ATM ಕಾರ್ಡ್ ಜೊತೆ ಉಚಿತ ವಿಮೆ ಲಭ್ಯ | ಬರೋಬ್ಬರಿ 5 ಲಕ್ಷ ಕ್ಲೈಮ್ ಮಾಡಬಹುದು!

ಹೇಳಿ ಕೇಳಿ ಇದು ಡಿಜಿಟಲ್ ಯುಗ..ಅದರಲ್ಲೂ ಕೂಡ ಇಂದಿನ ಕಾಲದಲ್ಲಿ ಮೊಬೈಲ್ ನಲ್ಲೆ ಕುಳಿತು ಬೆರಳಿನ ತುದಿಯಲ್ಲೇ ಬ್ಯಾಂಕಿಂಗ್ , ಶಾಪಿಂಗ್ ಎಲ್ಲ ಕೆಲಸಗಳು ಕ್ಷಣ ಮಾತ್ರದಲ್ಲಿಯೇ ಆಗುತ್ತಿವೆ. ದೇಶದ ಹೆಚ್ಚಿನ ಜನರು ಡೆಬಿಟ್ ಕಾರ್ಡ್ ಬಳಸುತ್ತಿದ್ದು, ಹಿಂದಿನಂತೆ ಪರ್ಸ್ ಅಥವಾ ವ್ಯಾಲೆಟ್ ನಲ್ಲಿ ನಗದಿನ ಬದಲಿಗೆ ಆ ಜಾಗವನ್ನು ಡೆಬಿಟ್, ಕ್ರೆಡಿಟ್ ಕಾರ್ಡ್ ಗಳು ಭರ್ತಿ ಮಾಡಿವೆ.

ದೊಡ್ಡ ಪ್ರಮಾಣದ ಡೆಬಿಟ್ ಕಾರ್ಡ್ಗಳ ಬಳಕೆಯು ನಗದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಡಿಜಿಟಲ್ ವ್ಯವಹಾರಗಳನ್ನು ಬೆಂಬಲಿಸಿದೆ. ಆದರೆ, ಡೆಬಿಟ್ ಕಾರ್ಡ್ ಹೊಂದಿದ್ದರು ಕೂಡ ಅದರಿಂದ ಲಭ್ಯವಿರುವ ಉತ್ತಮ ಸೌಲಭ್ಯದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.ಹಾಗಾದ್ರೆ , ಡೆಬಿಟ್ ಕಾರ್ಡ್ ಶಾಪಿಂಗ್ ಅಥವಾ ಎಟಿಎಂನಿಂದ ಹಣವನ್ನ ಹಿಂಪಡೆಯುವ ಸೌಲಭ್ಯದ ಜೊತೆಗೆ ಬೇರೆ ಯಾವ ಸೌಲಭ್ಯ ದೊರೆಯಲಿದೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ಡೆಬಿಟ್ ಕಾರ್ಡ್ ಮೂಲಕ ಉಚಿತ ವಿಮೆಯೂ ಲಭ್ಯವಿದ್ದು, ಆದರೆ, ಈ ಮಾಹಿತಿ ಬಗ್ಗೆ ತಿಳಿಯದೆ ಇರುವುದರಿಂದ ಹೆಚ್ಚಿನ ಜನರು ಉಚಿತವಾಗಿ ದೊರೆಯುವ ಅಗತ್ಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಡೆಬಿಟ್/ಎಟಿಎಂ ಕಾರ್ಡ್’ನಲ್ಲಿ ವಿಮೆ.!

ಬ್ಯಾಂಕ್ ಗ್ರಾಹಕರಿಗೆ ಡೆಬಿಟ್ / ಎಟಿಎಂ ಕಾರ್ಡ್ ನೀಡಿದ ತಕ್ಷಣ, ಅದರೊಂದಿಗೆ ಗ್ರಾಹಕರು ಅಪಘಾತ ವಿಮೆ ಅಥವಾ ಜೀವ ವಿಮೆಯ ಸೌಲಭ್ಯ ಕೂಡ ದೊರೆಯುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವೆಬ್ಸೈಟ್ ಮಾಹಿತಿಯ ಅನ್ವಯ, ವೈಯಕ್ತಿಕ ಅಪಘಾತ ವಿಮೆ (Death) ವಾಯುರಹಿತ ವಿಮೆಯು ಡೆಬಿಟ್ ಕಾರ್ಡ್ ಹೊಂದಿರುವವರಿಗೆ ಅಕಾಲಿಕ ಮರಣದ ವಿರುದ್ಧ ವಿಮೆಯನ್ನು ನೀಡಲಾಗುತ್ತದೆ. ಡೆಬಿಟ್ ಕಾರ್ಡ್ ಹೊಂದಿರುವವರು ಅಪಘಾತದಲ್ಲಿ ಸತ್ತರೆ, ಅವರ ನಾಮಿನಿ ಸಂಬಂಧಪಟ್ಟ ಬ್ಯಾಂಕ್ಗೆ ಹೋಗಿ ವಿಮೆಯನ್ನು ಪಡೆಯಬಹುದಾಗಿದೆ.

ಇದಕ್ಕಾಗಿ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು, ನಾಮಿನಿಯು ಮರಣ ಪ್ರಮಾಣಪತ್ರ, ಎಫ್‌ಐಆರ್ನ ಪ್ರತಿ, ಅವಲಂಬಿತ ಪ್ರಮಾಣಪತ್ರ, ಮೃತರ ಪ್ರಮಾಣಪತ್ರದ ಮೂಲ ಪ್ರತಿಗಳ ದಾಖಲೆಯನ್ನು ಸಲ್ಲಿಸಬೇಕು.ವಿಮಾ ಕವರ್ ಕಾರ್ಡ್ ನಿಂದ ಕಾರ್ಡ್ಗೆ ಬದಲಾಗುತ್ತದೆ ಎನ್ನಲಾಗಿದೆ.

SBI ಗೋಲ್ಡ್ (Mastercard/Visa) ಕಾರ್ಡ್ ಹೊಂದಿದ್ದವರು 2,00,000 ರೂಪಾಯಿಯ ವಿಮೆ ಅಲ್ಲದೆ, ಬ್ಯಾಂಕ್ ಪ್ರಕಾರ, ಯಾವುದೇ ಚಾನಲ್ ATM, POS, E-COMನಲ್ಲಿ ಅಪಘಾತದ ದಿನಾಂಕದಿಂದ ಕಳೆದ 90 ದಿನಗಳಲ್ಲಿ ಕಾರ್ಡ್’ ಅನ್ನು ಒಮ್ಮೆ ಬಳಸಿದಾಗ ಈ ವಿಮಾ ರಕ್ಷಣೆಯನ್ನು ಪಡೆಯಬಹುದು. ಆದರೆ, ಇದರ ಬಗ್ಗೆ ಮಾಹಿತಿ ಕೊರತೆಯಿಂದ ಹೆಚ್ಚಿನ ಜನರು ಈ ವಿಮೆಯನ್ನು ಪಡೆದುಕೊಳ್ಳಲು ವಂಚಿತರಾಗುತ್ತಿದ್ದಾರೆ.

ಸಾಮಾನ್ಯವಾಗಿ, ಒಬ್ಬ ವ್ಯಕ್ತಿಯು ಯಾವುದೇ ಸರ್ಕಾರಿ ಅಥವಾ ಸರ್ಕಾರೇತರ ಬ್ಯಾಂಕ್ ಎಟಿಎಂ ಅನ್ನು ಕನಿಷ್ಠ 45 ದಿನಗಳವರೆಗೆ ಬಳಸುತ್ತಿದ್ದರೆ, ಆಗ ಆತ ಕಾರ್ಡ್’ನೊಂದಿಗೆ ಒದಗಿಸಲಾದ ವಿಮಾ ಸೇವೆಗೆ ಅರ್ಹನಾಗುತ್ತಾನೆ ಎನ್ನಲಾಗಿದೆ. ಇದಲ್ಲದೆ, ವಿವಿಧ ಬ್ಯಾಂಕ್ಗಳು ಇದಕ್ಕೆ ವಿಭಿನ್ನ ಅವಧಿಗಳನ್ನ ನಿಗದಿಪಡಿಸಿದ್ದು, ಬ್ಯಾಂಕ್ಗಳು ಗ್ರಾಹಕರಿಗೆ ಹಲವಾರು ರೀತಿಯ ಡೆಬಿಟ್ ಕಾರ್ಡ್’ಗಳನ್ನು ನೀಡುತ್ತಾರೆ. ಎಟಿಎಂ ಕಾರ್ಡ್’ನಲ್ಲಿ ಲಭ್ಯವಿರುವ ವಿಮೆಯ ಮೊತ್ತವನ್ನೂ ಅದರ ವರ್ಗಕ್ಕೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ.

ಗ್ರಾಹಕರು ಕ್ಲಾಸಿಕ್ ಕಾರ್ಡ್’ನಲ್ಲಿ ಒಂದು ಲಕ್ಷ ರೂಪಾಯಿ, ಪ್ಲಾಟಿನಂ ಕಾರ್ಡ್’ನಲ್ಲಿ ಎರಡು ಲಕ್ಷ ರೂಪಾಯಿ, ಸಾಮಾನ್ಯ ಮಾಸ್ಟರ್ ಕಾರ್ಡ್’ನಲ್ಲಿ 50 ಸಾವಿರ ರೂಪಾಯಿ, ಪ್ಲಾಟಿನಂ ಮಾಸ್ಟರ್ ಕಾರ್ಡ್ ಮತ್ತು ವೀಸಾ ಕಾರ್ಡ್’ನಲ್ಲಿ ಐದು ಲಕ್ಷ ರೂಪಾಯಿಗಳನ್ನ ಪಡೆಯಬಹುದಾಗಿದೆ. ವೀಸಾ ಕಾರ್ಡ್’ನಲ್ಲಿ 1.5-2 ಲಕ್ಷ ರೂಪಾಯಿಗಳವರೆಗೆ ವಿಮಾ ರಕ್ಷಣೆಯನ್ನ ಒದಗಿಸಲಾಗಿದೆ.

ಬ್ಯಾಂಕುಗಳಿಂದ, ಪ್ರಧಾನಮಂತ್ರಿ ಜನ್-ಧನ್ ಯೋಜನೆ ಅಡಿಯಲ್ಲಿ, ಗ್ರಾಹಕರು ರುಪೇ ಕಾರ್ಡ್ ವಿಮೆಯಲ್ಲಿಯೂ ಸಹ ಒಂದರಿಂದ ಎರಡು ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ಪಡೆಯಬಹುದಾಗಿದ್ದು ಜೊತೆಗೆ ಇದು ತೆರೆದ ಖಾತೆಗಳಲ್ಲಿ ಕೂಡ ಪ್ರಯೋಜನವನ್ನು ಪಡೆಯಬಹುದಾಗಿದೆ.

Leave A Reply

Your email address will not be published.