ಅಧ್ಯಯನದಲ್ಲಿ ಬಹಿರಂಗವಾಯ್ತು ಹೆಚ್ಚು ಜನರು ಬಳಸುವ ಪಾಸ್ ವರ್ಡ್ | ನೀವು ಕೂಡ ಈ ಪಟ್ಟಿಯಲ್ಲಿರುವ ಪಾಸ್ವರ್ಡ್ ಬಳಸಿದರೆ ಖಾತೆ ಹ್ಯಾಕ್ ಖಂಡಿತ!

ಇಂದಿನ ಟೆಕ್ನಾಲಜಿ ಯುಗದಲ್ಲಿ ‘ಪಾಸ್ವರ್ಡ್’ ಎಂಬುದು ಅತೀ ಮುಖ್ಯವಾಗಿದೆ. ಯಾಕಂದ್ರೆ ತಂತ್ರಜ್ಞಾನ ಮುಂದುವರಿಯುತ್ತಾ ಹೋದಂತೆ ಕಿರಾತಕರ ಸಂಖ್ಯೆಯು ಅಧಿಕವಾಗಿದೆ. ಹೀಗಾಗಿ, ಎಷ್ಟು ಆಗುತ್ತೋ ಅಷ್ಟು ಸ್ಟ್ರಾಂಗ್ ಆದ ಪಾಸ್ ವರ್ಡ್ ಬಳಸೋದು ಅಗತ್ಯ.

ಆದ್ರೆ, ಹೆಚ್ಚಿನ ಜನರು ಕಠಿಣವಾದ ಪಾಸ್ವರ್ಡ್ ಗಳನ್ನು ಬಳಸಿದರೆ ಎಲ್ಲಿ ಮರೆತು ಹೋಗುತ್ತದೆ ಎಂದು ಸುಲಭವಾದ ಪಾಸ್ವರ್ಡ್ ಗಳನ್ನು ಬಳಸುತ್ತಾರೆ. ಇದು ಹ್ಯಾಕರ್ಸ್ ಗಳಿಗೆ ಪತ್ತೆ ಹಚ್ಚಲು ಸುಲಭವಾದ ತಂತ್ರವಾಗಿದೆ. ಇದೀಗ ಪಾಸ್ವರ್ಡ್ ಗೆ ಸಂಬಂಧಿಸಿದಂತೆ Nord Security ಯು ವಾರ್ಷಿಕ ಅಧ್ಯಯನವನ್ನು ನಡೆಸಿದ್ದು, ಇದರಲ್ಲಿ ಸಾಮಾನ್ಯವಾಗಿ ಎಲ್ಲರೂ ಬಳಸುವಂತಹ ಪಾಸ್ವರ್ಡ್ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಹೌದು. ಪ್ರಪಂಚದಾದ್ಯಂತ ದೇಶಗಳಲ್ಲಿ ಯಾವ ಪಾಸ್‌ವರ್ಡ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ ಎಂಬುದರ ಕುರಿತು Nord Security ವಾರ್ಷಿಕ ಅಧ್ಯಯನವನ್ನು ನಡೆಸುತ್ತದೆ. ಇದರ ಪ್ರಕಾರ 2022 ರಲ್ಲಿ ಸಾಮಾನ್ಯವಾಗಿ ಬಳಸುವ ಪಾಸ್‌ವರ್ಡ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಭಾರತದಲ್ಲಿ ಬಳಸುವ ಮೊದಲ ಸ್ಥಾನದ ಪಾಸ್‌ವರ್ಡ್ ಗಳನ್ನು ನೀಡಲಾಗಿದೆ. ಈ ಪಟ್ಟಿಯಲ್ಲಿ ನಿಮ್ಮ ಪಾಸ್ವರ್ಡ್ ಕೂಡ ಇದ್ದರೆ ನೀವು ಎಚ್ಚರಿಕೆಯಿಂದ ಇರೋದು ಸೂಕ್ತ.

ಬಳಕೆದಾರರು ತಮ್ಮ ಖಾತೆಗಳಿಗೆ ಪಾಸ್‌ವರ್ಡ್ ಆಗಿ ಹೆಚ್ಚಾಗಿ ಇಂಗ್ಲಿಷ್ ಪದದ ಪಾಸ್‌ವರ್ಡ್ ಅನ್ನು ಬಳಸಿದ್ದಾರೆ. ಪಾಸ್​ವರ್ಡ್​ ಪದವನ್ನು ಪಾಸ್​​ವರ್ಡ್​ ಆಗಿ 3.4 ಮಿಲಿಯನ್ ಬಾರಿ ಅಂದರೆ 34 ಲಕ್ಷ ಬಾರಿ ಬಳಸಲಾಗಿದೆ ಎಂದು ಕಂಡುಬಂದಿದೆ. ನಂತರ ಎರಡನೆಯದಾಗಿ “123456” ಮತ್ತು ಮೂರನೆಯದು “12345678” ಈ ರೀತಿಯ ಪಾಸ್​ವರ್ಡ್​ ಅನ್ನು ಬಳಸಿದ್ದಾರೆ ಎಂದು ಹೇಳಿದ್ದಾರೆ.

ನೀವು ಟಾಪ್ 20 ಪಾಸ್‌ವರ್ಡ್‌ಗಳ ವಿವರಗಳನ್ನು ನೋಡುವುದಾದರೆ, ಪಾಸ್‌ವರ್ಡ್, 123456, 12345678, ಬಿಗ್‌ಬಾಸ್ಕೆಟ್, 123456789, pass@123, 1234567890, anmol123, abcd1234, googledummy*2133, googledummy*2213, googledummy , Indiasward@70sword. @123, india123, 12345 ನಂತಹ ಪಾಸ್‌ವರ್ಡ್‌ಗಳಿವೆ. ಇದು ಹೆಚ್ಚಾಗಿ ಬಳಸುವಂತಹ ಪಾಸ್​ವರ್ಡ್​ಗಳಾಗಿವೆ.

ಭಾರತದಲ್ಲಿ ಹೆಚ್ಚು ಬಳಕೆಯಾಗುವ 200 ಪಾಸ್ ವರ್ಡ್ ಗಳ ಪಟ್ಟಿಯನ್ನು ನಾರ್ಡ್ ಸೆಕ್ಯುರಿಟಿ ಬಿಡುಗಡೆ ಮಾಡಿದೆ. ಇದು shopping, qwerty, omsairam, sachin@1234, 123, priyanka, iloveyou, saibaba, computer ನಂತಹ ಸಾಮಾನ್ಯ ಪಾಸ್‌ವರ್ಡ್‌ಗಳನ್ನು ಒಳಗೊಂಡಿದೆ. ಸುಮಾರು 200 ಪಾಸ್‌ವರ್ಡ್‌ಗಳನ್ನು ಹೊಂದಿರುವ ಖಾತೆಗಳನ್ನು ಹ್ಯಾಕ್ ಮಾಡಲು ಹ್ಯಾಕರ್‌ಗಳಿಗೆ ಒಂದು ಸೆಕೆಂಡ್‌ಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಎಂದು ನಾರ್ಡ್ ಸೆಕ್ಯುರಿಟಿ ಬಹಿರಂಗಪಡಿಸಿದೆ. ಹೀಗಾಗಿ, 12 ಅಕ್ಷರಗಳನ್ನು ಹೊಂದಿರುವ ಬಲವಾದ ಪಾಸ್​ವರ್ಡ್​ ಅನ್ನು ರಚಿಸುವುದು ಸೂಕ್ತ.

Leave A Reply

Your email address will not be published.