Whatsapp Community : ಜನರಿಗೆ ವಾಟ್ಸಪ್ ನ ಹೊಸ ಫೀಚರ್ಸ್ ಬಿಡುಗಡೆ | ಬಹುನಿರೀಕ್ಷಿತ ಕಮ್ಯೂನಿಟಿ ಫೀಚರ್ಸ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ!

ದಿನನಿತ್ಯದ ದಿನಚರಿಯ ಅವಿಭಾಜ್ಯ ಭಾಗವಾಗಿ, ಎಲ್ಲರ ಕೈಯಲ್ಲೂ ಹರಿದಾಡುವ ಮೊಬೈಲ್ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ಮೆಟಾ (Meta) ಮಾಲೀಕತ್ವದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಪ್ , ವಿಶ್ವದಲ್ಲಿಂದು ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಅಪ್ಲಿಕೇಶನ್ ಆಗಿ ಬೆಳೆದಿದ್ದು, ಈ ವರ್ಷ ಹಲವು ಫೀಚರ್​ಗಳನ್ನು ಪರಿಚಯಿಸಿ ಮತ್ತಷ್ಟು ಪ್ರಸಿದ್ಧಿ ಪಡೆದುಕೊಂಡಿದೆ.

ದಿನಕ್ಕೊಂದು ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿರುವ ವಾಟ್ಸ್​ಆ್ಯಪ್ ಇದೀಗ ಬಹುನಿರೀಕ್ಷಿತ ಕಮ್ಯೂನಿಟಿ ಫೀಚರ್ಸ್‌ ಅನ್ನು (WhatsApp Community) ಪರಿಚಯಿಸಿದೆ. ಆಂಡ್ರಾಯ್ಡ್, ಐಒಎಸ್ ಮತ್ತು ವಾಟ್ಸ್​ಆ್ಯಪ್ ವೆಬ್ ಬಳಕೆದಾರರಿಗೆ ಈ ನೂತನ ಫೀಚರ್ಸ್ ಲಭ್ಯವಾಗುತ್ತಿದೆ.

ವಾಟ್ಸ್​ಆ್ಯಪ್ (WhatsApp) ವಿನೂತನವಾದ ಅಪ್ಡೇಟ್ ಮೂಲಕ ಸುದ್ದಿಯಾಗುತ್ತಲೇ ಇದ್ದು, ವಾಟ್ಸ್​ಆ್ಯಪ್​ನಲ್ಲಿ ಸಾಲು ಸಾಲು ಅಪ್ಡೇಟ್​ಗಳು ಬರಲು ತಯಾರಾಗಿ ನಿಂತಿದ್ದು, ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ಆಂಡ್ರಾಯ್ಡ್, ಐಒಎಸ್ ಮತ್ತು ವಾಟ್ಸ್​ಆ್ಯಪ್ ವೆಬ್ ಬಳಕೆದಾರರಿಗೆ ಈ ನೂತನ ಫೀಚರ್ಸ್ ಲಭ್ಯವಾಗುತ್ತಿದೆ. ಈ ಫೀಚರ್ ಅನ್ನು ಗ್ರೂಪ್‌ಗಳ ಗ್ರೂಪ್‌ ಎಂದು ಹೇಳಬಹುದಾಗಿದ್ದು, ವಾಟ್ಸ್​ಆ್ಯಪ್​ನಲ್ಲಿ ಆಡ್ಮಿನ್‌ಗಳು ನಿರ್ದಿಷ್ಟ ಗುಂಪುಗಳಿಗೆ ಅಥವಾ ಇಡೀ ಸಮುದಾಯಕ್ಕೆ ವಿಚಾರವನ್ನು ಗುಂಪಿನ ಮೂಲಕ ಸಂದೇಶಗಳನ್ನು ಕಳುಹಿಸಲು ಈ ಅಪ್ಲಿಕೇಶನ್ ನೆರವಾಗುತ್ತದೆ.

ವಾಟ್ಸ್​ಆ್ಯಪ್​ ಕಮ್ಯೂನಿಟಿಗಳು ಜನರಿಗೆ ಕೆಲಸ ಮಾಡುವ ರಚನೆಯೊಂದಿಗೆ ಪ್ರತ್ಯೇಕ ಗುಂಪುಗಳನ್ನು ಒಂದೇ ಸೂರಿನಡಿಯಲ್ಲಿ ತರಲು ಅನುವು ಮಾಡಿಕೊಟ್ಟು ಗ್ರಾಹಕರಿಗೆ ನೆರವಾಗಲಿದೆ. ಇದೇ ರೀತಿಯಲ್ಲಿ ಕಮ್ಯೂನಿಟಿ ಕಳುಹಿಸುವ ಕಂಪ್ಲೀಟ್‌ ಅಪ್ಡೇಟ್‌ಗಳನ್ನು ಜನರು ಪಡೆಯಬಹುದಾಗಿದೆ. ಇಷ್ಟೇ ಅಲ್ಲದೆ, ಕಮ್ಯೂನಿಟಿ ಗ್ರೂಪ್‌ನಲ್ಲಿ ಬಹು ಮುಖ್ಯ ವಿಚಾರಗಳ ಕುರಿತು ಸಣ್ಣ ಚರ್ಚಾ ಗುಂಪುಗಳನ್ನು ಸುಲಭವಾಗಿ ಒಂದೇ ಸೂರಿನಡಿ ಸಂಘಟಿಸಬಹುದಾಗಿದೆ.

ಇದರಲ್ಲಿ, ಅನೇಕ ಗುಂಪುಗಳನ್ನು ಏಕಕಾಲದಲ್ಲಿ ಸೇರಿಸಬಹುದಾದ ವಿಶೇಷತೆಯನ್ನು ಒಳಗೊಂಡಿದ್ದು, ಜೊತೆಗೆ ನೀವು ಎಲ್ಲಾ ಗುಂಪುಗಳ ನವೀಕರಣಗಳನ್ನು ಒಂದೇ ಸ್ಥಳದಲ್ಲಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಗೌಪ್ಯತೆಯ ಕಾರಣಗಳಿಗಾಗಿ ಗುಂಪುಗಳಲ್ಲಿನ ಸದಸ್ಯರ ಸಂಖ್ಯೆಯನ್ನು ಅಡ್ಮಿನ್ ಹೊರತಾಗಿ ಇತರರಿಗೆ ಕಾಣಿಸದೇ ಇರುವ ಹಾಗೆ ಈ ಗ್ರೂಪ್‌ಗಳ ಫೀಚರ್ ತರಲಾಗಿದೆ.

ನಿರ್ದಿಷ್ಟ ಉದ್ದೇಶಕ್ಕಾಗಿ ರಚಿಸಿಕೊಳ್ಳಬಹುದಾದ ಸಮುದಾಯದ ಗ್ರೂಪ್‌ನಲ್ಲಿ ಆಹ್ವಾನಿಸಲಾದ ಬಳಕೆದಾರರು ತಮ್ಮ ಆಸಕ್ತಿಗಳ ಆಧಾರದ ಮೇಲೆ ಯಾವ ಗ್ರೂಪ್ ಅನ್ನು ಸೇರಬೇಕೆಂದು ನಿರ್ಧರಿಸಬಹುದಾಗಿದೆ. ಈ ಹೊಸ ಫೀಚರ್​ನಲ್ಲಿ ಇರುವ ಸಂದೇಶಗಳು ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್ ಅನ್ನು ಸಹ ಪಡೆದಿವೆ. ಈಗಾಗಲೇ ಹೇಳಿರುವಂತೆ ಬಳಕೆದಾರರ ಪ್ರೈವೆಸಿಯನ್ನು ರಕ್ಷಿಸಲು ವಾಟ್ಸ್​ಆ್ಯಪ್​ ಕಮ್ಯೂನಿಟಿ ಫೋನ್ ಸಂಖ್ಯೆಗಳನ್ನು ಹೈಡ್‌ ಮಾಡುತ್ತದೆ. ಟೆಲಿಗ್ರಾಮ್ ಚಾನೆಲ್‌ಗಳ ರೀತಿಯಲ್ಲೇ ವಾಟ್ಸ್​​ಆ್ಯಪ್ ಗ್ರೂಪಿನ ವಿಸ್ತಾರವನ್ನು ಮಿತಿಗೊಳಿಸುತ್ತದೆ.

ಉದಾಹರಣೆ ನೀಡುವುದಾದರೆ , ಆಫೀಸ್ ಸಿಬ್ಬಂದಿಗಳು ತ್ವರಿತವಾಗಿ ಮೀಟಿಂಗ್ ನಡೆಸುವ ಕುರಿತಾಗಿ ಮಾಹಿತಿ ಕ್ಷಣಮಾತ್ರದಲ್ಲಿಯೆ ಹಂಚಿಕೊಂಡು ಉದ್ಯೋಗಿಗಳ ಜೊತೆಗೆ ವಿವರಣೆ ನೀಡಬಹುದು ಅಥವಾ ಮೀಟಿಂಗ್ ನಡೆಸಬಹುದು. ಅಥವಾ, ಶಾಲಾ ಮಕ್ಕಳು ಕಡ್ಡಾಯವಾಗಿ ಓದಬೇಕಾದ ವಿಷಯಗಳನ್ನು ಹಂಚಿಕೊಳ್ಳಲು ಎಲ್ಲಾ ಪೋಷಕರನ್ನು ಒಟ್ಟಿಗೆ ಸೇರಿಸಬಹುದು ಮತ್ತು ನಿರ್ದಿಷ್ಟ ತರಗತಿಗಳು, ಪಠ್ಯೇತರ ಚಟುವಟಿಕೆಗಳು ಅಥವಾ ಸ್ವಯಂಸೇವಕ ಅಗತ್ಯಗಳ ಬಗ್ಗೆ ಗುಂಪುಗಳನ್ನು ಹೊಂದಿಸಬಹುದಾಗಿದೆ.

ಈ ಗುಂಪುಗಳು ನಿರ್ದಿಷ್ಟ ಉದ್ದೇಶಕ್ಕಾಗಿ ರಚಿಸಿಕೊಳ್ಳಬಹುದಾದ ಸಮುದಾಯದ ಗ್ರೂಪ್‌ಗಳಾಗಿ ಈ ಫೀಚರ್ ಕಾರ್ಯನಿರ್ವಹಿಸಲಿವೆ. ವಾಟ್ಸ್​ಆ್ಯಪ್​ನಲ್ಲಿನ ಪ್ರತಿಯೊಂದು ಕಮ್ಯೂನಿಟಿ ಗುಂಪುಗಳ ವಿವರಣೆ ಮತ್ತು ಮೆನುವನ್ನು ಹೊಂದಿರುತ್ತದೆ. ಅಲ್ಲದೆ ನೀವು ಯಾವ ಜನರು ಕಮ್ಯೂನಿಟಿ ಸೇರಬಹುದು ಎನ್ನುವ ಆಯ್ಕೆ ಮಾಡುವ ಅವಕಾಶ ಕೂಡ ಕಲ್ಪಿಸಲಾಗಿದೆ.

ಇನ್ನು ವಾಟ್ಸ್​ಆ್ಯಪ್​ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಮೆಸೇಜ್ ವಿಥ್ ಯುವರ್​ಸೆಲ್ಫ್ ಎಂಬ ಹೊಸ ಫೀಚರ್ ಅನ್ನು ಪರಿಚಯಿಸುವ ಬಗ್ಗೆ ಕೂಡ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಸದ್ಯಕ್ಕೆ ಬೀಟಾ ವರ್ಷನ್​ನಲ್ಲಿ ಈ ಆಯ್ಕೆ ಕಾಣಿಸಿಕೊಂಡಿದೆ ಎನ್ನಲಾಗುತ್ತಿದ್ದು, ವಾಟ್ಸ್​ಆ್ಯಪ್​ನಲ್ಲಿ ನಿಮಗೆ ನೀವೇ ಮೆಸೇಜ್ ಮಾಡಲು ಈಗಲು ಸಾಧ್ಯವಿದೆ.

ಆದರೆ, ಅದು ಗ್ರೂಪ್ ಒಂದನ್ನು ರಚಿಸಿ ನೀವೊಬ್ಬರೆ ಆ ಗ್ರೂಪ್​ನ ಸದಸ್ಯರಾಗಿ ಮೆಸೇಜ್ ಮಾಡಬಹುದಾದ ಅವಕಾಶ ದೊರೆಯಲಿದೆ. ಆದರೀಗ ವಾಟ್ಸ್​ಆ್ಯಪ್ ನೀಡಲಿರುವ ಈ ಹೊಸ ಆಯ್ಕೆಯಲ್ಲಿ ಕಾಂಟೆಕ್ಟ್​ ಲಿಸ್ಟ್​ನಲ್ಲಿ ಬೇರೆಯವರ ನಂಬರ್ ಜೊತೆ ನಿಮ್ಮ ನಂಬರ್ ಕೂಡ ಕಾಣಲಿದೆ. ಆ ನಂಬರ್ ಮೇಲೆ ಕ್ಲಿಕ್ ಮಾಡಿದರೆ ಚಾಟ್ ಬಾಕ್ಸ್ ಕೂಡ ತೆರೆಯಲಿದ್ದು ಆಗ ನಿಮಗೆ ನೀವೇ ಮಸೇಜ್ ಮಾಡಬಹುದಾದ ಹೊಸ ಅವಕಾಶ ಕಲ್ಪಿಸಲು ಕಂಪೆನಿ ಭರದ ತಯಾರಿ ನಡೆಯುತ್ತಿದೆ.

Leave A Reply

Your email address will not be published.