18ರ ವಯಸ್ಸಿನಲ್ಲಿ ಇಬ್ಬರ ಬಾಳಿಗೆ ಬೆಳಕಾದ ಬಾಲಕಿ!!
ನಾವು ಎಷ್ಟು ದಿನ ಬದುಕುತ್ತೇವೆ ಅನ್ನುವುದಕ್ಕಿಂತ ಇದ್ದಷ್ಟು ದಿನ ಏನು ಮಾಡಿದ್ದೇವೆ ಅನ್ನೋದು ಮುಖ್ಯ. ಅದರಂತೆ ಕೆಲವೊಂದಷ್ಟು ಜನ ತಮ್ಮ ಅಂಗಾಗಗಳನ್ನು ದಾನ ಮಾಡುವ ಮೂಲಕ ಹಲವರಿಗೆ ಬದುಕು ನೀಡುತ್ತಾರೆ. ಅದರಂತೆ 18ರ ಬಾಲಕಿಯೊಬ್ಬಳು ತನ್ನ ಅನಾರೋಗ್ಯದ ಇಬ್ಬರ ಬಾಳಿಗೆ ಬೆಳಕಾಗಿದ್ದಾಳೆ.
ಹೌದು. ಬ್ರೈನ್ ಡೆಡ್ ಎಂದು ಘೋಷಿಸಲ್ಪಟ್ಟ 18 ತಿಂಗಳ ಬಾಲಕಿಯ ಕುಟುಂಬವು ಆಕೆಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಇಬ್ಬರು ರೋಗಿಗಳಿಗೆ ಹೊಸ ಜೀವವನ್ನು ನೀಡಿದ್ದಾರೆ. ಈ ಘಟನೆ ಹರಿಯಾಣದ ಮೇವಾತ್ ನಲ್ಲಿ ನಡೆದಿದ್ದು, ಮಹಿರಾ ಎನ್ನುವ ಬಾಲಕಿಯ ಅಂಗಾಗವೇ ಇತರರ ಬಾಳಿಗೆ ಬೆಳಕಾಗಿದ್ದು.
ಈಕೆ ನವೆಂಬರ್ 6 ರಂದು ತನ್ನ ಮನೆಯ ಬಾಲ್ಕನಿಯಿಂದ ಬಿದ್ದು, ತೀವ್ರ ಮೆದುಳಿಗೆ ಹಾನಿಗೆ ಒಳಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಏಮ್ಸ್ಗೆ ದಾಖಲಾಗಿದ್ದಳು. ಆಕೆ ಅಲ್ಲಿ ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಮಗಳ ಸಾವಿನ ದುಃಖದ ನಡುವೆಯೂ ಇನ್ನೊಬ್ಬರ ಜೀವಕ್ಕೆ ಆಸರೆಯಾಗಲಿ ಎಂದು ಕುಟುಂಬಸ್ಥರು ಆಕೆಯ ಅಂಗದಾನಕ್ಕೆ ಮುಂದಾದರು.
ಬಾಲಕಿಯ ಯಕೃತ್ತನ್ನು ಇನ್‌ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್‌ನಲ್ಲಿ (ಐಎಲ್‌ಬಿಎಸ್) ಆರು ತಿಂಗಳ ಮಗುವಿಗೆ ನೀಡಲಾಯಿತು. ಮೂತ್ರಪಿಂಡಗಳನ್ನು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ 17 ವರ್ಷದ ಹುಡುಗನಿಗೆ ಕಸಿ ಮಾಡಲಾಯಿತು. ಬಾಲಕಿಯ ಕಾರ್ನಿಯಾಗಳು ಮತ್ತು ಹೃದಯ ಕವಾಟಗಳನ್ನು ಸಂರಕ್ಷಿಸಿ ಇಡಲಾಗಿದೆ.
ಬಾಲಕಿ ಮೃತಪಟ್ಟ ಬಳಿಕ ಆಕೆಯ ಪಾಲಕರಿಗೆ ವೈದ್ಯರು ಕೌನ್ಸೆಲಿಂಗ್ ಮಾಡುವ ಮೂಲಕ ಹೇಗೆ ಅಂಗಾಂಗದಾನಕ್ಕೆ ಸಜ್ಜಾಗಬೇಕು ಎಂದು ತಿಳಿಸಿದರು. ನಂತರ ತಮ್ಮ ಮಗು ಸತ್ತ ಮೇಲೆಯೂ ಸಾರ್ಥಕತೆ ಮೆರೆಯುವುದರ ಬಗ್ಗೆ ಅರಿತ ಆಕೆಯ ಪಾಲಕರು ಅದನ್ನು ಒಪ್ಪಿ ಹಲವು ಜೀವಕ್ಕೆ ಆಸರೆಯಾಗಿದ್ದಾರೆ. ಒಟ್ಟಾರೆ ಇಂತಹ ದೊಡ್ಡ ಕಾರ್ಯ ಮಾಡುವ ಮೂಲಕ ಮಗಳ ಆತ್ಮಕ್ಕೆ ಶಾಂತಿ ದೊರಕಿಸಿದ್ದಾರೆ.