Shraddha Murder Case : 10 ಗಂಟೆ ಬೇಕಾಯ್ತು ಶ್ರದ್ಧಾ ದೇಹ ಕಟ್ ಮಾಡಲು | ಈ ಪಾಪಿ ಜೊತೆ ಇನ್ನಿಬ್ಬರಿದ್ರಾ?

ನವದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಜಗತ್ತನ್ನೇ ಬೆಚ್ಚಿ ಬೇಳಿಸಿದೆ. ಅಷ್ಟೇ ಏಕೆ!! ಘಟಾನುಘಟಿ ಪೊಲೀಸರನ್ನು ಜೊತೆಗೆ ಹೀನಾತಿ ಹೀನ ಕೃತ್ಯ ಬೇಧಿಸಿದ ಖಾಕಿ ಪಡೆಗೂ ನಡುಕ ಹುಟ್ಟಿಸಿದೆ. ಈ ಪ್ರಕರಣದ ಕುರಿತಾಗಿ, ಪ್ರತಿನಿತ್ಯ ಸ್ಫೋಟಕ ಮಾಹಿತಿಗಳು ಹೊರ ಬೀಳುತ್ತಿದೆ.

ಹೌದು!!.ದೆಹಲಿಯ ಶ್ರದ್ದಾ ಕೊಲೆ ಪ್ರಕರಣದ ಬಗ್ಗೆ ಆರೋಪಿ ಬಂಧನದ ಬಳಿಕ ಒಂದೊಂದಾಗೆ ರೋಚಕ ಸತ್ಯಗಳು ಬಯಲಾಗುತ್ತಿದ್ದು, ತಾನೊಬ್ಬ ಡ್ರಗ್ ಅಡಿಕ್ಟ್ ಎಂಬ ಸತ್ಯವನ್ನು ನೆನ್ನೆಯಷ್ಟೇ ಆರೋಪಿ ಬಾಯಿಬಿಟ್ಟಿದ್ದ ಬೆನ್ನಲ್ಲೇ, ಅಫ್ತಾಬ್ ತಾನು ಎಸೆದ ಭೀಕರ ಕೃತ್ಯದ ಕರಾಳ ಸತ್ಯವನ್ನು ಹೊರ ಕಕ್ಕುತ್ತಿದ್ದಾನೆ.

ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪುನವಾಲಾನನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಐದು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದ್ದು, ಈ ಸಂದರ್ಭ ಸ್ಫೋಟಕ ವಿಚಾರಗಳನ್ನು ಬಾಯ್ಬಿಡುತ್ತಿದ್ದಾನೆ .ಇಷ್ಟು ದಿನಗಳ ಕಾಲ ತಾನೊಬ್ಬನೇ ಭೀಕರ ಕೊಲೆಗೈದದ್ದು ಎಂದು ಕೊಂಡವರಿಗೆ ನಿಜಕ್ಕೂ ಶಾಕ್ ಎದುರಾಗಿದೆ.

ದೆಹಲಿಯಲ್ಲಿ ನಡೆದ ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ಆತನನ್ನು ಹೊರತುಪಡಿಸಿ ಮತ್ತಿಬ್ಬರು ಆರೋಪಿಗಳು ಶಾಮೀಲಾಗಿದ್ದಾರೆ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ. ಹಾಗಾಗಿ, ಎರಡು ಹೊಸ ಪಾತ್ರಗಳ ಶೋಧ ಕಾರ್ಯಕ್ಕೆ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ .

ಮೊದಲ ಪಾತ್ರಕ್ಕೆ ಬದ್ರಿ ಮತ್ತು ಎರಡನೇ ಪಾತ್ರಕ್ಕೆ ರೋಹನ್ ಎಂದು ಹೆಸರಿಡಲಾಗಿದೆ. ಶ್ರದ್ಧಾ ಅವರ ಭೇಟಿಯಲ್ಲಿ ಹಿಮಾಚಲ ಪ್ರದೇಶದಲ್ಲಿ ವಾಸಿಸುವ ಬದ್ರಿಯನ್ನು ಅಫ್ತಾಬ್ ಭೇಟಿಯಾಗಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ. ತಾನು ಗುರುಗ್ರಾಮ್‌ನಲ್ಲಿ ಕೆಲಸ ಮಾಡುತ್ತಿದ್ದುದಾಗಿ ಮತ್ತು ಛತ್ತರ್‌ಪುರ ಪ್ರದೇಶದಲ್ಲಿ ಮನೆ ಬಾಡಿಗೆಗೆ ಪಡೆದು ವಾಸಿಸಲು ಬಯಸಿರುವುದಾಗಿ ಅಫ್ತಾಬ್ ಬದರಿಗೆ ತಿಳಿಸಿದ್ದು, ಈ ಬಳಿಕ ಬದ್ರಿ ಅಫ್ತಾಬ್‌ಗೆ ತಾನು ಛತ್ತರ್‌ಪುರದಲ್ಲಿ ವಾಸಿಸುತ್ತಿದ್ದು, ಬಾಡಿಗೆಗೆ ಮನೆ ನೀಡಬಹುದು ಎಂದು ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಛತ್ತರ್‌ಪುರದಲ್ಲಿ ರೋಹನ್‌ಗೆ ಅಫ್ತಾಬ್‌ನನ್ನು ಪರಿಚಯಿಸಿದವನು ಬದ್ರಿ ಎನ್ನಲಾಗಿದೆ.

ಅಫ್ತಾಬ್ ದೆಹಲಿಗೆ ಬಂದಾಗ ಬದ್ರಿಯನ್ನು ಸಂಪರ್ಕಿಸಿದ್ದಾನೆ ಎನ್ನಲಾಗುತ್ತಿದ್ದು ,ಇದರ ಜೊತೆಗೆ ಎರಡನೇ ಪಾತ್ರ ರೋಹನ್ ಆಗಿದ್ದು, ಅಫ್ತಾಬ್ ಬಾಡಿಗೆ ಪಡೆದಿದ್ದ ಮನೆಯೊಂದರ ಕಾವಲುಗಾರನ ರೀತಿ ರೋಹನ್ ಕೆಲಸ ನಿರ್ವಹಿಸಿದ್ದ ಎನ್ನಲಾಗಿದೆ.

ಇಡೀ 10 ಗಂಟೆಯಲ್ಲಿ ಅಫ್ತಾಬ್ ಶ್ರದ್ಧಾ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಪೊಲೀಸ್ ವಿಚಾರಣೆಯ ವೇಳೆ ಬಹಿರಂಗವಾಗಿದೆ. ಈ ಬಳಿಕ, ಎಲ್ಲಾ ತುಂಡುಗಳನ್ನು ಆರೋಪಿಗಳು ನೀರಿನಿಂದ ತೊಳೆದಿದ್ದಾರೆ. ಅಫ್ತಾಬ್‌ನನ್ನು ಪೊಲೀಸರು ವಿಚಾರಣೆಯ ವೇಳೆ, ಮೊಬೈಲ್ ಲೊಕೇಶ್ ಅವನ ಮನೆ ಬಳಿ ಕಾಣಿಸಿಕೊಂಡ ಪ್ರಶ್ನೆ ಉದ್ಭವಿಸಿದಾಗ ಅಫ್ತಾಬ್ ಸತ್ಯ ವಿಷಯ ಹೇಳಿದ್ದಾನೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಭೀಭತ್ಸ ಕೃತ್ಯ ಕ್ಕಾಗಿ ಆಕೆ ಶವ ಕತ್ತರಿಸಲು ಆತ 10 ಗಂಟೆ ತೆಗೆದುಕೊಂಡಿದ್ದಾನೆ ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಅಫ್ತಾಬ್ ಮನೆ ಬಳಿಯ ಕಸದಲ್ಲಿ ವ್ಯಾಕ್ಯೂಮ್ ಕ್ಲೀನರ್ ಬಾಕ್ಸ್ ಕೂಡ ಪತ್ತೆಯಾಗಿದ್ದು, ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಆಹಾರ ಪ್ಯಾಕೆಟ್ ಅನ್ನು ಮರುಪಡೆಯಲಾಗಿದೆ. ಇವುಗಳಲ್ಲಿ ನವೆಂಬರ್ 2 ರ ದಿನಾಂಕದ ಆಹಾರ ಬಿಲ್ ಸೇರಿದ್ದು ಜೊತೆಗೆ ಬಿಲ್ ನಲ್ಲಿ ಅಫ್ತಾಬ್ ಹೆಸರನ್ನು ಬರೆಯಲಾಗಿದೆ.

ಅಫ್ತಾಬ್ ಬಾಡಿಗೆ ಹಣವನ್ನು ಪ್ರತಿ ತಿಂಗಳು ರೋಹನ್ ಖಾತೆಗೆ ಜಮಾ ಮಾಡುತ್ತಿದ್ದ. ಇಬ್ಬರಿಗಾಗಿ ಖಾಕಿ ಪಡೆ ಶೋಧ ಕಾರ್ಯ ನಡೆಸುತ್ತಿದ್ದರೆನ್ನಲಾಗಿದೆ. ಅಫ್ತಾಬ್ ವಿರುದ್ಧ ದೆಹಲಿ ಪೊಲೀಸರ ಬಳಿ ಇನ್ನೂ ಯಾವುದೇ ನೇರ ಸಾಕ್ಷ್ಯಗಳಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿದ್ದು, ಶೀಘ್ರದಲ್ಲೇ ಪ್ರಕರಣವನ್ನು ದೆಹಲಿ ಪೊಲೀಸರ ಅಪರಾಧ ವಿಭಾಗಕ್ಕೆ ವರ್ಗಾಯಿಸಬಹುದು ಎಂದು ಅಂದಾಜಿಸಲಾಗಿದೆ.

ಕೊಲೆಗೆ ನೇರ ಸಾಕ್ಷಿಗಳಿಲ್ಲದೆ ಇರುವುದರಿಂದ ಜೊತೆಗೆ ಅಫ್ತಾಬ್ ಶ್ರದ್ಧಾ ತುಂಡುಗಳನ್ನು ಹೊತ್ತೊಯ್ಯುವ ಯಾವುದೇ ವೀಡಿಯೊಗಳನ್ನು ಬಿಡುಗಡೆ ಮಾಡಲಾಗಿಲ್ಲ.ಪೊಲೀಸರು ಸೆಕ್ಷನ್ 161 ರ ಅಡಿಯಲ್ಲಿ ಅಫ್ತಾಬ್ ಅವರ ಹೇಳಿಕೆಯನ್ನು ಮಾತ್ರ ಹೊಂದಿದ್ದು, ಅವರು ಯಾವುದೇ ಸಮಯದಲ್ಲಿ ತಪ್ಪೊಪ್ಪಿಗೆಯನ್ನು ನಿರಾಕರಿಸಬಹುದಾಗಿದೆ. ಮನೆ ಹುಡುಕಿದಾಗ ಶ್ರದ್ಧಾ ಅವರ ಒಂದೇ ಒಂದು ಕೂದಲು ಕೂಡ ಸಿಕ್ಕಿಲ್ಲ. ಇಷ್ಟೇ ಅಲ್ಲದೆ, ಇಲ್ಲಿಯವರೆಗೆ ಸಂಗ್ರಹಿಸಿದ ಪುರಾವೆಗಳನ್ನು ಸಾಂದರ್ಭಿಕ ಸಾಕ್ಷ್ಯವಾಗಿ ಮಾತ್ರ ಬಳಸಬಹುದು ಎನ್ನಲಾಗುತ್ತಿದೆ.

Leave A Reply

Your email address will not be published.