ಹಿಂದೂ ಹುಡುಗಿಯರು ಎಚ್ಚರಿಕೆ ವಹಿಸಿ, ಆತುರದಲ್ಲಿ ಪ್ರೀತಿಗೆ ಮೋಸ ಹೋಗಿ ಪೀಸ್ ಪೀಸ್ ಆಗಬೇಡಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ರಾಮನಗರದಲ್ಲಿ ಹಿಂದು ಯುವತಿಯರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಈ ನಡುವೆ ಪ್ರಮೋದ್ ಮುತಾಲಿಕ್ ಅವರು ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಪ್ರಸ್ತಾಪಿಸಿದ್ದು, ಅದರಲ್ಲು ಕೂಡಾ ಮಂಗಳೂರು ಸ್ಫೋಟ, ಶ್ರದ್ಧಾ ಹತ್ಯೆ ಪ್ರಕರಣ, ಮತಾಂತರ ಹೆಚ್ಚಳದ ಬಗ್ಗೆ ಆತಂಕ ಹೊರ ಹಾಕಿದ್ದು ಅಲ್ಲದೆ, ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಮಂಗಳೂರು ಕುಕ್ಕರ್ ಸ್ಫೋಟಕ್ಕೆ ತಮಿಳುನಾಡಿನ ಎಸ್‌ಡಿಪಿಐ ಲಿಂಕ್ ಆಗಿದೆ ಎನ್ನಲಾಗುತ್ತಿದ್ದು, ಕರಾವಳಿ ಭಾಗದಲ್ಲಿ ಇಸ್ಲಾಮಿಕ್ ಗೂಂಡಾದ ಪ್ರಭಾವ ಹೆಚ್ಚಾಗುತ್ತಿದ್ದು, ಪೊಲೀಸರಿಗೆ ಇದು ಗೊತ್ತಿದ್ದರೂ ಈ ಬಗ್ಗೆ ನಿರ್ಲಕ್ಷ್ಯ ಮಾಡಿ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ.
ಒಂದು ಘಟನೆ ನಡೆದಾಗ ಮಾತ್ರ ಕಾರ್ಯಾಚರಣೆ ಮಾಡುವ ಬದಲಿಗೆ, ರಾಜ್ಯ ಸರ್ಕಾರ ಜಾಗೃತರಾಗಿ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಯಾವುದೇ ಘಟನೆ ಆದ ಬಳಿಕ ತನಿಖೆ ಮಾಡಿ ಪ್ರಯೋಜನವಿಲ್ಲ ವೆಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಈ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಮುತಾಲಿಕ್ ಅವರು, ಶಂಕಿತ ಉಗ್ರ ಶಾರೀಕ್ ಈ ಹಿಂದೆ ಬಂಧನವಾಗಿದ್ದ ವ್ಯಕ್ತಿಯಾಗಿದ್ದು, ಆತನ ಬಿಡುಗಡೆ ಮಾಡದೆ ಇದ್ದಿದ್ದರೆ, ಸ್ಫೋಟ ಆಗುತ್ತಾ ಇರಲಿಲ್ಲ ಜೊತೆಗೆ ಸರ್ಕಾರ ಕೇವಲ ಚುನಾವಣೆ, ಅಧಿಕಾರ ಅಂತ ಅಲ್ಲದೆ, ವಿರೋಧ ಪಕ್ಷದ ಟೀಕೆ ಮಾಡಿ ಕೂರಬಾರದು ಎಂದು ಎಚ್ಚರಿಸಿದ್ದಾರೆ.
ವೋಟ್‌ಗೋಸ್ಕರ ಭಯೋತ್ಪಾದಕತೆಗೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ದೂರಿದ ಮುತಾಲಿಕ್ ಅವರು, ವಿರೋಧ ಪಕ್ಷದವರು ನಿಮ್ಮ ನೀಚ ಬುದ್ದಿ ಬಿಟ್ಟು ಸರ್ಕಾರ ಮಂಗಳೂರಿನ ಕುಕ್ಕರ್ ಸ್ಫೋಟ ಪ್ರಕರಣದ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.
ಕೇರಳದ ಗಡಿ, ತಮಿಳುನಾಡು ಗಡಿ ಭಾಗದಲ್ಲಿ ಎಚ್ಚರಿಕೆ ವಹಿಸಬೇಕು. ಅಲ್ಲದೆ, ಸೂಕ್ಷ್ಮ ಪ್ರದೇಶಗಳಲ್ಲಿ ಎನ್ಐಎ ಶಾಖೆ ಸ್ಥಾಪನೆ ಮಾಡಬೇಕು ಎಂದು ಹೇಳಿದ್ದು, ದೇಶ, ರಾಜ್ಯದ ರಕ್ಷಣೆ ಬಗ್ಗೆ ಚಿಂತನೆ ಮಾಡಿ ಎಂದಿದ್ದಾರೆ.
ಇದರ ಜೊತೆಗೆ ದೆಹಲಿಯ ಶ್ರದ್ದಾ ಪ್ರಕರಣದ ಬಗ್ಗೆ
ಪ್ರತಿಕ್ರಿಯೆ ನೀಡಿದ ಅವರು, ಹಿಂದೂ ಹುಡುಗಿಯರು ಎಚ್ಚರಿಕೆ ವಹಿಸಿ ಎಂದು ಹೇಳಿದ್ದು ಅಲ್ಲದೆ, ಆತುರದಲ್ಲಿ ಪ್ರೀತಿಗೆ ಮೋಸ ಹೋಗಿ ಪೀಸ್ ಪೀಸ್ ಆಗಬೇಡಿ ಎಂದು ಎಚ್ಚರಿಕೆಯ ಮಾತು ನೀಡಿದ್ದು, ದೆಹಲಿಯ ಘಟನೆಯಿಂದ ಎಲ್ಲರೂ ಎಚ್ಚೆತ್ತುಕೊಳ್ಳಿ ಜೊತೆಗೆ ಪ್ರೀತಿ ಮಾಡುವ ಮುನ್ನ ಯೋಚಿಸಿ ಎಂದು ಹೇಳಿದ್ದಾರೆ. ಇದರ ಜೊತೆಗೆ ಪೋಷಕರು ಕೂಡಾ ಈ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಕೋರಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಗೆ ಮುತಾಲಿಕ್ ಅವರು ಸ್ಪರ್ಧೆ ಮಾಡುವ ಕುರಿತು ಮಾಹಿತಿ ನೀಡಿದ್ದು, ಈ ಬಾರಿ ಸ್ವತಂತ್ರವಾಗಿ ಸ್ಪರ್ಧೆ ಮಾಡುವ ಬಗ್ಗೆ ರಾಮನಗರದಲ್ಲಿ ಪ್ರಮೋದ್ ಮುತಾಲಿಕ್ ಅವರು ಪುನರುಚ್ಛರಿಸಿದ್ದಾರೆ. ಹಿಂದೂಗಳ ಹಿತದೃಷ್ಟಿಯಿಂದ ಸ್ಪರ್ಧೆ ಮಾಡಲಿದ್ದು, ಹಿಂದುತ್ವಕ್ಕೆ ನ್ಯಾಯ ಕೊಡಿಸಲು ನಾನು ಸ್ವತಂತ್ರವಾಗಿ ನಿಲ್ಲುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ.