BBK9 : ರೂಪೇಶ್ ಶೆಟ್ಟಿ ಜೊತೆ ಕೊರಗಜ್ಜನ ಸನ್ನಿಧಿಗೆ ಬರುತ್ತೇನೆ : ಸಾನ್ಯಾ ಅಯ್ಯರ್

ಕನ್ನಡಿಗರಲ್ಲಿ ಮನೆ ಮಾಡಿರುವ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಬಗ್ಗೆ ಈಗಾಗಲೇ ನಮಗೆ ಗೊತ್ತೇ ಇದೆ. ಬಿಗ್ ಬಾಸ್ ನ ಸ್ಪರ್ಧಿಗಳಲ್ಲಿ ದಿನೇ ದಿನೇ ಕಳೆದ ಹಾಗೆಯೇ ಕಾಂಪಿಟೇಶನ್​ ಹೆಚ್ಚಾಗ್ತನೇ ಇದೆ. ಒಂದೊಂದು ವಾರನೂ ಒಬ್ಬೊಬ್ಬರು ಮನೆಯಿಂದ ಹೋಗ್ತಾ ಇದ್ದಾರೆ. ಅದರಲ್ಲಿಯೂ ಊಹಿಸಲಾಗದೇ ಇರುವ ಸ್ಪರ್ಧಿಯೇ ಮನೆಯಿಂದ ಹೊರಗೆ ಹೋಗ್ತಾ ಇದ್ದಾರೆ. ಹೌದು ಬಿಗ್ ಬಾಸ್ ಓಟಿಟಿಯಲ್ಲಿ ಸದ್ದು ಮಾಡಿ ಬಿಗ್ ಬಾಸ್ ಟಿವಿ ಶೋಗೆ ಎಂಟ್ರಿಕೊಟ್ಟಿದ್ದ ಸಾನ್ಯ ಅಯ್ಯರ್ ಆರನೇ ವಾರಕ್ಕೆ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.

ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಒಟಿಟಿಯಲ್ಲಿ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಂಡು ನಂತರ ಟಿವಿ ಸೀಸನ್​ಗೂ ಬಂದಿದ್ದು ಇವರ ಮಧ್ಯೆ ಒಳ್ಳೆಯ ಕೆಮಿಸ್ಟ್ರಿ ಬೆಳೆದಿತ್ತು. ಆದರೆ, ಸಾನ್ಯಾ ಐಯ್ಯರ್ ಆರನೇ ವಾರ ಕಡಿಮೆ ವೋಟ್ ಪಡೆದು ಮನೆಯಿಂದ ಹೊರ ಹೋಗಿದ್ದಾರೆ.

ಮನೆಯಿಂದ ಹೊರಬಂದ ಮೇಲೆ ಸಾನ್ಯಾ ಮೊದಲ ಭಾರಿಗೆ ಸೋಷಿಯಲ್ ಮೀಡಿಯಾ ಮೂಲಕ ಲೈವ್ ಬಂದಿದ್ದಾರೆ. ಈ ವೇಳೆ ಸಾನ್ಯರನ್ನ ಫ್ಯಾನ್ಸ್ ಯಾವಾಗ ಮಂಗಳೂರಿಗೆ ಬರುತ್ತೀರಾ ಎಂದು ಕೇಳಿದ್ದು, ಅದಕ್ಕೆ ಸಾನ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚೆಗೆ ತಮ್ಮ ಖಾಸಗಿ ಪೇಜ್‌ನಲ್ಲಿ ಲೈವ್‌ಗೆ ಬಂದ ವೇಳೆ ಮಂಗಳೂರಿಗೆ ಬರುವ ಬಗ್ಗೆ ಸಾನ್ಯಾಗೆ ಅಭಿಮಾನಿಯೊಬ್ಬ ಪ್ರಶ್ನಿಸಿದ್ದಾರೆ. ರೂಪೇಶ್ ಶೆಟ್ಟಿ, ಬಿಗ್ ಬಾಸ್ ಗೆದ್ದು ಬರಲಿ. ಅವರು ಖಂಡಿತಾ ಗೆಲ್ಲುತ್ತಾರೆ. ನಾನು ಕೂಡ ಕೊರಗಜ್ಜನ ಸನ್ನಿಧಿಗೆ ಬರಬೇಕು. ರೂಪು, ಹೊರ ಬಂದ ಮೇಲೆ ನಾನು ಮಂಗಳೂರಿಗೆ ರೂಪೇಶ್ ಜೊತೆಗೆ ಬರುತ್ತೇನೆ ಎಂದಿದ್ದಾರೆ ಸಾನ್ಯಾ ಐಯ್ಯರ್.

ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಇದೀಗ ಒಳ್ಳೆಯ ಅವಕಾಶಗಳು ಸಾನ್ಯಗೆ ಅರಸಿ ಬರುತ್ತಿದೆ. ಸೂಕ್ತ ಕಥೆಯೊಂದಿಗೆ ಸಿನಿಮಾ ಮಾಡುವುದಾಗಿ ಸಾನ್ಯ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Leave A Reply

Your email address will not be published.