7th Pay Commission : ಹೊಸ ವರ್ಷಕ್ಕೆ ಸರಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ!

ಹೊಸ ವರ್ಷದ ವೇಳೆಗೆ ಮತ್ತೊಮ್ಮೆ ಸರ್ಕಾರವು ಕೇಂದ್ರ ಸರ್ಕಾರಿ ನೌಕರರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡುವ ಸಿಹಿ ಸುದ್ದಿಯ ನಿರೀಕ್ಷೆ ನೀಡಿದೆ. ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಳವಾಗುವುದರಿಂದ ಮುಂದಿನ ಕಂತಿನ ಡಿಎ ಹೆಚ್ಚಳ ಯಾವಾಗ ಎಂಬ ಕುತೂಹಲ ಮೂಡಿದೆ. ಇದೀಗ ದೀಪಾವಳಿ ಹಬ್ಬ ಮುಗಿದು ಡಿಎ ಏರಿಕೆಯಾಗಿರುವುದರಿಂದ ಕೇಂದ್ರ ಸರ್ಕಾರಿ ನೌಕರರು ಮುಂದಿನ ಡಿಎ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ಮುಂದಿನ ಡಿಎ ಕೂಡಾ ಇದೇ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ.

ದೇಶದಲ್ಲಿ ಒಟ್ಟು 48 ಲಕ್ಷ ಕೇಂದ್ರ ನೌಕರರು ಮತ್ತು ಸುಮಾರು 68.62 ಲಕ್ಷ ಪಿಂಚಣಿದಾರರಿದ್ದೂ, ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದ ನಂತರ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಶೇಕಡ 38 ಆಗಿದೆ. ಕೇಂದ್ರ ನೌಕರರು ಜುಲೈ ಮತ್ತು ಆಗಸ್ಟ್ ಎರಡು ತಿಂಗಳ ಡಿಎ ಬಾಕಿಯನ್ನು ಪಡೆದಿದ್ದಾರೆ. ಡಿಎ ಹೆಚ್ಚಳವು ಜುಲೈ 1, 2022 ರಿಂದ ಜಾರಿ ಮಾಡಲಾಗಿದೆ.

ಸರ್ಕಾರಗಳು 7ನೇ ವೇತನ ಆಯೋಗದ ಶಿಫಾರಸಿನ ಅಡಿಯಲ್ಲಿ
ಅಸ್ಸಾಂ, ಹರ್ಯಾಣ, ಉತ್ತರ ಪ್ರದೇಶ, ಒಡಿಶಾ, ಕರ್ನಾಟಕ ಮತ್ತು ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳು ತಮ್ಮ ರಾಜ್ಯ ನೌಕರರ ಡಿಎ ಹೆಚ್ಚಿಸಿವೆ. ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರಮಾಣ, AICPI ಸೂಚ್ಯಂಕ ಪ್ರಮಾಣ, 7ನೇ ವೇತನ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಡಿಎ ಹೆಚ್ಚಳ ಪ್ರಮಾಣ ನಿಗದಿಯಾಗಲಿದೆ.

2022ರ ವರ್ಷಾಂತ್ಯಕ್ಕೆ ಅಥವಾ 2023ರ ಆರಂಭದಲ್ಲೇ ಸಿಹಿ ಸುದ್ದಿ ನಿರೀಕ್ಷಿಸಬಹುದು ಎಂಬ ಸುದ್ದಿಯಿದೆ. ಆದರೆ, ಇತ್ತೀಚಿನ ಮಾಹಿತಿಯಂತೆ ಜನವರಿ ಆರಂಭದಲ್ಲಿ ಈ ಕುರಿತಂತೆ ಘೋಷಣೆಯಾಗಲಿದೆ ಎಂಬ ಮಾಹಿತಿ ದೊರೆತಿದೆ. ಸರ್ಕಾರಿ ನೌಕರರಿಗೆ ವರ್ಷಕ್ಕೆ ಎರಡು ಬಾರಿ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗುತ್ತದೆ. ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಿ ,ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ. ಜೊತೆಗೆ ಡಿಎ ಪರಿಹಾರ ಮೊತ್ತ ಬಾಕಿ ಮೊತ್ತ ಎಲ್ಲವನ್ನು ನಿರೀಕ್ಷಿಸಬಹುದು. ಇದರ ಜೊತೆಗೆ ಸಂಬಳ ಹೆಚ್ಚಳವನ್ನು ಪಡೆಯುತ್ತಾರೆ.

7ನೇ ವೇತನ ಆಯೋಗದ ಪ್ರಕಾರ ತುಟ್ಟಿಭತ್ಯೆ (ಡಿಎ) ಶೇಕಡಾ 4 ರಷ್ಟು ಹೆಚ್ಚಾದರೆ ವೇತನದ ಲೆಕ್ಕಾಚಾರ ಹೀಗಿರಲಿದೆ. ಶೇಕಡಾ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದಿಂದ ವೇತನ 2,276 ರೂಪಾಯಿ ಹೆಚ್ಚಳವಾಗಲಿದೆ. ಒಂದು ವೇಳೆ ನೌಕರನ ಮೂಲ ವೇತನ 56,900 ರೂ. ಆಗಿದ್ದರೆ ಪ್ರಸ್ತುತ ನೌಕರ 19,346 ರುಪಾಯಿ ತುಟ್ಟಿಭತ್ಯೆ ಪಡೆಯುತ್ತಿರುತ್ತಾರೆ. ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದ ನಂತರ 21,622 ರೂ. ಪಡೆಯಲಿದ್ದಾರೆ. ವಾರ್ಷಿಕವಾಗಿ ವೇತನ 27,312 ರೂಪಾಯಿ ಹೆಚ್ಚಳವಾಗಲಿದೆ. ಸುಮಾರು 50 ಲಕ್ಷ ಕೇಂದ್ರ ಸರ್ಕಾರದ ನೌಕರರು ಪ್ರಯೋಜನ ಪಡೆಯಲಿದ್ದಾರೆ. ಉದ್ಯೋಗಿಗಳು ಸಂಬಳದಲ್ಲಿ ಕನಿಷ್ಠ 720 ರೂ. ಪ್ರತಿ ತಿಂಗಳಿನಿಂದ ಹಿಡಿದು 2276 ಸರಾಸರಿ ಗರಿಷ್ಠ ಏರಿಕೆ ಕಾಣಬಹುದಾಗಿದೆ.

Leave A Reply

Your email address will not be published.