ಸಲಾಂ ಮಂಗಳಾರತಿ ಕೊಲ್ಲೂರು ದೇವಸ್ಥಾನದಲ್ಲಿ ಹಿಂದೆಯೂ ಇತ್ತು – ಯುಟಿ ಖಾದರ್

ಕರಾವಳಿಯ ಸುಪ್ರಸಿದ್ದ ದೇವಸ್ಥಾನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಈ ಹಿಂದೆ ಸಲಾಂ ಪೂಜೆ ನಡೆಯುತ್ತಿತ್ತು ಎಂಬುದಾಗಿ ವಿಧಾನಸಭಾ ವಿಪಕ್ಷ ಉಪನಾಯಕರಾದ ಯುಟಿ ಖಾದರ್ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.

 

ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಈ ಹಿಂದೆ ಸಲಾಂ ಪೂಜೆ ಮಾಡಲಾಗುತಿತ್ತು. ಆದರೆ ಈಗಿನ ಆಡಳಿತ ಮಂಡಳಿ ಸಲಾಂ ಪೂಜೆ ಮಾಡಲಾಗುತ್ತಿಲ್ಲ ಅಂತ ಹೇಳುತ್ತಿದ್ದು, ದೇವಸ್ಥಾನದ ಇತಿಹಾಸ ನೋಡಿದರೆ ಅಲ್ಲಿ ಸಲಾಂ ಪೂಜೆ ನಡೆಯುತ್ತಿತ್ತು ಎನ್ನುವ ಬಗ್ಗೆ ಉಲ್ಲೇಖ ಇರುವ ಕುರಿತು ಸಚಿವರು ಮಾಹಿತಿ ನೀಡಿದ್ದಾರೆ.

ಕಾನೂನು ಮತ್ತು ನಿಯಮದ ಪ್ರಕಾರ ಏನು ಬೇಕಾದರೂ ಮಾಡಲಿ ಹಾಗೂ ರಾಜ್ಯ ಸರ್ಕಾರದ ಅನುಮತಿ ಪಡೆದು ಉತ್ತಮ ಕೆಲಸ ‌ಮಾಡಲು ಅವಕಾಶವಿದೆ. ನಮ್ಮ ದೇಶದ ಎಲ್ಲಾ ಇತಿಹಾಸಕಾರರು, ಸ್ವತಂತ್ರ ಹೋರಾಟಗಾರರಿಗೆ ಗೌರವ ಸಲ್ಲಬೇಕಾಗಿದ್ದು, ರಾಜ್ಯದಲ್ಲಿ ಸರ್ವಧರ್ಮಕ್ಕೆ ಕೊಡುಗೆ ಕೊಟ್ಟ ಹಲವು ಜನರಿದ್ದಾರೆ. ಅವರು ಕೊಟ್ಟ ಕೊಡುಗೆ ಮುಂದಿನ ಪೀಳಿಗೆ ಕೂಡ ಅರಿವಾಗಬೇಕು. ಇದರ ಜೊತೆಗೆ, ಕೊಲ್ಲೂರಿ‌ನಲ್ಲಿಯೂ ಸಲಾಂ ಪೂಜೆ ಜಾರಿಯಲ್ಲಿತ್ತು ಅಲ್ಲದೆ, ಈ ಬಗ್ಗೆ ಶೃಂಗೇರಿಯಲ್ಲಿರುವ ಶಿಲೆಗಳಲ್ಲಿ ಉಲ್ಲೇಖವಿದ್ದು,ಅಂತಹ ಇತಿಹಾಸ ಮುಂದಿನ ಯುವ ಸಮುದಾಯಕ್ಕೆ ‌ಗೊತ್ತಾಗಬೇಕು ಅಂತಾ ಮಾಜಿ ಸಚಿವ ಯು.ಟಿ. ಖಾದರ್ ಮಾಹಿತಿ ನೀಡಿದ್ದಾರೆ.

ಈ ಪೂಜೆಯನ್ನು “ದೀವಟಿಗೆ ಮಂಗಳಾರತಿ” ಪೂಜೆ ಎಂದು ಮರು ನಾಮಕರಣ ಮಾಡುವ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗಿತ್ತು. ಮೈಸೂರು ಸಂಸ್ಥಾನದ ರಾಜನಾದ ಟಿಪ್ಪುಸುಲ್ತಾನ್ 1763ರಲ್ಲಿ ಐತಿಹಾಸಿಕ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾಗಿನಿಂದ ಸಂರಕ್ಷಣೆ ಒದಗಿಸಿದ ನೆನಪಿಗಾಗಿ ಈ ದೇವಸ್ಥಾನದಲ್ಲಿ ಪ್ರತಿ ದಿನ ಸಂಜೆ ಸಲಾಮ್ ಮಂಗಳಾರತಿ ನಡೆಸಿ ಟಿಪ್ಪುಗೆ ಗೌರವ ಸಲ್ಲಿಸಲಾಗುತ್ತಿತ್ತು.

ಸರ್ಕಾರದ ಈ ತೀರ್ಮಾನ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ ಎಂದು ಸಚಿವರಾದ ಖಾದರ್ ಈ ಸಂದರ್ಭ ದಲ್ಲಿ ಹೇಳಿದ್ದಾರೆ. ಸುಮಾರು 250 ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಮಂಗಳಾರತಿ ಪೂಜೆಯನ್ನು ‘ದೀವಟಿಗೆ ಮಂಗಳಾರತಿ ಪೂಜೆ’ ಎಂದು ಮರುನಾಮಕರಣ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ.

Leave A Reply

Your email address will not be published.