Twitter -Elon Musk : ಎಲಾನ್‌ ಮಸ್ಕ್‌ RIP ಟ್ವೀಟ್‌ ಮಾಡಿದ್ದಾದರೂ ಯಾಕಾಗಿ ? ಟ್ವಿಟ್ಟರ್‌ ಕಥೆ ಕ್ಲೋಸ್‌ ?

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರು ಸುಮಾರು 3.5 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿ ಟ್ವಿಟರ್ ಖರೀದಿಸಿದ ಸುದ್ದಿ ಈಗಾಗಲೇ ತಿಳಿದಿರುವ ವಿಚಾರ. ಮತ್ತು ಮಸ್ಕ್ ಟ್ವಿಟರ್ ಖಾತೆಗೆ ಬ್ಲೂ ಟಿಕ್ ನೀಡುವುದಕ್ಕೆ ಶುಲ್ಕ ವಿಧಿಸಲು ಸಿದ್ಧತೆ ನಡೆಸಿದ್ದಾರೆ ಎಂದು ವರದಿ ಪ್ರಕಾರ ತಿಳಿಸಲಾಗಿತ್ತು .

ವಿಶ್ವದಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿರುವ ‘ಟ್ವಿಟ್ಟರ್ ಬ್ಲೂ’ ಶುಲ್ಕ ಚಂದಾದಾರಿಕೆಯು ಇದೀಗ ಭಾರತಕ್ಕೂ ಬಂದಿದೆ. ಈ ತಿಂಗಳ ಆರಂಭದಲ್ಲಿ ಅಮೆರಿಕಾ, ಬ್ರಿಟನ್ ಮತ್ತು ಕೆನಡಾದಲ್ಲಿ ಪರಿಚಯಿಸಲಾಗಿರುವ ‘ಟ್ವಿಟ್ಟರ್ ಬ್ಲೂ’ ಚಂದಾದಾರಿಕೆಯನ್ನು ಇದೀಗ ಭಾರತೀಯರು ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಸುದ್ದಿಯಾಗಿದೆ.

ಇದಲ್ಲದೆ ಎಲಾನ್ ಮಸ್ಕ್ ಅವರು ತನ್ನ ವೈಯಕ್ತಿಕ ಟ್ವಿಟರ್ ಖಾತೆಯಲ್ಲಿ ಕಂಪನಿಗೆ ಸಂಬಂಧಪಟ್ಟ ಟ್ವೀಟ್​ಗಳನ್ನು ಫೋಟೋ ಜೊತೆಗೆ ಹಂಚಿಕೊಂಡಿದ್ದಾರೆ. ಇದು ತನ್ನ ಕಂಪನಿಯ ಮುಂದಿನ ಯೊಜನೆಗಳನ್ನು ತೋರ್ಪಡಿಸುತ್ತದೆ.

ಆದರೆ ಎಲಾನ್ ಮಸ್ಕ್ ಮಾಲೀಕತ್ವದ ಟ್ವಿಟ್ಟರ್ ಇನ್ನೇನು ಕೆಲವೇ ದಿನಗಳಲ್ಲಿ ಟ್ವಿಟರ್​ ಕಂಪನಿ ಮುಚ್ಚಲಿದೆ ಎಂಬ ಸುದ್ದಿಯೂ ಕೇಳಿ ಬರುತ್ತಿದೆ. ಟ್ವಿಟರ್ ದಿನದಿಂದ ದಿನಕ್ಕೆ ಏನಾದರೊಂದು ಬದಲಾವಣೆಗಳನ್ನು ಇತ್ತೀಚೆಗೆ ಬಿಡುಗಡೆ ಮಾಡುತ್ತಿದೆ . ಇದೀಗ ನೂತನ ಬದಲಾವಣೆ ತರಲು ಮುಂದಾದ ಮಸ್ಕ್​ಗೆ ಈಗ ಸಂಕಷ್ಟ ಎದುರಾಗಿದೆ. ನೂರಾರು ಟ್ವಿಟ್ಟರ್​ ಉದ್ಯೋಗಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದಾರೆ. ಈ ಹಿನ್ನೆಲೆ ಎಲ್ಲೆಡೆ ಟ್ವಿಟರ್ ಕಚೇರಿಗಳನ್ನು ಮುಚ್ಚಲಾಗುತ್ತಿದೆ. ಅಲ್ಲದೆ ಟ್ವಿಟ್ಟರ್​​ನಲ್ಲಿ #GoodByeTwitter, #RIPTwitter, #TwitterDown ಹ್ಯಾಶ್​ಟ್ಯಾಗ್​ಗಳು ಟ್ರೆಂಡಿಂಗ್​ನಲ್ಲಿದೆ ಎಂದು ಬೆಳಕಿಗೆ ಬಂದಿದೆ.

ಈ ಮೇಲಿನ ಕೆಲವೊಂದು ಟ್ವಿಟರ್​ನ ಬದಲಾವಣೆಗಳಿಂದ ಟ್ವಿಟರ್ ಉದ್ಯೋಗಿಗಳಿಗೆ ಕೆಲವೊಂದು ನೋವುಗಳಾಗಿವೆ. ಇದರ ಕಾರಣ ಸ್ವಚ್ಛೆಯಲ್ಲಿ ರಾಜಿನಾಮೆ ನೀಡುತ್ತಿದ್ದಾರೆ. ಇದಲ್ಲದೆ ಟ್ವಿಟರ್ ಮಾನೇಜ್​ಮೆಂಟ್ “ಕೂಡಲೇ ಜಾರಿಯಾಗುವಂತೆ ಕಚೇರಿ ಕಟ್ಟಡಗಳನ್ನು ತಾತ್ಕಾಲಿಕವಾಗಿ ಮುಚ್ಚುತ್ತಿದ್ದೇವೆ. ಎಲ್ಲಾ ಬ್ಯಾಡ್ಜ್ ಅಕ್ಸೆಸ್ ಅನ್ನು ರದ್ದು ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿದೆ.

ವರದಿಗಳ ಪ್ರಕಾರ, ಟ್ವಿಟ್ಟರ್​ ಉದ್ಯೋಗಿಗಳಿಗೆ ಕಂಪನಿಯಲ್ಲಿ ಉಳಿಯಲು ಬಯಸುತ್ತೀರಾ ಎಂಬ ಪ್ರಶ್ನೆಯಿತ್ತು. ಈ ಪ್ರಶ್ನೆಗೆ ಗುರುವಾರ ಮಧ್ಯಾಹ್ನ 2 ಗಂಟೆಯವರೆಗೆ ಸಮಯವನ್ನು ನೀಡಲಾಗಿತ್ತು. ಆದರೆ, ಉದ್ಯೋಗಿಗಳು ಸೆಲ್ಯೂಟ್‌ ಎಮೋಜಿಗಳನ್ನು ಕಳುಹಿಸಿ ವಿದಾಯ ಸಂದೇಶಗಳನ್ನು ಪೋಸ್ಟ್‌ ಮಾಡುತ್ತಿದ್ದಾರೆ.

ಪ್ರಸ್ತುತ ನವೆಂಬರ್ 21ಸೋಮವಾರ ದಂದು ಕಚೇರಿಗಳು ಮತ್ತೆ ಬಾಗಿಲು ತೆರೆಯುತ್ತವೆ. ನಿಮ್ಮ ಹೊಂದಾಣಿಕೆಗೆ ನಮ್ಮ ಧನ್ಯವಾದ. ಕಂಪನಿಯ ಗೌಪ್ಯ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಾಗಲೀ, ಮಾಧ್ಯಮದಲ್ಲಾಗಲೀ ಅಥವಾ ಬೇರೆಲ್ಲಿಯಾಗಲೀ ಚರ್ಚಿಸದೆ ಕಂಪನಿಯ ನೀತಿಗೆ ಬದ್ಧತೆಯನ್ನು ಮುಂದುವವರಿಸಿರಿ,” ಎಂದು ತನ್ನ ಉದ್ಯೋಗಿಗಳಿಗೆ ಆಡಳಿತ ಅಧಿಕಾರಿ ಅವರು ಮೇಲ್ ಕಳುಹಿಸಿದ್ದಾರೆ.

ಎಲಾನ್ ಮಸ್ಕ್ ತನ್ನ ಸಂಸ್ಥೆಯ ಉದ್ಯೋಗಿಗಳಿಗೆ ಎರಡು ಆಯ್ಕೆಯನ್ನು ನೀಡಿದ್ದರು. ಈ ಆಯ್ಕೆಯಲ್ಲಿ ಎಲಾನ್​ ಮಸ್ಕ್​ ಅವರು ಟ್ವಿಟರ್​ನಲ್ಲಿ 12 ಗಂಟೆ ಕೆಲಸ ನಿರ್ವಹಿಸಬೇಕು ಎಂದು ಉದ್ಯೋಗಿಗಳಿಗೆ ನಿರ್ದೇಶನ ನೀಡಿದ್ದಾರೆ. ಹಾರ್ಡ್​ಕೋರ್​ ಆಗಿ ಕೆಲಸ ಮಾಡಬೇಕು ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ ಎಂಬ ಆಯ್ಕೆಯನ್ನು ಎಲಾನ್ ಮಸ್ಕ್ ನೀಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ ಇದರಿಂದಾಗಿ ಉದ್ಯೋಗಿಗಳಿಗೆ ಗೊಂದಲವಾಗಿದೆ.

ಇದಲ್ಲದೆ ಈಗಾಗಲೇ ಟ್ವಿಟರ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ನಂತರ ಎಲಾನ್ ಮಸ್ಕ್ ಅವರು ತನ್ನ ಸಂಸ್ಥೆಯ ಅರ್ಧದಷ್ಟು ಉದ್ಯೋಗಿಗಳನ್ನು ವಜಾ ಗೊಳಿಸಿದ್ದರೆ. ಅಲ್ಲದೆ ಇದೀಗ ಸುಮಾರು 3 ಸಾವಿರ ಉದ್ಯೋಗಿಗಳು ಟ್ವಿಟರ್​ನಿಂದ ತೊರೆದಿದ್ದಾರೆ.

ವರದಿಯೊಂದರ ಪ್ರಕಾರ, ಟ್ವಿಟ್ಟರ್‌ನಲ್ಲಿ ಸದ್ಯಕ್ಕೆ ಉಳಿಯಲಿರುವುದು ಎರಡು ಸಾವಿರ ಉದ್ಯೋಗಿಗಳು ಮಾತ್ರ. ಎಲಾನ್ ಮಸ್ಕ್ ಬರುವ ಮುನ್ನ ಟ್ವಿಟ್ಟರ್‌ನಲ್ಲಿ 7,500 ಉದ್ಯೋಗಿಗಳಿದ್ದರು. ಮಸ್ಕ್ ಬಂದಾಗಲೇ ಶೇ. 50ರಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗುತ್ತದೆ ಎಂಬ ಸುದ್ದಿ ಇತ್ತು. ಆದರೀಗ ಶೇ. 70ರಷ್ಟು ಉದ್ಯೋಗಿಗಳು ಕೆಲಸ ಬಿಟ್ಟಿರುವಂತಿದೆ. ಒಟ್ಟಾರೆ ಟ್ವಿಟ್ಟರ್‌ನಲ್ಲಿ ಎಲಾನ್ ಮಸ್ಕ್ ಅವರ ಒಡೆತನ ಶುರುವಾದಾಗಿನಿಂದ ಭಾರೀ ಗೊಂದಲಮಯ ವಾತಾವರಣ ನಿರ್ಮಾಣವಾಗಿದೆ ಎಂದು ವರದಿ ಮಾಡಿದ್ದಾರೆ.

ಉದ್ಯೋಗಿಗಳು ತಾವು ಸಂಸ್ಥೆಯನ್ನು ತೊರೆಯುತ್ತಿರುವುದನ್ನು ತೋರಿಸಲು #LoveWhereYouWorked ಎಂಬ ಹ್ಯಾಶ್‌ಟ್ಯಾಗ್ ಮತ್ತು ಸೆಲ್ಯೂಟಿಂಗ್ ಎಮೋಜಿಯನ್ನು ಬಳಸಿಕೊಂಡು ಟ್ವೀಟ್ ಮಾಡುತ್ತಿದ್ದಾರೆ.

ಇನ್ನು ಟ್ವಿಟ್ಟರ್ ನ ಮುಂದಿನ ನಿಲುವನ್ನು ಕಾದುನೋಡಬೇಕಿದೆ. ಅದಲ್ಲದೆ ಹಲವಾರು ಟ್ವಿಟ್ಟರ್ ಚಂದಾದಾರರು ಈ ವಿಷಯದ ಬಗ್ಗೆ ಬೇಸರವನ್ನು ಸಹ ವ್ಯಕ್ತ ಪಡಿಸಿರುವುದು ಕಂಡು ಬಂದಿದೆ.

Leave A Reply

Your email address will not be published.