ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಬಲವಂತವಾಗಿ ಕಿಸ್ ಕೊಡಿಸಿ ರ‌್ಯಾಗಿಂಗ್! ವೀಡಿಯೋ ಇಲ್ಲಿದೆ ನೋಡಿ!

ಹೆಣ್ಣು ಮಕ್ಕಳು ಕಾಲೇಜಿಗೆ ಎಂಟ್ರಿ ಕೊಡುತ್ತಿದ್ದಂತೆ ಸೀನಿಯರ್ ಗಳು ತಮ್ಮ ಕಾಲೇಜಿನಲ್ಲಿ ತಮ್ಮದೊಂದು ಹವಾ ಸೃಷ್ಟಿಸಿ ಉಳಿದವರ ಮುಂದೆ ಫೋಸ್ ಕೊಡುವ ಮೂಲಕ ಉಳಿದವರ ಹೆದರಿಸುವ ಛಾತಿ ಹೆಚ್ಚಿನವರಿಗೆ ಇದೆ. ಅದರಲ್ಲೂ ಕೂಡ ಹಳ್ಳಿಯಿಂದ ಬಂದವರು ಎಂದಾದರೆ ಗೋಳು ಹೊಯ್ದುಕೊಳ್ಳುವ ಪರಿಪಾಠ ತುಸು ಹೆಚ್ಚೇ ಎಂದರೆ ತಪ್ಪಾಗದು.


Ad Widget

Ad Widget

Ad Widget

Ad Widget
Ad Widget

Ad Widget

ಭುವನೇಶ್ವರದಲ್ಲಿ ಹೊಸದಾಗಿ ಕಾಲೇಜಿಗೆ ಬಂದ ಹುಡುಗಿಗೆ ಹುಡುಗನೊಬ್ಬನಿಂದ ಬಲವಂತವಾಗಿ ಕಿಸ್ ಕೊಡಿಸುವ ಮೂಲಕ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿರುವ ಘಟನೆ ಒಡಿಶಾದ ಕಾಲೇಜೊಂದರಲ್ಲಿ ನಡೆದಿದೆ.ಕಳೆದ ತಿಂಗಳಷ್ಟೇ ಸರ್ಕಾರಿ ಕಾಲೇಜಿನ ಪ್ರಥಮ ದರ್ಜೆಗೆ ಸೇರಿದ್ದ ವಿದ್ಯಾರ್ಥಿನಿಗೆ ಮತ್ತೋರ್ವ ವಿದ್ಯಾರ್ಥಿಯಿಂದ ಬಲವಂತವಾಗಿ ಹಿರಿಯ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಕಿಸ್ ಕೊಡಿಸಿರುವ ಘಟನೆ ನಡೆದಿದೆ.


Ad Widget

ಈ ಘಟನೆಯ ಸಂದರ್ಭ ಹುಡುಗಿ ಎದ್ದು ಹೋಗಲು ಪ್ರಯತ್ನಿಸಿದಾಗ ಆಕೆಯ ಹಿಡಿದು ಹಿರಿಯ ವಿದ್ಯಾರ್ಥಿ ತಡೆದಿದ್ದು, ಜೊತೆಗೆ ಕೈಯಲ್ಲಿ ದೊಣ್ಣೆ ಹಿಡಿದು ಕುಳಿತಿದ್ದ ಹಿರಿಯ ವಿದ್ಯಾರ್ಥಿಯೊಂದಿಗೆ ಹುಡುಗ ಜಗಳವಾಡಲು ಮುಂದಾದಾಗ ಆರೋಪಿ ಕಪಾಳಮೋಕ್ಷ ಮಾಡಿದ ಪ್ರಹಸನ ಕೂಡ ನಡೆದಿದೆ.

ಸ್ಥಳದಲ್ಲಿಯೇ ಇದ್ದ ಇತರ ಹುಡುಗಿಯರು ಸುಮ್ಮನೆ ನಗುತ್ತಾ ನೋಡುತ್ತಿದ್ದರಲ್ಲದೆ ಈ ಘಟನೆಯನ್ನು ಪ್ರತಿಭಟಿಸಲು ಮುಂದಾಗಿಲ್ಲ ಎಂಬುದು ವಿಪರ್ಯಾಸ. ಆರೋಪಿಗಳು ಎರಡನೇ ವರ್ಷದ ವಿದ್ಯಾರ್ಥಿಗಳಾಗಿದ್ದು, ಅವರಿಗೆ ತಮ್ಮ ವಾರ್ಷಿಕ ಪರೀಕ್ಷೆಯನ್ನು ಬರೆಯಲು ಅನುಮತಿ ನೀಡುವುದಿಲ್ಲ. ಜೊತೆಗೆ ಘಟನೆಯ ಸಂಬಂಧ ಉನ್ನತ ಮಾಧ್ಯಮಿಕ ಶಿಕ್ಷಣ ಮಂಡಳಿಗೆ ಪತ್ರ ಬರೆಯುತ್ತೇವೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳನ್ನು ಗುರುತಿಸಲಾಗಿದ್ದು, ಶಿಸ್ತು ಸಮಿತಿ ಮತ್ತು ಜಂಟಿ ರ‍್ಯಾಗಿಂಗ್ ಸೆಲ್ ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲು ನಿರ್ಧರಿಸಿದೆ ಎಂದು ಕಾಲೇಜು ಪ್ರಾಂಶುಪಾಲರು ತಿಳಿಸಿದ್ದಾರೆ.ಬಂಧಿತ ಐವರು ವಿದ್ಯಾರ್ಥಿಗಳ ಮೇಲೆ ರ‍್ಯಾಗಿಂಗ್ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಮತ್ತು ಐಟಿ ಕಾಯ್ದೆಯಡಿ ಆರೋಪ ಹೊರಿಸಲಾಗಿದೆ. ಬಂಧಿತ ಅಪ್ರಾಪ್ತರನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುತ್ತದೆ.

ಅದರಲ್ಲಿಯೂ ಈ ಘಟನೆಯ ಪ್ರಮುಖ ಆರೋಪಿ 24 ವರ್ಷದ ಅಭಿಷೇಕ್ ನಹಕ್ ಆಗಿದ್ದು, ಈತ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾನೆ.

ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಬ್ಬರು ಅಪ್ರಾಪ್ತರು ಸೇರಿದಂತೆ ಐವರು ವಿದ್ಯಾರ್ಥಿಗಳನ್ನು ಲೈಂಗಿಕ ಕಿರುಕುಳ ಸೇರಿದಂತೆ ಹಲವು ಆರೋಪಗಳಡಿ ವಶ ಪಡಿಸಿಕೊಂಡಿದ್ದಾರೆ. ಇದರ ಜೊತೆಗೆ ಘಟನೆಯಲ್ಲಿ ಭಾಗಿಯಾಗಿದ್ದ 12 ವಿದ್ಯಾರ್ಥಿಗಳನ್ನು ಗಂಜಾಂ ಜಿಲ್ಲೆಯ ಕಾಲೇಜು ಡಿಬಾರ್ ಮಾಡಿದೆ.

ಇದು ಕೇವಲ ರ‍್ಯಾಗಿಂಗ್ ಪ್ರಕರಣವಲ್ಲ ಆದರೆ, ಬಾಲಕಿಯರು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದು, ಇಂತಹ ಘಟನೆಗಳ ಬಗ್ಗೆ ರಾಜ್ಯದ ರ‍್ಯಾಗಿಂಗ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ಬಹಾರ್ಂಪುರದ ಪೊಲೀಸ್ ಅಧೀಕ್ಷಕ ಸರಬನ್ ವಿವೇಕ್. ಎಂ ಒತ್ತಾಯಿಸಿದ್ದಾರೆ.

error: Content is protected !!
Scroll to Top
%d bloggers like this: