ವಾಕಿಂಗ್ ಹೋಗುತ್ತಲೇ 70 ವರ್ಷದ ವ್ಯಕ್ತಿಗೆ ಡಿಕ್ಕಿ ಹೊಡೆದ ಯಂಗ್ ಲೇಡಿ | ಮದುವೆನೂ ಆಗಿರುವ ಇವರ ಡ್ಯಾಷಿಂಗ್ ಕಹಾನಿ ಹೇಗಿದೆ ಗೊತ್ತ?

ಪ್ರೀತಿ ಕುರುಡು ಎಂಬ ಮಾತಿದೆ. ಅದರಂತೆ ಪ್ರೀತಿ ಎಲ್ಲಿಂದ ಹೇಗೆ ಹುಟ್ಟಿಕೊಳ್ಳುತ್ತೇ ಅನ್ನೋದೇ ವಿಸ್ಮಯ. ಅದಕ್ಕೆ ಸಾಕ್ಷಿಯಂತಿದೆ ಇಲ್ಲೊಂದು ಕಡೆ ವೈರಲ್ ಆದ ಕಪಲ್ಸ್ ಲವ್ ಸ್ಟೋರಿ. ಯಾಕಂದ್ರೆ ಈ ಜೋಡಿಯ ಮೀಟ್ ಆಗಿದ್ದೆ ಡಿಕ್ಕಿ ಹೊಡೆದಂತೆ… ಅರೆ, ಏನಿದು ಡಿಕ್ಕಿ ಹೊಡೆದು ಹೊಡೆದುಕೊಳ್ಳಬೇಕಾದವರು ಪ್ರೀತಿಲಿ ಹೇಗೆ ಬಿದ್ರು ಅನ್ನೋರು ಇವರ ‘ಫಾಲಿಂಗ್ ಇನ್ ಲವ್ ‘ಸ್ಟೋರಿಯನ್ನು ಓದಿ..

ಇದು 19 ವರ್ಷದ ಯುವತಿ ಮತ್ತು 70 ವರ್ಷದ ವ್ಯಕ್ತಿಯ ಕಹಾನಿ. ಇವರೇ ಲಿಯಾಖತ್ ಅನ್ನೋ 70 ವರ್ಷದ ವ್ಯಕ್ತಿ ಮತ್ತು ಯುವತಿ ಶಮೈಲಾ. ಇವರು ಬೆಳಗಿನ ಜಾವ ವಾಕಿಂಗ್ ಹೋದಾಗ ಆಕೆ ಆತನಿಗೆ ಡಿಕ್ಕಿ ಹೊಡೆದಿದ್ದು, ಇದೆ ಅವರಿಬ್ಬರ ನಡುವೆ ಪ್ರೇಮಾಂಕುರವಾಗಲು ಕಾರಣವಾಗಿದೆ. ಬಳಿಕ ಲವ್ ಜಾಸ್ತಿ ಆಗಿ ಸಧ್ಯ ಮದುವೆಯೂ ಆಗಿದ್ದಾರೆ.

ಲಿಯಾಖತ್ ಮತ್ತು ಯುವತಿ ಶಮೈಲಾ ಲಾಹೋರ್ನಲ್ಲಿ ವಾಸಿಸುತ್ತಿದ್ದಾರೆ. ಸಧ್ಯ ಲಿಯಾಖತ್ ಅಲಿ ಲವ್ ಸ್ಟೋರಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಒಂದು ಬಾರಿ ಅವಳು ಶಮೈಲಾ ಹೋಗುತ್ತಿದ್ದಳು, ಹಾಗಾಗಿ ನಾನು ಹಿಂದಿನಿಂದ ಹಾಡು ಗುನುಗಲು ಪ್ರಾರಂಭಿಸಿದೆ. ಆಕೆ ನನ್ನತ್ತ ಹಿಂತಿರುಗಿ ನೋಡಿದ್ಲು. ಆಗ್ಲೇ ನನ್ನ ಹೃದಯಲ್ಲಿ ಪ್ರೀತಿ ಹುಟ್ಟಿತು ಎಂದು ಮೊದಲ ಭೇಟಿಯ ಬಗ್ಗೆ ಲಿಯಾಖತ್ ಹೇಳಿದ್ದಾರೆ.

ಮತ್ತೊಂದೆಡೆ, ಶಾಮೈಲಾಗೆ ಲಿಯಾಖತ್ ಅಲಿ ನಿನಗಿಂತ ತುಂಬಾ ದೊಡ್ಡವರಲ್ಲವೇ ಎಂದು ಪ್ರಶ್ನಿಸಿದ್ರೆ, ‘ನೋಡಿ, ಪ್ರೀತಿಯಲ್ಲಿ ವಯಸ್ಸು ಕಾಣೋದಿಲ್ಲ, ಅದು ಪ್ರೀತಿ ಆಗುತ್ತೆ. ಇದರಲ್ಲಿ ವಯಸ್ಸು ಯಾವುದು, ಜಾತಿ ಯಾವುದು ಅಂತಾ ಕಾಣುವುದಿಲ್ಲ. ಕೇವಲ ಪ್ರೀತಿ ಎಂದು ಕಾಣುವುದು ಎಂದು ಹೇಳಿದ್ದಾರೆ. ಮತ್ತೊಂದೆಡೆ ಲಿಯಾಖತ್ ಅಲಿ ಕೂಡ ಈ ವಿಚಾರದಲ್ಲಿ ಹೌದು ಎನ್ನುತ್ತಲೇ ಹೃದಯ ಯೌವನವಾಗಿರಬೇಕು, ವಯಸ್ಸಿನಲ್ಲಿ ಏನಿದೆ? ಈ ಸಂಬಂಧಕ್ಕೆ ಕುಟುಂಬಸ್ಥರು ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದರೂ, ಮನವರಿಕೆ ಮಾಡಿಕೊಟ್ಟಿದ್ದರು ಎಂದು ಶಾಮೈಲಾ ಹೇಳಿದ್ದಾರೆ.

ನಂತರ ಕುಟುಂಬಸ್ಥರು ನೀವು ರೆಡಿ ಆಗಿದ್ದರೆ ನಾವೇನು ಮಾಡಲು ಸಾಧ್ಯ ಎಂದರು. ಈ ವರ್ಷದ ಆರಂಭದಲ್ಲಿ ತಾವು ಮದುವೆಯಾಗಿದ್ದೇವೆ ಎಂದು ದಂಪತಿಗಳು ತಿಳಿಸಿದ್ದಾರೆ. ವಯಸ್ಸಿನ ಅಂತರದ ದಂಪತಿಗಳು ಮದುವೆಯಾಗಬೇಕೇ ಎಂದು ಲಿಯಾಖತ್ ಕೇಳಿದ್ರೆ, ಪ್ರತಿಯೊಬ್ಬರಿಗೂ ಅವರವರ ಆಶಯದಂತೆ ಬದುಕುವ ಹಕ್ಕು ಇದೆ ಎಂದು ಹೇಳಿದರು. ರೊಮ್ಯಾಂಟಿಕ್ ಆಗಿರಲು ವಯಸ್ಸಿನ ಮಿತಿ ಇಲ್ಲ ಎನ್ನುವ ಲಿಯಾಖತ್, ಪ್ರತಿಯೊಂದು ಯುಗಕ್ಕೂ ತನ್ನದೇ ಆದ ಪ್ರಣಯವಿದೆ. ಇಡೀ ಜೀವನವನ್ನು ಎಂಜಾಯ್ ಮಾಡಿದ್ದೇನೆ ಎಂದು ಹೇಳಿದ್ರೆ, ಲಿಯಾಖತ್ ಜೊತೆ ತುಂಬಾ ಖುಷಿಯಾಗಿದ್ದೇನೆ ಎನ್ನುತ್ತಾರೆ ಶಮೈಲಾ. ಒಟ್ಟಾರೆ, ಇವರಿಬ್ಬರ ಡ್ಯಾಷಿಂಗ್ ಸ್ಟೋರಿ ಸಕ್ಕತ್ ವೈರಲ್ ಆಗಿದೆ.

Leave A Reply

Your email address will not be published.