ಮನಸ್ಸು ಸದಾಕಾಲ ಉತ್ಸಾಹದಿಂದ ಕೂಡಿರಬೇಕು ಎಂದಾದರೆ, ಈ ಆಹಾರ ತಿನ್ನಿ

ನಾವು ಯಾವಾಗಲು ಉತ್ಸಾಹದಿಂದ ಇರಬೇಕು ನಮ್ಮಿಂದ ಯಾರಿಗೂ ಬೇಸರವಾಗಬಾರದು. ಮತ್ತು ಉತ್ಸಾಹ ಕಾರಣದಿಂದ ಹಲವಾರು ಸಾಧನೆಗಳು ಮಾಡಲು ಅಡ್ಡಿಯಾಗಬಾರದು . ಮೊದಲು ನಾವು ಯಾವುದೇ ಕೆಲಸ ಕಾರ್ಯ ಕೈಗೊಳ್ಳಲು ಪ್ರಯತ್ನ ಪಡಬೇಕು ಆದರೆ ಪ್ರಯತ್ನ ಪಡಲು ಉತ್ಸಾಹ ಇರಬೇಕು ಆದರೆ ನಮ್ಮ ಮನಸ್ಸು ಸದಾಕಾಲ ಉತ್ಸಾಹದಿಂದ ಚೈತನ್ಯದ ಹುರುಪಿನಿಂದ ಕೂಡಿರಬೇಕು ಎಂದಾದರೆ, ನಮ್ಮ ಮೂಡು ಸರಿಯಾಗಿ ಇರಬೇಕು. ಅಂದರೆ ನಮ್ಮಲ್ಲಿ ಖಿನ್ನತೆ ಕಾಡಬಾರದು. ಇವುಗಳಿಗೆ ಪರಿಹಾರ ಒಂದೇ ಒಮೆಗಾ 3 ಫ್ಯಾಟಿ ಆಸಿಡ್ ಆಹಾರದಲ್ಲಿರುವಂತೆ ನೋಡಿಕೊಳ್ಳಬೇಕು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಹೌದು ನಿಮಗೆ ಮೂಡಿಲ್ಲದ ಸಮಸ್ಯೆಯಿಂದ ಬಳಲುತ್ತೀರೋ ಅಥವಾ ಗೆಲುವಿನ ಮನಸ್ಥಿತಿ ಹೊಂದಿರುವುದಿಲ್ಲವೋ ಆಗ ಒಮೆಗಾ 3 ಫ್ಯಾಟಿ ಆಸಿಡ್ ಅಂಶ ಇರುವ ಆಹಾರಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ, ಇದರಲ್ಲಿ ನೈಸರ್ಗಿಕವಾಗಿ ಮನಸ್ಥಿತಿಯನ್ನು ಉತ್ತಮ ಪಡಿಸುವಂತಹ ಗುಣವಿದೆ. ಇದರಿಂದ ಉತ್ತಮ ಮನಸ್ಥಿತಿಗೆ ಕಾರಣವಾಗುವ ಸೆರಟೋನಿನ್ ಪ್ರಮಾಣ ಮಿದುಳಿನಲ್ಲಿ ಹೆಚ್ಚುತ್ತದೆ.


Ad Widget

ಒಮೆಗಾ 3 ಫ್ಯಾಟಿ ಆಸಿಡ್ ದೈನಂದಿನ ಆಹಾರದಲ್ಲಿ ಇರುವಂತೆ ನೋಡಿಕೊಳ್ಳುವ ಜತೆಗೆ ಧ್ಯಾನ ಮಾಡುವುದು ಮಾನಸಿಕ ಆರೋಗ್ಯಕ್ಕೆ ಅಗತ್ಯ.

Ad Widget

Ad Widget

Ad Widget

ನಮ್ಮ ಮಾನಸಿಕ ಆರೋಗ್ಯ ಮತ್ತು ಪೌಷ್ಟಿಕಾಂಶದ ನಡುವೆ ಇರುವ ಸಂಬಂಧವನ್ನು ಬಹಳಷ್ಟು ಅಧ್ಯಯನಗಳು ತಿಳಿಸಿವೆ. ನಿಮಗೆ ಗೊತ್ತಿರಬಹುದು. ನಮ್ಮ ಮಿದುಳಿನಲ್ಲಿ ಬಿಡುಗಡೆಯಾಗುವ ಡೊಪಮೈನ್ ಮತ್ತು ಸೆರಟೋನಿನ್ ಎನ್ನುವ ಹಾರ್ಮೋನುಗಳು ಮನುಷ್ಯನ ವರ್ತನೆ, ಮೂಡು ಮತ್ತು ಒತ್ತಡದ ಮೇಲೆ ಭಾರೀ ಪರಿಣಾಮ ಬೀರುತ್ತವೆ. ಸೆರಟೋನಿನ್ ಅಂಶವು ಒಂದು ಬಗೆಯ ನ್ಯೂರೋಟ್ರಾನ್ಸ್ ಮಿಟರ್ ಆಗಿದ್ದು, ಆಹಾರದಿಂದ ನೇರವಾಗಿ ಉತ್ತೇಜನವಾಗುವುದಿಲ್ಲ. ಆದರೆ, ಪ್ರೊಟೀನ್ ನಿಂದಾಗಿ ಉತ್ಪಾದನೆ ಆಗುವ ಅಮಿನೋ ಆಸಿಡ್ ಹಾಗೂ ಟ್ರೈಪ್ಟೊಫಾನ್ ಎನ್ನುವ ಅಂಶಗಳು ಸೆರಟೋನಿನ್ ಹೆಚ್ಚಲು ಕಾರಣವಾಗುತ್ತವೆ. ಈ ರೀತಿಯಲ್ಲಿ ಪೌಷ್ಟಿಕ ಆಹಾರ ಪರೋಕ್ಷವಾಗಿಯಾದರೂ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.

ಮನಸ್ಥಿತಿಯಲ್ಲಿ ಗೆಲುವು, ಉತ್ಸಾಹ ಇರಬೇಕೆಂದರೆ, ಒಮೆಗಾ 3 ಫ್ಯಾಟಿ ಆಸಿಡ್ ಸೇವನೆ ಮಾಡುವುದು ಅಗತ್ಯ. ಮೀನು ಬೀಜಗಳು,ಧಾನ್ಯ, ಬೆರಿ, ಅನಾನಸ್, ಬಾಳೆ ಹಣ್ಣುಗಳಲ್ಲಿ ಈ ಅಂಶ ಉತ್ತಮ ಪ್ರಮಾಣದಲ್ಲಿ ಇರುತ್ತದೆ. ಮೊಸರಿನಲ್ಲಿ ಇರುವ ಪ್ರೊಬಯಾಟಿಕ್ಸ್ ಕೂಡ ಇದಕ್ಕೆ ಸಹಾಯಕ. ನಿಮಗೆ ಅಚ್ಚರಿಯಾಗಬಹುದು. ಊಟದ ಜತೆ ಉಪ್ಪಿನಕಾಯಿ ಕೇವಲ ರುಚಿಗಲ್ಲ. ಸಣ್ಣ ಪ್ರಮಾಣದಲ್ಲಿ ಉಪ್ಪಿನಕಾಯಿ ಸೇವನೆ ಮಾಡುವುದು ಮನಸ್ಥಿತಿ ಉತ್ತೇಜನಕ್ಕೆ ಸಹಕಾರಿ. ಅಲ್ಲದೆ, ಉಪ್ಪಿನಕಾಯಿಯಿಂದ ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾಗುತ್ತದೆ. ಹಾಗೆಯೇ, ಕಾಫಿ ಮತ್ತು ಡಾರ್ಕ್ ಚಾಕೊಲೇಟ್ ಕೂಡ ಉತ್ತಮ ಆಗಿರುತ್ತದೆ.

ಮೊಟ್ಟೆ, ಹಾಲಿನ ಉತ್ಪನ್ನ, ವಾಲ್ ನಟ್, ಕುಂಬಳಕಾಯಿ ಬೀಜ, ಅಗಸೆ ಬೀಜ, ಸೂರ್ಯಕಾಂತಿ ಬೀಜಗಳನ್ನು ಸೇವನೆ ಮಾಡಿದರೆ ಮನಸ್ಥಿತಿ ಹದಗೆಡುವುದಿಲ್ಲ. ಹಾಗೆಯೇ, ವಿಟಮಿನ್ ಡಿ ಕೂಡ ಅತ್ಯುತ್ತಮ ಮೂಡ್ ಬೂಸ್ಟರ್. ದೇಹದಲ್ಲಿ ವಿಟಮಿನ್ ಡಿ ಅಂಶ ಸಾಕಷ್ಟು ಪ್ರಮಾಣದಲ್ಲಿರಬೇಕು. ಒಂದೊಮ್ಮೆ ಇದರಲ್ಲಿ ಕೊರತೆಯಾದರೆ ಮನಸ್ಥಿತಿ ಕುಸಿಯುತ್ತದೆ. ಹೀಗಾಗಿ, ದಿನದ ಸ್ವಲ್ಪ ಸಮಯವಾದರೂ ಸೂರ್ಯನ ಬೆಳಕಿನಲ್ಲಿ ಅಡ್ಡಾಡಬೇಕು, ಬೆಳಗಿನ ಬಿಸಿಲಿನಲ್ಲಿ ಕೆಲಸ ಮಾಡಬೇಕು. ವಿಟಮಿನ್ ಡಿ ನಮ್ಮ ದೇಹದಲ್ಲಿ ಸೆರಟೋನಿನ್ ಸಂಶ್ಲೇಷಣೆ ಮಾಡಲು ನೆರವಾಗುತ್ತದೆ.

ಇದೆಲ್ಲವನ್ನು ಮೀರಿದ ಮತ್ತು ಮನಸ್ಥಿತಿ ಅತಿಯಾಗಿ ಕುಸಿದಿದ್ದರೆ ಆಹಾರವೊಂದೇ ಇದನ್ನು ಸರಿಪಡಿಸಲು ಸಾಧ್ಯವಿಲ್ಲ. ವೈದ್ಯರ ನೆರವು ಪಡೆದುಕೊಳ್ಳಬೇಕು.

ಆದರೆ ನಿಮ್ಮಲ್ಲಿ ಕೆಲವೊಮ್ಮೆ ಯಾಕೋ ಇದ್ದಕ್ಕಿದ್ದ ಹಾಗೆ ಮೂಡ್ ಆಫ್ ಆಗುತ್ತದೆ. ಯಾವುದರಲ್ಲೂ ಆಸಕ್ತಿ ಮೂಡದೇ ಸುಮ್ಮನೆ ಸೋಮಾರಿಯಾಗಿ ಕಾಲ ಕಳೆಯುವ ಮನಸ್ಸಾಗುತ್ತದೆ. ಆದರೆ, ದೀರ್ಘಕಾಲ ಹೀಗೆಯೇ ಆದರೆ ನಮ್ಮಲ್ಲೇ ಒಂದು ರೀತಿಯ ಅಸಹನೆ, ಕಿರಿಕಿರಿ ಶುರುವಾಗುವುದು ಇವುಗಳನ್ನು ಹೋಗಲಾಡಿಸಿ ಸದಾ ಉತ್ಸಾಹ ಚೈತನ್ಯ ಭರಿತರಾಗಿರಲು ಒಮೆಗಾ 3 ಫ್ಯಾಟಿ ಆಸಿಡ್ ಇರುವಂತ ಆಹಾರಗಳನ್ನು ಸೇವಿಸುವುದು ಉತ್ತಮವಾಗಿದೆ.

error: Content is protected !!
Scroll to Top
%d bloggers like this: