ಮೂಗು ಚುಚ್ಚಿಸಿಕೊಂಡ ಚಂದನವನದ ಮುದ್ದು ನಟಿ ಹರಿಪ್ರಿಯಾ | ಮದುವೆ ತಯಾರಿ ಆಗ್ತಿದೆಯಾ?

ನಟಿ ಹರಿಪ್ರಿಯಾ ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು ಹದಿನಾಲ್ಕು ವರ್ಷಗಳಾಗಿವೆ. ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಕೂಡ. ಕನ್ನಡ ಚಿತ್ರರಂಗದ ಈ ಮುದ್ದು ಮುಖದ ಚೆಲುವೆ ಹರಿಪ್ರಿಯಾ ಇದೀಗ ಮೂಗು ಚುಚ್ಚಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಹರಿಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೆ, ನಟಿಗೆ ಮದುವೆ ಫಿಕ್ಸ್ ಆಗಿದೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.

ನಟಿ ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುತ್ತಿರುವ ವೀಡಿಯೋ ಒಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಹಿನ್ನೆಲೆಯಲ್ಲಿ ಮಂತ್ರಘೋಷಗಳ ಸದ್ದು ಕೇಳಿ ಬರುತ್ತಿತ್ತು. ಅಂದವಾಗಿ ಸೀರೆಯುಟ್ಟು ನಟಿ ಹರಿಪ್ರಿಯಾ ಪರಂಪರೆಯ ಹಾಗೆ ಮೂಗು ಚುಚ್ಚಿಸಿಕೊಂಡಿದ್ದಾರೆ. ಮೂಗು ಚುಚ್ಚಿಸಿಕೊಳ್ಳುವಾಗ ನೋವಾಯಿತೆಂದು ಕಣ್ಣುಗಳಲ್ಲಿ ತುಂಬಿಕೊಂಡ ನೀರು ಸಾಕ್ಷಿಯಾಗಿತ್ತು. ಪಕ್ಕದಲ್ಲೇ ಇದ್ದ ಮನೆಯವರು ನೋವಿನ ಮುಖ ಹೊತ್ತಿದ್ದ ನಟಿಗೆ ಮುದ್ದಾಗಿ ಸಮಾಧಾನ ಮಾಡುತ್ತಾರೆ. ಕೊನೆಗೆ ಮೂಗು ಚುಚ್ಚಿಸಿಕೊಂಡ ಖುಷಿಯಲ್ಲಿ ನಟಿ ಹರಿಪ್ರಿಯಾ ಮುಗುಳ್ನಗುತ್ತಾರೆ.

https://www.instagram.com/reel/Ck3OgvAh_OH/?igshid=YmMyMTA2M2Y=

ಪೋಸ್ಟ್ ಜೊತೆಗೆ ಬದುಕಿನ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. ‘ಬದುಕಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ. ತೆರೆಯ ಮೇಲೆ ಈವರೆಗೆ ಸಾಕಷ್ಟು ಬಾರಿ ಮೂಗುತಿ ಧರಿಸಿ ಕಾಣಿಸಿಕೊಂಡಿದ್ದೇನೆ. ಆದರೆ ಅದ್ಯಾವುದೂ ರಿಯಲ್ ಆಗಿರಲಿಲ್ಲ. ಈಗ ನಿಮ್ಮೆದುರು ಕಾಣುತ್ತಿರುವುದು ಮಾತ್ರ ರಿಯಲ್. ನನಗಿದು ಬಹಳ ಖುಷಿ ಕೊಟ್ಟಿದೆ. ಯಾವತ್ತೂ ಖುಷಿ ಕೊಡುತ್ತದೆ’ ಎಂದು ನಟಿ ಹರಿಪ್ರಿಯಾ ವೀಡಿಯೋ ಜೊತೆ ಬರೆದುಕೊಂಡಿದ್ದಾರೆ. ಇದನ್ನು ಬಹಳಷ್ಟು ಮಂದಿ ಲೈಕ್‌ ಮಾಡಿದ್ದಾರೆ. ಹಾಗೂ ನಟಿಯ ಹೊಸ ಲುಕ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನೂ, ಮದುವೆಯ ಹೊತ್ತಿಗೆ ಮೂಗು ಚುಚ್ಚಿಸಿಕೊಳ್ಳುವ ಸಂಪ್ರದಾಯ ಕೆಲವು ಕಡೆ ಇದೆ. ಚಿಕ್ಕ ವಯಸ್ಸಲ್ಲಿ ಮೂಗು ಚುಚ್ಚಿಸಿಕೊಳ್ಳದವರು ಮದುವೆಯ ಹೊತ್ತಿಗೆ ಮೂಗುತಿ ಹಾಕಿಕೊಳ್ಳುತ್ತಾರೆ. ಹೀಗಾಗಿ ಹರಿಪ್ರಿಯಾ ಅವರ ಈ ವೀಡಿಯೋ ನೋಡಿರುವ ಹಲವರು ನಟಿ ಮದುವೆ ಆಗ್ತಿದ್ದಾರೆ ಅಂತ ಕಾಮೆಂಟ್ ಮಾಡಿದ್ದಾರೆ. ಮದುವೆ ಆಗ್ತಿರೋದಕ್ಕೆ ಈ ಮೂಗುತಿ ಚುಚ್ಚಿಸಿಕೊಂಡಿದ್ದಾರೆ ಅಂತ ಸುದ್ದಿ ಹರಿದಾಡುತ್ತಿದೆ.

ಇನ್ನೂ, ನಟಿ ಹರಿಪ್ರಿಯಾ ಮದುವೆ ಆಗ್ತಿರೋದು ನಿಜನಾ ಎಂಬ ಪ್ರಶ್ನೆಗೆ ಸದ್ಯಕ್ಕೆ ಯಾವುದೇ ಉತ್ತರ ಸಿಕ್ಕಿಲ್ಲ. ಆದರೆ ಇತ್ತೀಚೆಗೆ ಹರಿಪ್ರಿಯಾ ಉಪೇಂದ್ರ ಜೊತೆಗಿನ ಸಿನಿಮಾ ಬಿಟ್ಟರೆ ಬೇರೆ ಯಾವ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ. ಜೊತೆಗೆ ಅವರ ವಯಸ್ಸು ಮೂವತ್ತೊಂದಾಯ್ತು. ಈಗ ಮೂಗು ಚುಚ್ಚಿಸಿಕೊಂಡಿರುವುದರಿಂದ ಇವೆಲ್ಲ ಹರಿಪ್ರಿಯಾ ಮದುವೆ ಆಗ್ತಿದ್ದಾರೆ ಅನ್ನೋ ಸುದ್ದಿಗೆ ಪುಷ್ಠಿ ನೀಡುತ್ತಿದೆ. ಈ ಗುಡ್‌ನ್ಯೂಸ್‌ ಅವರು ಯಾವಾಗ ಬಾಯ್ಬಿಟ್ಟು ಹೇಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

Leave A Reply

Your email address will not be published.