Health Tips : ನಿಮಗಿದು ತಿಳಿದಿದೆಯೇ ಯಾವ ಹೊತ್ತಿನಲ್ಲಿ ಬಾಳೆಹಣ್ಣು ತಿನ್ನಬೇಕು ಎಂದು?

ಬಾಳೆಹಣ್ಣು ಆರೋಗ್ಯ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಲ್ಲದೆ ಭರ್ಜರಿ ಊಟ ಮಾಡಿ ನಂತರ ಒಂದು ಬಾಳೆಹಣ್ಣು ತಿಂದರೆ ಸಾಕು ಆರಾಮವಾಗಿ ಆಹಾರ ಜೀರ್ಣ ಆಗುತ್ತದೆ. ಬಾಳೆಹಣ್ಣು ಕೆಲವರಿಗಂತೂ ಪಂಚಪ್ರಾಣ.

ಬಾಳೆಹಣ್ಣು ಪ್ರತಿ ಋತುವಿನಲ್ಲೂ ಲಭ್ಯವಿದೆ. ಜನರು ಇದನ್ನು ಬಹಳ ಉತ್ಸಾಹದಿಂದ ತಿನ್ನುತ್ತಾರೆ, ಇದು ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಬಾಳೆ ಹಣ್ಣಿನಲ್ಲಿ ಕದಳಿ, ಪಚ್ಚೆ, ನೇಂದ್ರ, ಹೀಗೆ ಸಾಕಷ್ಟು ವಿಧಗಳಿವೆ. ಪ್ರತಿ ದಿನ ಬಾಳೆ ಹಣ್ಣನ್ನು ಸೇವಿಸುವುದ್ದರಿಂದ ನಿಮ್ಮ ದೇಹಕ್ಕೆ 100ರಷ್ಟು ಕ್ಯಾಲೋರಿಯನ್ನು ಒದಗಿಸುತ್ತದೆ. ಅಲ್ಲದೆ ದೇಹದ ಜೀರ್ಣಾಂಗ ವ್ಯವಸ್ಥೆ, ಮೂತ್ರಪಿಂಡ ಮತ್ತು ಹೃದಯಕ್ಕೆ ಸಹ ಪ್ರಯೋಜನಕಾರಿಯಾಗಿದೆ. ಅದಕ್ಕಾಗಿಯೇ ಜನರು ಅದನ್ನು ಖರೀದಿಸಲು ಇಷ್ಟಪಡುತ್ತಾರೆ.

ಆದರೆ ಯಾವ ಹೊತ್ತಿನಲ್ಲಿ ಬಾಳೆಹಣ್ಣು ತಿನ್ನಬೇಕು, ತಿನ್ನಬಾರದು ಎಂಬುದು ತಿಳಿದು ಕೊಳ್ಳಬೇಕು.

  • ಇಂದೂ ನೀವು ಖರೀದಿಸುವ ಪ್ರತಿಯೊಂದು ಹಣ್ಣು ತರಕಾರಿಗಳನ್ನು ರಾಸಯನಿಕ ಔಷಧಿಗಳನ್ನು ಸಿಂಪಡಿಸಿ ಬೆಳೆಸಲಾಗುತ್ತದೆ. ಆದ್ದರಿಂದ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದ್ದರಿಂದ ನಿಮ್ಮ ಆಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣನ್ನು ಸೇವಿಸುವುದ್ದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುವ ಸಾಧ್ಯತೆ ಹೆಚ್ಚಿದೆ.
  • ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಕರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು.
  • ಬಾಳೆಹಣ್ಣು ಹಣ್ಣಾಗುತ್ತಿದ್ದಂತೆ ಅದರ ರುಚಿ ಮತ್ತು ಪೌಷ್ಟಿಕಾಂಶದ ಮೌಲ್ಯವು ಬದಲಾಗುತ್ತದೆ. ಚೆನ್ನಾಗಿ ಮಾಗಿದ ಬಾಳೆಹಣ್ಣು, ಹೊಸದಾಗಿ ಮಾಗಿದ ಬಾಳೆಹಣ್ಣಿಗಿಂತ ಹೆಚ್ಚಿನ ಸಿಹಿಯನ್ನು ಹೊಂದಿರುತ್ತದೆ. ಹೊಸದಾಗಿ ಮಾಗಿದ ಬಾಳೆಹಣ್ಣನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಹೆಚ್ಚಾಗಿ ಹಣ್ಣಾಗಿರುವ ಬಾಳೆ ಹಣ್ಣು ಅಂದರೆ ಅದರ ಸಿಪ್ಪೆಯು ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿರುತ್ತದೆ ಇದನ್ನು ಪ್ರತಿದಿನ ಸೇವಿಸುವುದ್ದರಿಂದ ನಿಮ್ಮ ಜೀರ್ಣಕ್ರಿಯೆಗೆ ಸಹಕರಿಸುತ್ತದೆ.
  • ಜೊತೆಗೆ ನಿಮ್ಮ ದೇಹಕ್ಕೆ ಬೇಕಾಗುವ ಶಕ್ತಿಯನ್ನು ನೀಡುತ್ತದೆ. ಬಾಳೆಹಣ್ಣುಗಳಲ್ಲಿ ಟ್ರಿಪ್ಟೊಫಾನ್ ಎಂಬ ಅಂಶವನ್ನು ಹೊಂದಿದ್ದು, ಇದು ನಿಮ್ಮ ದೇಹದಲ್ಲಿ ಅಮೈನೋ ಆಮ್ಲವನ್ನು ಒದಗಿಸುತ್ತದೆ. ಜೊತೆಗೆ ನಿಮ್ಮ ದೇಹವು ಸಿರೊಟೋನಿನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಸಿರೊಟೋನಿನ್ ಮೆದುಳಿನ ಪ್ರಮುಖ ರಾಸಾಯನಿಕ ಅಂಶವಾಗಿದ್ದು, ಇದು ನೈಸರ್ಗಿಕ ಖಿನ್ನತೆಗೆ ಶಮನಕಾರಿಯಾಗಿದೆ ಮತ್ತು ಆತಂಕ ಮತ್ತು ನಿದ್ರಾಹೀನತೆಗೆ ಚಿಕಿತ್ಸೆ ನೀಡುತ್ತದೆ.
  • ಕೆಮ್ಮಿನ ಸಮಸ್ಯೆ ಇರುವವರು ರಾತ್ರಿಯಲ್ಲಿ ಬಾಳೆಹಣ್ಣನ್ನು ಸೇವಿಸಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ಫೈಬರ್ ಮತ್ತು ಮೆಗ್ನೀಸಿಯಮ್‌ ಹೇರಳವಾಗಿದೆ. ಆದರೆ ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಯಾವತ್ತೂ ತಿನ್ನಬೇಡಿ. ಬಾಳೆಹಣ್ಣುಗಳಲ್ಲಿ ಆಮ್ಲೀಯ ಸ್ವಭಾವವನ್ನು ಹೊಂದಿರುವುದ್ದರಿಂದ ಇದು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಕರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು.

ಒಟ್ಟಿನಲ್ಲಿ ನೀವು ಬಾಳೆಹಣ್ಣುಗಳನ್ನು ಸೇವಿಸುವ ಉತ್ತಮ ಕ್ರಮವೆಂದರೆ ನೀವು ಸೇವಿಸುವ ಆಹಾರಗಳ ಜೊತೆಗೆ ಸೇವಿಸಿ. ಬಾಳೆಹಣ್ಣಿನಿಂದ ತಯಾರಿಸಲಾಗುವ ಕೆಲವೊಂದಿಷ್ಟು ರೆಸಿಪಿಗಳನ್ನು ತಯಾರಿಸಿ ತಿನ್ನುವುದು ಬಹಳ ಉತ್ತಮವಾಗಿದೆ. ಮತ್ತು ಬಾಳೆಹಣ್ಣು ಬಹಳ ಅಗ್ಗವಾಗಿ ಎಲ್ಲಾ ಸಮಯದಲ್ಲೂ ಹೇರಳವಾಗಿ ಸಿಗುವುದರಿಂದ ಎಲ್ಲರಿಗೂ ಸೇವಿಸಬಹುದಾಗಿದೆ.

Leave A Reply