ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಟ ಅಭಿಷೇಕ್ ಅಂಬರೀಶ್| ಹುಡುಗಿ ಯಾರು? ಮದುವೆ ಯಾವಾಗ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ಸುಮಲತಾ ದಂಪತಿಯ ಏಕೈಕ ಪುತ್ರ ಅಭಿಷೇಕ್ ಅಂಬರೀಷ್ ಶೀಘ್ರದಲ್ಲೇ ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದಾರೆ. ಇದೀಗ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಹುಡುಗಿ ಯಾರು? ಯಾವಾಗ ಮದುವೆ? ಎಂಬ ಪ್ರಶ್ನೆಗಳು ಹರಿದಾಡುತ್ತಿದೆ.

 

ಇನ್ನೂ ಅಭಿಷೇಕ್ ಅಂಬರೀಶ್ ಜೊತೆ ಹಸೆಮಣೆ ಏರೋ ಹುಡುಗಿ ಯಾರಿರಬಹುದು ಎಂಬ ಕುತೂಹಲ, ಕಾತುರದಿಂದ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ನಟ ಅಭಿಷೇಕ್ ಹಿಡಿಯೋ ಹುಡುಗಿ ಬೆಂಗಳೂರು ಮೂಲದವಳಾಗಿದ್ದು, ಖ್ಯಾತ ಮಾಡೆಲ್ ಎಂದು ಹೇಳಲಾಗುತ್ತಿದೆ. 

ಅವಳು ಬದುಕಿರೋದು ಇನ್ನೊಂದೇ ದಿನ| ಅಷ್ಟರೊಳಗೆ ಆಕೆಯದ್ದು ಮಿಲನ ಭರಿತ ಸಮೃದ್ಧ ಜೀವನ !!

ಹಾಗೇ ಈ ಮದುವೆ ಕಂಪ್ಲೀಟ್ ಅರೇಂಜ್ ಮ್ಯಾರೇಜ್ ಎಂದು ತಿಳಿದುಬಂದಿದೆ.

ಮಾಹಿತಿ ಪ್ರಕಾರ ಈಗಾಗಲೇ ನಿಶ್ಚಿತಾರ್ಥ ಡೇಟ್ ಕೂಡ ಫಿಕ್ಸ್ ಆಗಿದ್ದು, ಡಿಸೆಂಬರ್ 11ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ನಟ ಅಭಿಷೇಕ್ ನಿಶ್ಚಿತಾರ್ಥ ನಡೆಯಲಿದೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಅಭಿಷೇಕ್ ಅಂಬರೀಷ್ ಯಾವುದೇ ಮಾಹಿತಿಯನ್ನು ರಿವೀಲ್ ಮಾಡಿಲ್ಲ. ನಿಶ್ಚಿತಾರ್ಥದವರೆಗೂ ಯಾವುದೇ ಮಾಹಿತಿ ತಿಳಿಯಬಾರದು ಎಂಬ ಕಾರಣದಿಂದ ಈ ಬಗ್ಗೆ ಗೌಪ್ಯವಾಗಿ ಇಟ್ಟಿದ್ದಾರೆ ಎನ್ನಲಾಗಿದೆ.

ಸಿಕ್ಸ್ ಸಿಗ್ಮಾ ಕ್ವಾಲಿಟಿ ಸ್ಟ್ಯಾಂಡರ್ಡ್ ಬಗ್ಗೆ ನಿಮಗೆಷ್ಟು ಗೊತ್ತು?

ಅಮರ್ ಸಿನಿಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನಟ ಅಭಿಷೇಕ್ ಅಂಬರೀಷ್ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ.

Leave A Reply

Your email address will not be published.