Baby Shamlee : ಬಾಲನಟಿ ಬೇಬಿ ಶಾಮಿಲಿ ಈಗ ಹೇಗಿದ್ದಾರೆ? ಫೋಟೋಸ್ ಇಲ್ಲಿದೆ

ಬೇಬಿ ಶಾಮಿಲಿ ಅವರು ಬಾಲನಟಿಯಾಗಿ ಈ ಮೊದಲು ಗುರುತಿಸಿಕೊಂಡಿದ್ದರು. 90ರ ದಶಕದಲ್ಲಿ ಅವರು ತಮ್ಮ ನಟನೆಯಿಂದ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದರು. ಸಣ್ಣ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ, ಹಲವು ಚಿತ್ರಗಳಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

1990ರಲ್ಲಿ ತಾನು ನಟಿಸಿದ ‘ಅಂಜಲಿ’ ಚಿತ್ರದ ಪಾತ್ರಕ್ಕಾಗಿ ಶಾಮಿಲಿ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಇದಲ್ಲದೆ, ಬಾಲ ನಟಿಯಾಗಿ ಅವರು ಕೇರಳ ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮೊದಲು ‘ಮತ್ತೆ ಹಾಡಿತು ಕೋಗಿಲೆ’ ಚಿತ್ರದ ಮೂಲಕ ನಟಿ ಶಾಮಿಲಿ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಹಲವು ಕನ್ನಡ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಶಾಮಿಲಿಗೆ ಬಾಲ ನಟಿಯಾಗಿದ್ದಾಗ ಸಿಕ್ಕಿರುವಷ್ಟು ಜನಪ್ರಿಯತೆ ನಟಿಯಾಗಿ ಸಿಕ್ಕಿಲ್ಲ. ನಟಿಯಾಗಿ ಅವರು ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಬೇಬಿ ಶಾಮಿಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಹಲವಾರು ಫೋಟೋಗಳನ್ನು ಅವರು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. 2018ರಲ್ಲಿ ತೆರೆಗೆ ಬಂದಂತಹ ‘ಅಮ್ಮಮ್ಮಗಾರಿಲು’ ಅವರ ಕೊನೆಯ ಸಿನಿಮಾಗಿದೆ. ಆ ಬಳಿಕ ಅವರು ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.

ನಟಿ ಬೇಬಿ ಶಾಮಿಲಿ ಅವರಿಗೆ 35 ವರ್ಷ ವಯಸ್ಸಾಗಿದ್ದು, ಅವರು ಇನ್ನೂ ಮದುವೆ ಆಗಿಲ್ಲ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇದ್ದು, ತಮ್ಮ ಇತ್ತೀಚಿನ ಫೋಟೋಸ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Leave A Reply

Your email address will not be published.