ಕರ್ನಾಟಕದಲ್ಲಿ ಮತ್ತೆ ಮೆದುಳು ಜ್ವರ : ಲಕ್ಷಣ, ತಡೆಗಟ್ಟುವ ವಿಧಾನ ಮಾಹಿತಿ ಇಲ್ಲಿದೆ ಓದಿ

ರಾಜ್ಯದೆಲ್ಲೆಡೆ ಮೈ ಕೊರೆಯುವ ಚಳಿ ನಡುವೆ ಮಳೆಸುರಿಯುತ್ತಿದ್ದು, ಬಿಸಿಲೆ ಕಾಣದಂತೆ ಭಾಸವಾಗಿದೆ ಈ ಮಧ್ಯೆ ಇದೀಗ ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳಾದ ಜ್ವರ ಶೀತ ಕಾಣಿಸಿಕೊಳ್ಳುತ್ತಿದೆ. ಈ ಜ್ವರದಲ್ಲಿ ಬಹಳಷ್ಟು ವಿಧಗಳಿವೆ. ಡೆಂಗ್ಯೂ, ಮಲೇರಿಯಾ ಹೀಗೆ ಅನೇಕ ಜ್ವರಗಳು ಈಗಾಗಲೇ ದೇಶದೆಲ್ಲೆಡೆ ಮನುಷ್ಯನನ್ನು ಬಿಡದೇ ಕಾಡುತ್ತಿವೆ. ಇದೀಗ ಈ ಜ್ವರಗಳ ಪಟ್ಟಿಗೆ ಹೊಸ ಸೇರ್ಪಡೆ ಮೆದುಳು ಜ್ವರ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಈ ಜ್ವರ ಕಂಡುಬಂದಿಲ್ಲವಾದರೂ  1 ರಿಂದ 15 ವರ್ಷದ ವಯಸ್ಸಿನ ಮಕ್ಕಳನ್ನು ʼಮೆದುಳು ಜ್ವರದಿಂದ ರಕ್ಷಿಸಿʼ ಎಂದು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡಲಾಗುತ್ತಿದೆ. ಒಂದು ಪ್ರದೇಶದಲ್ಲಿ ಒಬ್ಬನಿಗೆ ಜ್ವರ ಬಂತೆಂದರೆ ಸಾಂಕ್ರಾಮಿಕವಾಗಿ ಎಲ್ಲರನ್ನೂ ವ್ಯಾಪಿಸಿಕೊಳ್ಳುತ್ತದೆ. ಅಂತಹ ಜ್ವರಗಳ ಪೈಕಿ ಮೆದುಳು ಜ್ವರವೂ ಒಂದು. ಅಷ್ಟಕ್ಕೂ ಏನಿದು ಮೆದುಳು ಜ್ವರ, ಹೇಗೆ ಬರುತ್ತದೆ ಎಂಬುದನ್ನು ತಿಳಿಯಬೇಕಾದುದು ಅವಶ್ಯವೂ ಆಗಿದೆ ಅವುಗಳ ನಿಯಂತ್ರಣ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ
ವಿಶೇಷ ಸೂಚನೆ :

  • ಮಕ್ಕಳಿಗೂ ಜೆ ಲಸಿಕೆ :  ಆಯ್ದ 10 ಜಿಲ್ಲೆಗಳಲ್ಲಿ ಈ ಲಸಿಕಾಕರಣ ಅಭಿಯಾನದಲ್ಲಿ 1 ರಿಂದ 15 ವರ್ಷಗಳವರೆಗಿನ ಎಲ್ಲಾ ಮಕ್ಕಳಿಗೂ ಜೆ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು
  • ಈ ಹತ್ತು ಜಿಲ್ಲೆಗಳಲ್ಲಿ ಜೆಇ ಲಸಿಕಾ : ಬಾಗಲಕೋಟೆ, ಕಲಬುರಗಿ, ಗದಗ, ಹಾವೇರಿ, ಉಡುಪಿ, ತುಮಕೂರು, ಹಾಸನ, ದಕ್ಷಿಣ ಕನ್ನಡ, ರಾಮನಗರ, ಯಾದಗಿರಿ.

ಮೆದುಳು ಜ್ವರ ನಿಯಂತ್ರಣ ಕ್ರಮ

  1. ಮೆದುಳು ಜ್ವರ

ಮೆದುಳು ಜ್ವರವು ವೈರಾಣುಗಳಿಂದ ಉಂಟಾಗುತ್ತದೆ. ಹೆಚ್ಚಾಗಿ ಮಕ್ಕಳು ಈ ರೋಗಕ್ಕೆ ತುತ್ತಾಗುತ್ತಾರೆ ಕೆಲವರಿಗೆ ನರ ದೌರ್ಬಲ್ಯ ಮತ್ತು ಬುದ್ಧಿ ಮಾಂದ್ಯತೆ ಉಂಟಾಗುವುದು,

  1. ಹರಡುವ ವಿಧಾನ :

ಮೆದುಳು ಜ್ವರದ ವೈರಾಣುಗಳನ್ನು ಹೊಂದಿದ ಹಂದಿ/ಬೆಳ್ಳಕ್ಕಿಯನ್ನು ಕಚ್ಚಿದ ಕ್ಯೂಲೆಕ್ಸ್ ಜಾತಿಯ ಸೊಳೆಗಳು ಮನುಷ್ಯರಿಗೆ ಕಚ್ಚುವುದರಿಂದ ಈ ರೋಗವು ಹರಡುತ್ತದೆ.

  1. ಹರಡುವ ಕಾಲ:

ಸೆಪ್ಟೆಂಬರ್‌ನಿಂದ ಡಿಸೆಂಬರ್ ಮಾಹೆಯವರೆಗೆ ಮೆದುಳುಜ್ವರವು

  1. ರೋಗ ಲಕ್ಷಣಗಳು:

ಪಾರಂಭದಲ್ಲಿ ವಿಪರೀತ ಜ್ವರ, ತಲೆನೋವು, ಕತ್ತಿನ ಬಿಗಿತ, ತಲೆ ಸುತ್ತುವಿಕೆ, ಮೈನಡುಕ ಮತ್ತು ಎಚ್ಚರ ತಪ್ಪುವುದು. ಈ ಲಕ್ಷಣಗಳು ಕಾಣಿಸಿದ ತಕ್ಷಣ ಆಸತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆಪಡೆಯುವುದು.

ಮೆದುಳು ಜ್ವರ ತಡೆಗಟ್ಟಲು ಏನು ಮಾಡಬೇಕು:

*  ಮೆದುಳುಜ್ವರ ನಿರೋಧಕ ಲಸಿಕೆ ಚಾಲ್ತಿಯಲ್ಲಿರುವ ಜಿಲ್ಲೆಗಳಲ್ಲಿ ಮಕ್ಕಳಿಗೆ (9ನೇ ಮತ್ತು 18ನೇ ತಿಂಗಳಲ್ಲಿ) ತಪ್ಪದೇ ಲಸಿಕೆ ಹಾಕಿಸಬೇಕು

  • ಹಂದಿಗಳನ್ನು ಜನರ ವಾಸ ಸ್ಥಳದಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಸ್ಥಳಾಂತರಿಸಬೇಕು.
  • ಈ ರೋಗ ಕಾಣಿಸಿಕೊಂಡ ಸ್ಥಳಗಳಲ್ಲಿ ಹೊರಾಂಗಣ ಕೀಟನಾಶಕ ಧೂಮೀಕರಣ ಮಾಡುವುದು.
  • ಹಂದಿ ಗೂಡುಗಳಿಗೆ ಕೀಟನಾಶಕ ಸಿಂಪಡಣೆ ಮಾಡುವುದು ಮತ್ತು ಸೊಳ್ಳೆ ನಿರೋಧಕ ಜಾಲರಿ ಹಾಕುವುದು. * ತಪ್ಪದೇ ಸೊಳ್ಳೆ ಪರದೆ ಮತ್ತು ಸೊಳ್ಳೆ ನಿರೋಧಕಗಳನ್ನುಉಪಯೋಗಿಸುವುದು.
  • ಸಂಜೆ ವೇಳೆ ಮೈತುಂಬಾ ಬಟ್ಟೆ ಧರಿಸುವುದು. (ವಿಶೇಷವಾಗಿ ಮಕ್ಕಳು )
  • ನೀರು ನಿಂತ ಸ್ಥಳಗಳಲ್ಲಿ ಲಾರ್ವಾಹಾರಿ ಮೀನು ಬಿಡುವುದು
  • ಬೇವಿನ ಮಿಶ್ರಣದ ಗೊಬ್ಬರವನ್ನು ಗದ್ದೆಗಳಲ್ಲಿ ಉಪಯೋಗಿಸುವುದು.

ಈ ಮೇಲಿನ ಕ್ರಮಗಳನ್ನು ಪಾಲಿಸಿ, ಮೆದುಳು ಜ್ವರದಿಂದ ಮುಕ್ತರಾಗಿ, ಸಮುದಾಯದ ಸಹಕಾರದಿಂದ ಮೆದುಳು ಜ್ವರವನ್ನು ತಡೆಗಟ್ಟಬಹುದು.  ಹೆಚ್ಚಿನ ಮಾಹಿತಿಗಾಗಿ: ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ

ಒಂದೆಡೆ ಚುಮುಚುಮು ಚಳಿ..ಇನ್ನೊಂದೆಡೆ ಜಿಡಿಜಿಡಿ ಮಳೆಗಾಲ ಶುರುವಾಗಿದ್ದು,   ಸಾಮಾನ್ಯವಾಗಿ ಈ ಹವಾಮಾನ ವೈಪರಿತ್ಯದಿಂದ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ ಅದರಲ್ಲೂ  ಜ್ವರ ಕಾಣಿಸಿಕೊಳ್ಳುತ್ತದೆ. ಈ ಜ್ವರದಲ್ಲಿ ಬಹಳಷ್ಟು ವಿಧಗಳಿವೆ. ಡೆಂಗ್ಯೂ, ಮಲೇರಿಯಾ ಹೀಗೆ ಅನೇಕ ಜ್ವರಗಳು ಈಗಾಗಲೇ ದೇಶದೆಲ್ಲೆಡೆ ಮನುಷ್ಯನನ್ನು ಬಿಡದೇ ಕಾಡುತ್ತಿವೆ. ಇದೀಗ ಈ ಜ್ವರಗಳ ಪಟ್ಟಿಗೆ ಹೊಸ ಸೇರ್ಪಡೆ ಮೆದುಳು ಜ್ವರ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಈ ಜ್ವರ ಕಂಡುಬಂದಿಲ್ಲವಾದರೂ  1 ರಿಂದ 15 ವರ್ಷದ ವಯಸ್ಸಿನ ಮಕ್ಕಳನ್ನು ʼಮೆದುಳು ಜ್ವರದಿಂದ ರಕ್ಷಿಸಿʼ ಎಂದು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡಲಾಗುತ್ತಿದೆ…

ಕಾಯಿಲೆಗಳು ಹೇಳಿಕೇಳಿ ಬರುವಂತದ್ದಲ್ಲ. ಒಂದು ಪ್ರದೇಶದಲ್ಲಿ ಒಬ್ಬನಿಗೆ ಜ್ವರ ಬಂತೆಂದರೆ ಸಾಂಕ್ರಾಮಿಕವಾಗಿ ಎಲ್ಲರನ್ನೂ ವ್ಯಾಪಿಸಿಕೊಳ್ಳುತ್ತದೆ. ಅಂತಹ ಜ್ವರಗಳ ಪೈಕಿ ಮೆದುಳು ಜ್ವರವೂ ಒಂದು. ಅಷ್ಟಕ್ಕೂ ಏನಿದು ಮೆದುಳು ಜ್ವರ, ಹೇಗೆ ಬರುತ್ತದೆ ಎಂಬುದನ್ನು ತಿಳಿಯಬೇಕಾದುದು ಅವಶ್ಯವೂ ಆಗಿದೆ. ಜ್ವರಗಳ ರಾಜ ಎಂದೇ ಮೆದುಳು ಜ್ವರವನ್ನು ಉಲ್ಲೇಖೀಸಲಾಗುತ್ತದೆ.

ವಿಶೇಷ ಸೂಚನೆ :

  • ಮಕ್ಕಳಿಗೂ ಜೆ ಲಸಿಕೆ :  ಆಯ್ದ 10 ಜಿಲ್ಲೆಗಳಲ್ಲಿ ಈ ಲಸಿಕಾಕರಣ ಅಭಿಯಾನದಲ್ಲಿ 1 ರಿಂದ 15 ವರ್ಷಗಳವರೆಗಿನ ಎಲ್ಲಾ ಮಕ್ಕಳಿಗೂ ಜೆ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು
  • ಈ ಹತ್ತು ಜಿಲ್ಲೆಗಳಲ್ಲಿ ಜೆಇ ಲಸಿಕಾ : ಬಾಗಲಕೋಟೆ, ಕಲಬುರಗಿ, ಗದಗ, ಹಾವೇರಿ, ಉಡುಪಿ, ತುಮಕೂರು, ಹಾಸನ, ದಕ್ಷಿಣ ಕನ್ನಡ, ರಾಮನಗರ, ಯಾದಗಿರಿ.

ಮೆದುಳು ಜ್ವರ ನಿಯಂತ್ರಣ ಕ್ರಮ

  1. ಮೆದುಳು ಜ್ವರ

ಮೆದುಳು ಜ್ವರವು ವೈರಾಣುಗಳಿಂದ ಉಂಟಾಗುತ್ತದೆ. ಹೆಚ್ಚಾಗಿ ಮಕ್ಕಳು ಈ ರೋಗಕ್ಕೆ ತುತ್ತಾಗುತ್ತಾರೆ ಕೆಲವರಿಗೆ ನರ ದೌರ್ಬಲ್ಯ ಮತ್ತು ಬುದ್ಧಿ ಮಾಂದ್ಯತೆ ಉಂಟಾಗುವುದು,

  1. ಹರಡುವ ವಿಧಾನ :

ಮೆದುಳು ಜ್ವರದ ವೈರಾಣುಗಳನ್ನು ಹೊಂದಿದ ಹಂದಿ/ಬೆಳ್ಳಕ್ಕಿಯನ್ನು ಕಚ್ಚಿದ ಕ್ಯೂಲೆಕ್ಸ್ ಜಾತಿಯ ಸೊಳೆಗಳು ಮನುಷ್ಯರಿಗೆ ಕಚ್ಚುವುದರಿಂದ ಈ ರೋಗವು ಹರಡುತ್ತದೆ.

  1. ಹರಡುವ ಕಾಲ:

ಸೆಪ್ಟೆಂಬರ್‌ನಿಂದ ಡಿಸೆಂಬರ್ ಮಾಹೆಯವರೆಗೆ ಮೆದುಳುಜ್ವರವು

  1. ರೋಗ ಲಕ್ಷಣಗಳು:

ಪಾರಂಭದಲ್ಲಿ ವಿಪರೀತ ಜ್ವರ, ತಲೆನೋವು, ಕತ್ತಿನ ಬಿಗಿತ, ತಲೆ ಸುತ್ತುವಿಕೆ, ಮೈನಡುಕ ಮತ್ತು ಎಚ್ಚರ ತಪ್ಪುವುದು. ಈ ಲಕ್ಷಣಗಳು ಕಾಣಿಸಿದ ತಕ್ಷಣ ಆಸತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆಪಡೆಯುವುದು.

ಮೆದುಳು ಜ್ವರ ತಡೆಗಟ್ಟಲು ಏನು ಮಾಡಬೇಕು:

*  ಮೆದುಳುಜ್ವರ ನಿರೋಧಕ ಲಸಿಕೆ ಚಾಲ್ತಿಯಲ್ಲಿರುವ ಜಿಲ್ಲೆಗಳಲ್ಲಿ ಮಕ್ಕಳಿಗೆ (9ನೇ ಮತ್ತು 18ನೇ ತಿಂಗಳಲ್ಲಿ) ತಪ್ಪದೇ ಲಸಿಕೆ ಹಾಕಿಸಬೇಕು

  • ಹಂದಿಗಳನ್ನು ಜನರ ವಾಸ ಸ್ಥಳದಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಸ್ಥಳಾಂತರಿಸಬೇಕು.
  • ಈ ರೋಗ ಕಾಣಿಸಿಕೊಂಡ ಸ್ಥಳಗಳಲ್ಲಿ ಹೊರಾಂಗಣ ಕೀಟನಾಶಕ ಧೂಮೀಕರಣ ಮಾಡುವುದು.
  • ಹಂದಿ ಗೂಡುಗಳಿಗೆ ಕೀಟನಾಶಕ ಸಿಂಪಡಣೆ ಮಾಡುವುದು ಮತ್ತು ಸೊಳ್ಳೆ ನಿರೋಧಕ ಜಾಲರಿ ಹಾಕುವುದು. * ತಪ್ಪದೇ ಸೊಳ್ಳೆ ಪರದೆ ಮತ್ತು ಸೊಳ್ಳೆ ನಿರೋಧಕಗಳನ್ನುಉಪಯೋಗಿಸುವುದು.
  • ಸಂಜೆ ವೇಳೆ ಮೈತುಂಬಾ ಬಟ್ಟೆ ಧರಿಸುವುದು. (ವಿಶೇಷವಾಗಿ ಮಕ್ಕಳು )
  • ನೀರು ನಿಂತ ಸ್ಥಳಗಳಲ್ಲಿ ಲಾರ್ವಾಹಾರಿ ಮೀನು ಬಿಡುವುದು
  • ಬೇವಿನ ಮಿಶ್ರಣದ ಗೊಬ್ಬರವನ್ನು ಗದ್ದೆಗಳಲ್ಲಿ ಉಪಯೋಗಿಸುವುದು.

ಈ ಮೇಲಿನ ಕ್ರಮಗಳನ್ನು ಪಾಲಿಸಿ, ಮೆದುಳು ಜ್ವರದಿಂದ ಮುಕ್ತರಾಗಿ, ಸಮುದಾಯದ ಸಹಕಾರದಿಂದ ಮೆದುಳು ಜ್ವರವನ್ನು ತಡೆಗಟ್ಟಬಹುದು.  ಹೆಚ್ಚಿನ ಮಾಹಿತಿಗಾಗಿ: ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ.

ವರದಿ : ಹೊಸಗನ್ನಡ

Leave A Reply

Your email address will not be published.