ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಅವರ ಪತಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಬಗ್ಗೆ ಈಗಾಗಲೇ ನಮಗೆಲ್ಲ ಗೊತ್ತಿದೆ ಇವರ ಬಗೆಗಿನ ಕೆಲವೊಂದು ಗಾಸಿಪ್ ವಿಚಾರಗಳು ಕೇಳಿ ಬರುತ್ತಿದ್ದು ಸತ್ಯಂಶ ಎಂದು ಎನ್ನುವುದು ಗೊಂದಲದಲ್ಲಿ ಇದೆ.
ಸಾನಿಯಾ ಮಿರ್ಜಾ ಮತ್ತು ಅವರ ಪತಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಹೊಸ ರಿಯಾಲಿಟಿ ಶೋನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಒಂದು ಸುದ್ದಿಯಾದರೆ ಇನ್ನೊಂದು ಕಡೆ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರೂ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಅದರಲ್ಲೂ ಕಾನೂನುಬದ್ಧವಾಗಿ ಬೇರ್ಪಡುತ್ತಿದ್ದಾರೆ ಎಂಬ ವರದಿಗಳ ನಡುವೆ, ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಅವರು ಶೀಘ್ರದಲ್ಲೇ ಉರ್ದು ಫ್ಲಿಕ್ಸ್‌ನಲ್ಲಿ ರಿಯಾಲಿಟಿ ಶೋ ಆಗಿರುವ ಮಿರ್ಜಾ ಮಲಿಕ್ ಶೋ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ. ಈ ವಿಚಾರಗಳು ಸಾವಿರಾರು ಅಭಿಮಾನಿಗಳಿಗೆ ಗೊಂದಲ ಉಂಟು ಮಾಡಿದೆ.

ಈ ಮಧ್ಯೆ, ಸಾನಿಯಾ ಅಥವಾ ಶೋಯೆಬ್ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಳ್ಳದ ಕಾರಣ ಸಾಕಷ್ಟು ಜನರು ಇನ್ನೂ ಗೊಂದಲದಲ್ಲಿಯೇ ಇದ್ದಾರೆ. ಇನ್ನು, ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ 2010 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2018 ರಲ್ಲಿ ತಮ್ಮ ಮಗ ಇಜಾನ್ ಅವರನ್ನು ಸ್ವಾಗತಿಸಿರುವ ಈ ದಂಪತಿ ಸದ್ಯ ದುಬೈ ನಲ್ಲಿ ನೆಲೆಸಿದ್ದಾರೆ. ಕೆಲವು ವರದಿಗಳು ಶೋಯೆಬ್‌ಗೆ ಪಾಕಿಸ್ತಾನಿ ಮಾಡೆಲ್ ಆಯೇಷಾ ಒಮರ್ ಜೊತೆ ಸಂಬಂಧವಿದೆ ಎಂಬುದಾಗಿಯೂ ವರದಿಗಳಾಗಿದ್ದವು. ಆದ್ರೆ ಈ ವಿಚಾರದಲ್ಲಿ ದಂಪತಿ ಇಲ್ಲಿಯವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ಇಷ್ಟಕ್ಕೆಲ್ಲ ಕಾರಣ ಕಳೆದ ವಾರವೆಲ್ಲಾ ಇಬ್ಬರು ಬೇರೆಯಾಗುತ್ತಾರೆ ಮತ್ತು ಅಂತಿಮವಾಗಿ ಡೈವೋರ್ಸ್ ಹಾದಿ ಹಿಡಿದಿದ್ದಾರೆ ಎಂಬ ಸುದ್ದಿ ವೈರಲ್ ಆಗಿರುವುದಾಗಿದೆ.
ಸ್ಟಾರ್ ಜೋಡಿಗಳನ್ನು ಒಳಗೊಂಡ ಕಾರ್ಯಕ್ರಮದ ಪೋಸ್ಟರ್ ಅನ್ನು ಹಂಚಿಕೊಂಡು ಪೋಸ್ಟ್ ನಲ್ಲಿ, “ಮಿರ್ಜಾ ಮಲಿಕ್ ಶೋ‘‘ ಅತಿ ಶೀಘ್ರದಲ್ಲಿ ಉರ್ದು ಫ್ಲಿಕ್ಸ್‌ನಲ್ಲಿ ಮಾತ್ರ” ಎಂದು ಬರೆಯಲಾಗಿದೆ. ಪೋಸ್ಟರ್‌ನಲ್ಲಿ ಸಾನಿಯಾ ಮತ್ತು ಶೋಯೆಬ್ ತನ್ನ ಭುಜದ ಮೇಲೆ ಕೈಯಿಟ್ಟು ಹಸಿರು ಗೋಡೆಯ ಮುಂದೆ ನಿಂತಿರುವುದನ್ನು ನೋಡಬಹುದು. ಒಂದು ಕಿಟಕಿಯು ಹಿನ್ನೆಲೆಯಲ್ಲಿ ಬುರ್ಜ್ ಖಲೀಫಾವನ್ನು ತೋರಿಸಲಾಗಿದೆ
ಈಗಾಗಲೇ ಉರ್ದು ಫ್ಲಿಕ್ಸ್ ನ ಈ ಇನ್ ಸ್ಟಾಗ್ರಾಂ ಪೋಸ್ಟ್ ಗೆ ಸಾಕಷ್ಟು ಕಾಮೆಂಟ್ ಗಳು ಬಂದಿವೆ. ಒಬ್ಬ ಅಭಿಮಾನಿ ‘ಇದನ್ನು ನೋಡಿ ತುಂಬಾ ಸಂತೋಷವಾಯಿತು. ಒಟ್ಟಿಗೆ ಇರಿ‘ ಎಂದು ಬರೆದಿದ್ದಾರೆ. ಇನ್ನು ಕೆಲವರು ಸೆಲೆಬ್ರಿಟಿಗಳಿಗೆ ಇದೆಲ್ಲ ಸಾಮಾನ್ಯ ವಿಷಯ ಎಂದು ಹಾಸ್ಯ ಮಾಡಿದ್ದಾರೆ.
ಈ ಮೇಲಿನ ವಿಚಾರ ಕುರಿತು ಸಾನಿಯಾ ಮತ್ತು ಶೋಯೆಬ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಅಭಿಮಾನಿಗಳು ವರದಿಗಳು ಸುಳ್ಳೇ ಅಥವಾ ಇದು ಪ್ರಚಾರದ ಛಾಯೆಯೋ ಎಂದು ಪ್ರಶ್ನೆ ಆಗಿದೆ .