RTO : ವಾಹನ ಸವಾರರೇ ಗಮನಿಸಿ | ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ಮುಂದೆ ಈ ರೀತಿ ಮಾಡಿದರೆ ಸಾಕು!
ವಾಹನ ಅಂದಾಗ ನಮಗೆ ವಾಹನ ಚಲಾಯಿಸಲು ತಿಳಿದಿರಬೇಕು. ಅದಕ್ಕೂ ಮೊದಲು ವಾಹನ ಚಲಾಯಿಸಲು ಕಲಿಯಬೇಕು, ವಾಹನ ಚಲಾಯಿಸಲು ಕಲಿತ ನಂತರ ಪರವಾನಿಗೆ ಪಡೆಯಬೇಕು. ಅಂತೂ ಪರವಾನಿಗೆ ಪಡೆಯುವಷ್ಟರಲ್ಲಿ ಅಲೆದಾಡಿ ಅಲೆದಾಡಿ ಸಾಕಾಗಿ ಹೋಗುತ್ತೆ. ಹೌದು ಸಾಮಾನ್ಯವಾಗಿ ನಾವು ಯಾವುದೇ ಒಂದು ವಾಹನ ಚಲಾಯಿಸುವುದನ್ನು ಕಲಿಯಲು ಹಾಗೂ ಚಾಲನಾ ಪರವಾನಿಗಿಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬೇಕು. ಅಲ್ಲದೇ ವಾಹನ ಕಲಿತ ಮೇಲೆ ಡ್ರೈವಿಂಗ್ ಟೆಸ್ಟ್ ಕೊಡುವುದಕ್ಕೆ ಪ್ರಾದೇಶಿಕ ಸಾರಿಗೆ ಕಚೇರಿ ಎಂದರೆ ಆರ್‌ಟಿಒ ಕಚೇರಿಗೆ ಅಲೆದಾಡಬೇಕಾಗುತ್ತದೆ.
ಬಹುತೇಕವಾಗಿ ವಾಹನ ಮೊದಲ ಬಾರಿಗೆ ಕಲಿತುಕೊಂಡು ಆರ್‌ಟಿಒ ಆಫೀಸ್ ಗೆ ಬಂದು ಅಧಿಕಾರಿಗಳ ಮುಂದೆ ವಾಹನ ಓಡಿಸಿ ತೋರಿಸಿ ಎಂದಾಗ ಭಯಭೀತರಾಗುತ್ತಾರೆ ಮತ್ತು ಕೇಳುವ ಮಾಹಿತಿಗಳಿಂದ ಮತ್ತು ದಾಖಲೆಗಳಿಂದ ತುಂಬಾನೇ ಕಿರಿಕಿರಿ ಸಹ ಅನುಭವಿಸುತ್ತಾರೆ.
ಜನರ ಪ್ರಕಾರ ವಾಹನ ಕಲಿತುಕೊಂಡ ನಂತರ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ತುಂಬಾನೇ ಒಂದು ಕಷ್ಟದ ಕೆಲಸ ಎನ್ನುತ್ತಾರೆ . ಬೇರೆ ಬೇರೆ ದೇಶಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದಕ್ಕೆ ಡ್ರೈವಿಂಗ್ ಟೆಸ್ಟ್ ಜೊತೆಗೆ ಪರೀಕ್ಷೆ ಸಹ ಬರೆಯಬೇಕಂತೆ.
ಕೆಲ ದೇಶಗಳಲ್ಲಿ ಪರೀಕ್ಷೆಯನ್ನು ಪಾಸ್ ಮಾಡದೆ ಇರುವವರಿಗೆ ಡ್ರೈವಿಂಗ್ ಲೈಸೆನ್ಸ್ ನೀಡುವುದೇ ಇಲ್ಲ . ಆದರೆ ಭಾರತದಲ್ಲಿ ವಾಹನ ಕಲಿತುಕೊಂಡು ಹೋಗಿ ಆರ್‌ಟಿಒ ಆಫೀಸ್ ನಲ್ಲಿ ಹೋಗಿ ಅಧಿಕಾರಿಗಳ ಮುಂದೆ ಗಾಡಿ ಅಥವಾ ವಾಹನ ಓಡಿಸಿ ತೋರಿಸಿದರೆ ಸಾಕು, ಅವರು ಅದನ್ನು ನೋಡಿ ಪರಿಶೀಲಿಸಿ ಡ್ರೈವಿಂಗ್ ಲೈಸೆನ್ಸ್ ನೀಡುತ್ತಾರೆ. ಆದರೆ ಇದಷ್ಟೇ ಕೆಲಸ ಮುಗಿಸಿಕೊಳ್ಳುವುದಕ್ಕೆ ನಾವು ಅದೆಷ್ಟು ಸಾರಿ ಆರ್‌ಟಿಒ ಆಫೀಸ್ ಗೆ ಸುತ್ತಿರುತ್ತೇವೆ ಎನ್ನುವುದರ ಲೆಕ್ಕ ಸಹ ಇಡುವುದಕ್ಕೆ ಆಗುವುದಿಲ್ಲ.
ಆದರೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಈಗ ಸುಲಭ
ಮಾರ್ಗವಿದೆ :
•ಈ ಹೊಸ ನಿಯಮದ ಪ್ರಕಾರ, ಪರೀಕ್ಷೆಯಿಲ್ಲದೆ ಚಾಲನಾ ಪರವಾನಗಿಯನ್ನು ಪಡೆಯಲು, ನೀವು ಮಾನ್ಯತೆ ಪಡೆದ ಚಾಲನಾ ಪರೀಕ್ಷಾ ಕೇಂದ್ರದಿಂದ ತರಬೇತಿಯನ್ನು ಪಡೆಯಬೇಕಾಗುತ್ತದೆ. ಈ ಕೇಂದ್ರಗಳು 5 ವರ್ಷಗಳ ಸಿಂಧುತ್ವವನ್ನು ಹೊಂದಿರಬೇಕು. ಇಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ನೀವು ಅವರು ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಉತ್ತೀರ್ಣರಾದ ನಂತರ, ಕೇಂದ್ರವು ನಿಮಗೆ ಪ್ರಮಾಣಪತ್ರವನ್ನು ನೀಡುತ್ತದೆ. ನೀವು ಸ್ವೀಕರಿಸಿದ ಈ ಪ್ರಮಾಣಪತ್ರದ ಆಧಾರದ ಮೇಲೆ, ಚಾಲನಾ ಪರವಾನಗಿಯನ್ನು ಆರ್‌ಟಿಒ ನೀಡುತ್ತದೆ.
• ಡ್ರೈವಿಂಗ್ ಟೆಸ್ಟ್ ಇನ್ನು ಮುಂದೆ ಅಗತ್ಯವಿಲ್ಲ
ಬದಲಾದ ನಿಯಮಗಳ ಪ್ರಕಾರ, ಪ್ರಸ್ತುತ, ಚಾಲನಾ ಪರವಾನಗಿ ಪಡೆಯಲು ನೀವು ಆರ್‌ಟಿಒ ಆಫೀಸ್ ಗೆ ಹೋಗಿ ಚಾಲನಾ ಪರೀಕ್ಷೆಯನ್ನು ನೀಡುವ ಅಗತ್ಯವಿಲ್ಲ. ಈಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ನಿಯಮವನ್ನು ಜಾರಿಗೆ ತಂದಿದೆ.
• ಡ್ರೈವಿಂಗ್ ಪರ್ಮಿಟ್ ಪಡೆಯಲು ಈಗ ನೀವು ಆರ್‌ಟಿಒ ಆಫೀಸ್ ನ ಬದಲಾಗಿ ಡ್ರೈವಿಂಗ್ ಸ್ಕೂಲ್ ಗೆ ಹೋಗಬೇಕಾಗುತ್ತದೆ. ಮತ್ತು ಯಾವುದೇ ಡ್ರೈವಿಂಗ್ ಸ್ಕೂಲ್ ಗೆ ಹೋಗಬಹುದು ಮತ್ತು ಪರ್ಮಿಟ್ ಗಾಗಿ ನಿಮ್ಮ ಹೆಸರನ್ನು ನೋಂದಾಯಿಸಬಹುದು. ಇದಲ್ಲದೆ, ನೀವು ಬಯಸಿದರೆ, ನೀವು ಡ್ರೈವಿಂಗ್ ಸ್ಕೂಲ್ ನಿಂದ ತಯಾರಿ ಮಾಡಬಹುದು ಮತ್ತು ಅಲ್ಲಿಂದ ನೀವು ತಯಾರಿಯ ಪ್ರಮಾಣಪತ್ರವನ್ನು ಸಹ ತೆಗೆದುಕೊಳ್ಳಬಹುದು. ಇದನ್ನು ಮಾಡುವುದರಿಂದ ಆರ್‌ಟಿಒ ಆಫೀಸ್ ನಲ್ಲಿ ಚಾಲನಾ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ. ನಿಮ್ಮ ಬಳಿ ಇರುವ ಪ್ರಮಾಣಪತ್ರವನ್ನು ಪರ್ಮಿಟ್ ಪೇಪರ್ ಗಳಲ್ಲಿ ಇರಿಸಿದ ನಂತರ ಕಳುಹಿಸಲಾಗುತ್ತದೆ. ಈ ರೀತಿಯಾಗಿ ನೀವು ನಿಮ್ಮ ಚಾಲನಾ ಪರವಾನಗಿಯನ್ನು ಸಹ ಪಡೆಯುತ್ತೀರಿ.
ಇನ್ನು ಮುಂದೆ ನೀವು ಆರ್‌ಟಿಒ ಆಫೀಸ್ ನಲ್ಲಿ ಉದ್ದನೆಯ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾಗಿಲ್ಲ ಮತ್ತು ನೀವು ಚಾಲನಾ ಪರೀಕ್ಷೆಯನ್ನು ಸಹ ನೀಡಬೇಕಾಗಿಲ್ಲ ಸುಲಭವಾಗಿ ವಾಹನ ಪರವಾನಿಗೆ ಪಡೆಯಬಹುದು.