ಹೆಣ್ಮಕ್ಕಳೇ ಗಮನಿಸಿ | ಮುಟ್ಟಾದಾಗ ತುಂಬಾ ನೋವಾಗುತ್ತದೆಯೇ ? ನೋವು ಕಡಿಮೆ ಮಾಡುವ 5 ಆಹಾರ ಇಲ್ಲಿದೆ

ಹೆಣ್ಣು ಮಕ್ಕಳು ವಯಸ್ಸಿಗೆ ಬಂದಾಗ ಮುಟ್ಟು ಆಗುವುದು ಸಹಜ. ಇದೊಂದು ಹೆಣ್ಣು ಮಕ್ಕಳ ಪ್ರಕೃತಿ ದತ್ತವಾದ ಕ್ರಿಯೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಮುಟ್ಟಿನ ತೊಂದರೆ ಹೆಚ್ಚು ಸಾಮಾನ್ಯವಾಗುತ್ತಿದೆ. ಅದಲ್ಲದೆ ಇಳಿ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳು ಮುಟ್ಟು ಆಗುತ್ತಿದ್ದಾರೆ. ಈ ಸಮಸ್ಯೆಗಳಿಗೆ ಬದಲಾದ ಜೀವನಶೈಲಿ ಹಾಗೂ ಆಹಾರ ಕ್ರಮ ಪ್ರಮುಖ ಕಾರಣವಾಗಿದೆ. ಇದು ನಿಮ್ಮ ಮಾಸಿಕ ಋತು ಸ್ರಾವದ ಸಮಯದಲ್ಲಿ ತಲೆನೋವು, ವಾಕರಿಕೆ, ಮೈಗ್ರೇನ್, ಮೂಡ್ ಸ್ವಿಂಗ್ಸ್, ದೇಹದ ಸೆಳೆತ ಮುಂತಾದ ಸಮಸ್ಯೆಗೆ ಕಾರಣವಾಗುತ್ತದೆ.

ಪಿರಿಯಡ್ ಅಥವಾ ನಿಮ್ಮ ಮುಟ್ಟಿನ ಸಮಯದಲ್ಲಿ ಕಿಬೊಟ್ಟೆ ನೋವು, ಸೆಳೆತ, ಮೈಗ್ರೇನ್, ವಾಕರಿಕೆ, ಮೂಡ್ ಸ್ವಿಂಗ್ಸ್ ಇತ್ಯಾದಿಗಳನ್ನು ಕಡಿಮೆ ಮಾಡಲು ಈ ಸಲಹೆ ಅನುಸರಿಸಿ :

  • ನಿಮ್ಮ ಋತು ಸ್ರಾವದ ನೋವಿನ ದಿನಗಳಲ್ಲಿ ಕೈಬೆರಳೆಣಿಕೆಯಷ್ಟು ಗೋಡಂಬಿ, ಕಡಲೆಕಾಯಿಗಳನ್ನು ಸೇವಿಸಿ. ಸಿಹಿ ತಿನ್ನುವ ಬಯಕೆ ಮತ್ತು ಮೂಡ್ ಸ್ವಿಂಗ್‌ಗಳನ್ನು ನಿವಾರಿಸಲು ಈ ಬೀಜಗಳ ಜೊತೆಗೆ ಬೆಲ್ಲವನ್ನು ಹಾಕಿ ಸೇವಿಸುವುದು ಉತ್ತಮ.
  • ರಾಗಿ ಆರೋಗ್ಯಕ್ಕೆ ಒಳ್ಳೆಯದು. ರಾಗಿಯಿಂದ ಮಾಡಿದ ದೋಸೆ, ರೊಟ್ಟಿಯಂತೆ ಆಹಾರವನ್ನು ಸೇವಿಸಿ. ಇದು ನಿಮ್ಮ ಅತಿಯಾದ ಮುಟ್ಟಿನ ಸಮಯದಲ್ಲಿ ಕಿಬ್ಬೊಟ್ಟೆಯ ನೋವನ್ನು ಕಡಿಮೆ ಮಾಡಿ. ನಿಮ್ಮನ್ನು ತಂಪಾಗಿರಿಸುತ್ತದೆ
  • ನೀವು ಕಪ್ಪು ಒಣದ್ರಾಕ್ಷಿ ಮತ್ತು ಕೇಸರಿಯು ಮುಟ್ಟಿನ ಸಮಯದ ನೋವು ಮತ್ತು ಸೆಳೆತಕ್ಕೆ ಸಹಾಯ ಮಾಡುತ್ತದೆ. ಆದ್ದರಿಂದ ರಾತ್ರಿ ಹೊತ್ತು ನೆನೆಸಿಟ್ಟ ಒಣದ್ರಾಕ್ಷಿ ಕೇಸರಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದು ತಕ್ಷಣಕ್ಕೆ ನಿಮಗೆ ಉಪಶಮನ ನೀಡದ್ದಿದ್ದರೂ ಕೂಡ ಕಾಲ ಕ್ರಮೇಣ ನೀವು ಇದನ್ನು ರೂಢಿಸಿಕೊಂಡು ಹೋದಂತೆ ಮುಟ್ಟಿನ ಅವಧಿ ನೋವಿನಿಂದ ದೂರ ಮಾಡುತ್ತದೆ.
  • ಪ್ರತಿ ಊಟಕ್ಕೆ ಒಂದು ಚಮಚ ತುಪ್ಪವನ್ನು ಸೇರಿಸಿ. ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದಲ್ಲಿ ತುಪ್ಪವನ್ನು ಸೇರಿಸುವುದರಿಂದ ನಿಮ್ಮ ಮುಟ್ಟಿನ ಸಮಯದಲ್ಲಿ ಸಂಭವಿಸುವ ಸೆಳೆತ ಮತ್ತು ವಾಕರಿಕೆಗಳ ಸಂಭವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಮುಟ್ಟಿನ ಸಮಯದಲ್ಲಿ ಕಿಬ್ಬೊಟ್ಟೆಯ ನೋವಿನಿಂದ ಬಳಲುತ್ತಿರುವವರಿಗೆ ಮೊಸರನ್ನವು ಒಂದು ಉತ್ತಮ ಊಟದ ಆಯ್ಕೆಯಾಗಿದೆ. ದೇಹಕ್ಕೆ ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಜೊತೆಗೆ ನಿಮ್ಮ ಈ ಊಟದ ರುಚಿಯನ್ನು ಹೆಚ್ಚಿಸಲು ದಾಳಿಂಬೆ ಬೀಜಗಳನ್ನು ಕೂಡ ಒಟ್ಟಿಗೆ ಸೇರಿಸಿಕೊಳ್ಳಿ. ಮನೆಯಲ್ಲಿ ಕರಿದ ಹಪ್ಪಳ ಕೂಡ ಸೇವಿಸಬಹುದು.

ಈ ಮೇಲಿನ ಸಲಹೆ ಅನುಸರಿಸಿ ನಿಮ್ಮ ಮುಟ್ಟಿನ ಸಮಯದ ನೋವನ್ನು ಸುಧಾರಿಸಿಕೊಳ್ಳಬಹುದು.

Leave A Reply

Your email address will not be published.