ಯೂಟ್ಯೂಬ್ ನಲ್ಲಿ ಶಾರ್ಟ್ ವೀಡಿಯೊ ಮಾಡಿಯೂ ಗಳಿಸಬಹುದು ಹಣ!
ಗೂಗಲ್ ತನ್ನ ಒಡೆತನದ ಎಲ್ಲಾ ಆಪ್‌ಗಳನ್ನು ಕಾಲಕಾಲಕ್ಕೆ ತಕ್ಕಂತೆ ನವೀಕರಣ ಮಾಡಿಕೊಂಡು ಬರುತ್ತಿದೆ. ಅದರಂತೆ ಯೂಟ್ಯೂಬ್ ಆಪ್‌ನಲ್ಲೂ ಇತ್ತೀಚೆಗೆ ಕೆಲವು ಅಪ್‌ಗ್ರೇಡ್ ಆಯ್ಕೆಯನ್ನು ನೀಡಲಾಗಿದ್ದು, ಬಳಕೆದಾರರಿಗೆ ಮತ್ತಷ್ಟು ನವೀನ ಅನುಭವ ನೀಡಲಿದೆ.
ಇಂದು ಅದೆಷ್ಟೋ ಯುವ ಪ್ರತಿಭೆಗಳು ಯೂಟ್ಯೂಬ್ ಮೂಲಕವೇ ಹೆಚ್ಚು ಖ್ಯಾತಿಗಳಿಸುತ್ತಿದ್ದಾರೆ. ಇದರಿಂದಲೇ ದುಡ್ಡು ಮಾಡಿಕೊಂಡು ಅತೀ ಎತ್ತರದ ಸ್ಥಾನಕ್ಕೆ ತಲುಪುತ್ತಿದ್ದಾರೆ. ಇಂತಹ ಸ್ಫೂರ್ತಿದಾಯಕ ಯೂಟ್ಯೂಬ್ ಅನೇಕರಿಗೆ ಉತ್ತಮ ಸ್ಥಾನವನ್ನು ಕಲ್ಪಿಸಿಕೊಟ್ಟಿದೆ. ಇದೀಗ ಮತ್ತೆ ಫೀಚರ್ ಅಪ್ಡೇಟ್ ಮಾಡಿದ್ದು, ಇನ್ನಷ್ಟು ಹಣ ಗಳಿಸಲು ಬಳಕೆದಾರರಿಗೆ ಮಾರ್ಗ ಮಾಡಿ ಕೊಟ್ಟಿದೆ.
ಹೌದು. ಇದೀಗ ಅತೀ ಉದ್ದದ ವೀಡಿಯೊಗಿಂತ ಸಣ್ಣ ವೀಡಿಯೋಗಳ(Shorts ) ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ. ಇಂತಹ ಸಣ್ಣ ವಿಡಿಯೋಗಳನ್ನೇ ಹೆಚ್ಚು ನೋಡಲು ಇಷ್ಟ ಪಡುತ್ತಾರೆ. ಈ ಕಾರಣಕ್ಕಾಗಿಯೇ ಯೂಟ್ಯೂಬ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಶಾರ್ಟ್ ವೀಡಿಯೊ ಅಂದರೆ ಯೂಟ್ಯೂಬ್ ಶಾರ್ಟ್ಸ್’ನ ವೈಶಿಷ್ಟ್ಯವನ್ನ ಪರಿಚಯಿಸಿದೆ.
ಇದರಿಂದಲೇ ಕಂಪನಿಯು ಆದಾಯವನ್ನ ಗಳಿಸುತ್ತಿದೆ. ಇದೀಗ ಈ ಉತ್ತಮ ಅವಕಾಶವನ್ನು ಸೃಷ್ಟಿಕರ್ತರಿಗೂ ನೀಡುತ್ತಿದೆ. ಮಂಗಳವಾರ, ಕಂಪನಿಯು ಯೂಟ್ಯೂಬ್ ಶಾರ್ಟ್ಸ್’ನಲ್ಲಿ ಹೊಸ ವೈಶಿಷ್ಟ್ಯವನ್ನ ಸೇರಿಸಿದ್ದು, ಈ ವೈಶಿಷ್ಟ್ಯವನ್ನ ಯುಎಸ್’ನ ಕೆಲವು ಸೃಷ್ಟಿಕರ್ತರು ಪರೀಕ್ಷಿಸುತ್ತಿದ್ದರು. ಈ ಸಹಾಯದಿಂದ, ಬಳಕೆದಾರರು ವೀಡಿಯೋದಲ್ಲಿ ಉತ್ಪನ್ನಗಳನ್ನ ಟ್ಯಾಗ್ ಮಾಡಬಹುದು.
ಕಂಪನಿಯು ಶಾರ್ಟ್ ವೀಡಿಯೊಗಳಲ್ಲಿ ಜಾಹೀರಾತು ವೈಶಿಷ್ಟ್ಯವನ್ನ ಸಹ ಸೇರಿಸಿದೆ, ಇದರಲ್ಲಿ ವೀಡಿಯೊ ಸೃಷ್ಟಿಕರ್ತರು 45 ಪ್ರತಿಶತದಷ್ಟು ಆದಾಯವನ್ನ ಪಡೆಯುತ್ತಾರೆ. ಇನ್ನು ಯುಎಸ್, ಭಾರತ, ಬ್ರೆಜಿಲ್, ಕೆನಡಾ ಮತ್ತು ಆಸ್ಟ್ರೇಲಿಯಾದ ವೀಕ್ಷಕರು ಟ್ಯಾಗ್ಗಳು ಮತ್ತು ಸಂವಹನಗಳ ಆಯ್ಕೆಯನ್ನ ನೋಡುತ್ತಾರೆ ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ. ನಾವು ಕ್ರಮೇಣ ಇತರ ಸೃಷ್ಟಿಕರ್ತರಿಗೆ ಟ್ಯಾಗ್ ಮಾಡುವ ಲಕ್ಷಣಗಳನ್ನ ತರಲು ಪ್ರಾರಂಭಿಸುತ್ತೇವೆ’ ಎಂದಿದ್ದಾರೆ. ಒಟ್ಟಾರೆ ಯೂಟ್ಯೂಬ್ ದೊಡ್ಡ ಮಟ್ಟನಲ್ಲಿ ಹೆಸರು ಗಳಿಸುವುದರಲ್ಲಿ ಸಂಶಯವಿಲ್ಲ.