರೆ ಅರ್ಜಿದಾರರ ಶಾಸನಬದ್ಧ ಹಕ್ಕುಗಳಿಗೆ ಚ್ಯುತಿಯಾಗುತ್ತದೆ’ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಹೈಕೋರ್ಟ್ ನಿರ್ದೇಶನವನ್ನು, ‘ನ್ಯಾಯಾಲಯದಿಂದ ಹೊರಗೆ ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಿ’ ಎಂಬ ಪರೋಕ್ಷ ಸೂಚನೆ ಎಂದು ಕೆಲವರು ಅಂದಾಜಿಸಿದ್ದಾರೆ.
ಹಾಡಿನ ವಿಚಾರವಾಗಿ ಹೈಕೋರ್ಟ್​ನಲ್ಲಿ ಪ್ರಶ್ನಿಸಿದ ಹೊಂಬಾಳೆ ಫಿಲ್ಮ್ಸ್​ಗೆ ಹಿನ್ನಡೆ ಉಂಟಾಗಿದ್ದು, ಕೇರಳ ಹೈಕೋರ್ಟ್​ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಸಿ.ಎಸ್. ದಿಯಾಸ್ ಅವರು ಅರ್ಜಿಯನ್ನು ವಜಾ ಮಾಡಿದ್ದಾರೆ.

ಇದರ ಜೊತೆಗೆ ಪರ್ಯಾಯ ಕಾನೂನು ಪರಿಹಾರ ಕಂಡುಕೊಳ್ಳಲು ಅವಕಾಶ ಕೂಡ ಕಲ್ಪಿಸಿದ್ದಾರೆ. ಅಧೀನ ನ್ಯಾಯಾಲಯಗಳು ಹೊರಡಿಸಿದ ಎಲ್ಲಾ ಆದೇಶಗಳಲ್ಲಿ ನಾವು ಮಧ್ಯ ಪ್ರವೇಶಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿ, ಹಾಗೆ ಮಾಡಿದರೆ ಅಧೀನ ನ್ಯಾಯಾಲಯಗಳ ಬಲ ಕುಂಠಿತ ವಾದಂತೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ ಎನ್ನಲಾಗಿದೆ.


ಹಾಗಾಗಿ, ‘ಎಲ್ಲಾ ಮೇಲ್ಮನವಿಗಳನ್ನು ಸ್ವೀಕಾರ ಮಾಡಲು ಸಾಧ್ಯ ವಿಲ್ಲ. ಹೀಗೆ ಮಾಡಿದರೆ, ಕೋರ್ಟ್​​ನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತದೆ’ ಎಂದು ಹೈಕೋರ್ಟ್ ಹೇಳಿದ್ದು, ಹಾಗಾಗಿ, ಅರ್ಜಿಯನ್ನು ವಜಾ ಮಾಡಿದೆ. ಇದರಿಂದ ಹೊಂಬಾಳೆ ಫಿಲ್ಮ್ಸ್​ಗೆ ಹಿನ್ನಡೆ ಆಗಿದ್ದು, ಈಗ ಹೊಂಬಾಳೆ ಫಿಲ್ಮ್ಸ್​ ಈ ವಿಚಾರದಲ್ಲಿ ಚಿತ್ರ ತಂಡದ ಮುಂದಿನ ನಡೆಯೇನು ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತಿದೆ.

Leave A Reply

Your email address will not be published.