ಪಶ್ಚಿಮ ವಲಯದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ

ಮಂಗಳೂರು : ಪಶ್ಚಿಮ ವಲಯ ವ್ಯಾಪ್ತಿಯ ಪೊಲೀಸ್ ಠಾಣೆಗಳ ಪಿಎಸ್‌ಐಗಳನ್ನು ವರ್ಗಾವಣೆಗೊಳಿಸಿ ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕರು ಆದೇಶಿಸಿದ್ದಾರೆ.

ಪಶ್ಚಿಮ ವಲಯ ಕಚೇರಿಯಲ್ಲಿದ್ದ ಗಾಯತ್ರಿ ಅವರು ಚಿಕ್ಕಮಗಳೂರು ಮಹಿಳಾ ಠಾಣೆಗೆ, ಪಶ್ಚಿಮ ವಲಯ ಕಚೇರಿಯಲ್ಲಿದ್ದ ನಿತ್ಯಾನಂದ ಗೌಡ ಪಿಡಿ ಅವರು ದ.ಕ. ಸೆನ್ ಠಾಣೆಗೆ, ತರೀಕೆರೆ ಠಾಣೆಯಲ್ಲಿದ್ದ ಅನಿಲ್ ಕುಮಾರ್ ಟಿ.ನಾಯ್ಕ ಅವರು ಶಿರ್ವ ಠಾಣೆಗೆ, ಮಣಿಪಾಲ ಠಾಣೆಯಲ್ಲಿದ್ದ ರಾಜಶೇಖರ್ ವಂದಲಿಯವರು ಬ್ರಹ್ಮಾವರ ಠಾಣೆಗೆ, ಮಲ್ಪೆ ಠಾಣೆಯಲ್ಲಿದ್ದ ಸಕ್ತಿವೇಲು ಅವರು ಉಡುಪಿ ಸಂಚಾರ ಠಾಣೆಗೆ, ಬ್ರಹ್ಮಾವರ ಠಾಣೆಯಲ್ಲಿದ್ದ ಗುರುನಾಥ್ ಹಾದಿಮನಿ ಅವರು ಮಲ್ಪೆ ಠಾಣೆಗೆ, ಉಡುಪಿ ಸಂಚಾರ ಠಾಣೆಯಲ್ಲಿದ್ದ ಅಬ್ದುಲ್ ಖಾದರ್ ಅವರು ಮಣಿಪಾಲ ಠಾಣೆಗೆ, ಉಡುಪಿ ಎಸ್‌ಡಿಆರ್‌ಎಫ್‌ನಲ್ಲಿದ್ದ ರವಿ ಬಸಪ್ಪ ಕಾರಗಿ ಅವರು ಉಡುಪಿ ನಗರ ಠಾಣೆಗೆ, ಉಡುಪಿ ಎಸ್‌ಡಿಆರ್‌ಎಫ್‌ನಲ್ಲಿದ್ದ ನೂತನ್ ಡಿ.ಇ. ಅವರು ಕುಂದಾಪುರ ಸಂಚಾರ ಠಾಣೆಗೆ, ಚಿಕ್ಕಮಗಳೂರು ಎಸ್‌ಡಿಆರ್‌ಎಫ್‌ನಲ್ಲಿದ್ದ ಬಾಬುದ್ದೀನ್ ಅವರು ಚಿಕ್ಕಮಗಳೂರು ನಗರ ಠಾಣೆಗೆ, ವಿಟ್ಲ ಠಾಣೆಯಲ್ಲಿದ್ದ ಅಭಿಷೇಕ್ ಕೆ.ಅವರು ತರೀಕೆರೆ ಠಾಣೆಗೆ, ದ.ಕ.ಸೆನ್ ಠಾಣೆಯಲ್ಲಿದ್ದ ಕಾರ್ತಿಕ್ ಕಾತರಕಿ ಅವರನ್ನು ವಿಟ್ಲ ಠಾಣೆಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.

Leave A Reply

Your email address will not be published.