ಪಡಿತರ ಚೀಟಿಯಲ್ಲಿ ʼದತ್ತಾʼ ಹೋಗಿ ʼಕುತ್ತಾʼ ಆಯಿತು | ಅಧಿಕಾರಿಗಳ ಮುಂದೆ ಕೋಪಗೊಂಡ ವ್ಯಕ್ತಿ ಮಾಡಿದ್ದೇನು ಗೊತ್ತಾ?

ಕೆಲವೊಮ್ಮೆ ತಾಂತ್ರಿಕ ದೋಷಗಳಿಂದ ಇಲ್ಲವೇ ಬೇಜವಾಬ್ದಾರಿಯುತ ನಡೆಯೋ ಇಲ್ಲವೇ ಎಡವಟ್ಟಿನಿಂದ ತಪ್ಪುಗಳು ಕಂಡುಬರುತ್ತವೆ.ಈ ತಪ್ಪುಗಳು ಕೆಲವೊಮ್ಮೆ ದೊಡ್ಡ ಪ್ರಮಾದವಾಗಿ ಮತ್ತೊಬ್ಬರಿಗೆ ನಗೆ ತರಿಸಿದರು ಅಚ್ಚರಿಯಿಲ್ಲ.


Ad Widget

Ad Widget

Ad Widget

Ad Widget
Ad Widget

Ad Widget

ತಪ್ಪೇ ಮಾಡದವರು ಯಾರವ್ರೇ ತಪ್ಪೇ ಮಾಡದವರು ಎಲೋವ್ರೆ.. ಅಪ್ಪಿ ತಪ್ಪಿ ತಪ್ಪಾಗುತ್ತೆ..ಎಂದು ವ್ಯಕ್ತಿಯೊಬ್ಬರ ಅವಾಂತರ ನಗೆಪಾಟಲಿಗೆ ಗುರಿಯಾಗಿದೆ ಹೌದು. ಇದೇ ರೀತಿಯ ಘಟನೆಯೊಂದು ಮುನ್ನಲೆಗೆ ಬಂದಿದೆ.ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಪಡಿತರ ಚೀಟಿಯಲ್ಲಿ (ration card) ಶ್ರೀಕಾಂತಿ ಕುಮಾರ್ ದತ್ತಾ ಎನ್ನುವ ವ್ಯಕ್ತಿಯ ಹೆಸರನ್ನು ಅಧಿಕಾರಿಗಳು ಕುತ್ತಾ ಎಂದು ತಪ್ಪಾಗಿ ನಮೂದಿಸಿದ್ದಾರೆ.


Ad Widget

ಹಾಗಾಗಿ, ಈ ಲೋಪವನ್ನು ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಕೂಡ ಪ್ರಯೋಜನವಾಗಿಲ್ಲ. ಅಲ್ಲದೆ, ಈ ರೀತಿ ಲೋಪಗಳು ಒಮ್ಮೆ ಮಾತ್ರವಲ್ಲದೇ, ಹಲವು ಬಾರಿ ಅವರ ಹೆಸರನ್ನು ತಪ್ಪಾಗಿ ನಮೂದಿಸಲಾಗಿದ್ದು, ಅಧಿಕಾರಿ ಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ.

ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಬಿಕ್ನಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಧಿಕಾರಿ ಮುಂದೆ ಹೋದ ಶ್ರೀಕಾಂತಿ ಕುಮಾರ್‌ ಅನೇಕ ಬಾರಿ ಪ್ರತಿಭಟನೆ ನಡೆಸಿದ್ದರು ಕೂಡ ಪ್ರಯೋಜನ ವಾಗದೇ ಇದ್ದಾಗ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಬಿಕ್ನಾ ಗ್ರಾಮದ ವ್ಯಕ್ತಿ ಶ್ರೀಕಾಂತ್‌ ದತ್ತಾ ಹೆಸರನ್ನು ಆಹಾರ ಇಲಾಖೆ ನೀಡುವ ರೇಷನ್‌ ಕಾರ್ಡ್‌ನಲ್ಲಿ ಶ್ರೀಕಾಂತ್‌ ‘ಕುತ್ತಾ’ ಎಂದು ಮಾಡಿದ್ದಾರೆ . ಹಿಂದಿಯಲ್ಲಿ ಕುತ್ತಾ ಎಂದರೆ ನಾಯಿ ಎಂಬ ಅರ್ಥವಾಗಿರುವುದರಿಂದ ಕೆರಳಿದ ಶ್ರೀಕಾಂತಿ ಕುಮಾರ್ ಬಂಕುರಾದ ಸ್ಥಳೀಯ ಪಾಲಿಕೆ ಅಧಿಕಾರಿ ಕಾರಿನಲ್ಲಿ ಬರುವಾಗ ಎದುರು ಹೋಗಿ ಬೌ ಬೌ ಎಂದು ಬೊಗಳುವ ಮೂಲಕ ಕೂಡ ಪ್ರತಿಭಟನೆ ನಡೆಸಿದ್ದಾರೆ.ಈ ವಿಭಿನ್ನ ಪ್ರತಿಭಟನೆಯ ಜೊತೆಗೆ ಅಧಿಕಾರಿ ದಾಖಲೆ ನೋಡಿ ದಂಗಾಗಿದ್ದು, ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಹರಿದಾಡಿ ಸಂಚಲನ ಮೂಡಿಸಿದೆ.

error: Content is protected !!
Scroll to Top
%d bloggers like this: