Post Office Recruitment 2022: ಅಂಚೆ ಇಲಾಖೆಯಲ್ಲಿ ಉದ್ಯೋಗವಕಾಶ!

ಭಾರತೀಯ ಅಂಚೆ ಇಲಾಖೆ 2022ನೇ ಸಾಲಿನ ನೇಮಕಾತಿಯನ್ನು ಮುಂದುವರೆಸಿದ್ದು, ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸರ್ಕಾರಿ ಇಲಾಖೆಯಿಂದ ಅಂಚೆ ಕಚೇರಿಯಲ್ಲಿ ಖಾಲಿ ಇರುವ 98083ಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿದೆ. ಅರ್ಜಿ ಸಲ್ಲಿಕೆಗೆ ಬೇಕಾದ ಮಾನದಂಡಗಳು, ಅರ್ಹತೆಗಳು ಏನು? ಹೇಗೆ ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು? ಅಭ್ಯರ್ಥಿಗಳಿಗೆ ವಯಸ್ಸಿನ ನಿರ್ಬಂಧ ಏನಿದೆ? ಎಂಬುದರ ಮಾಹಿತಿ ಇಲ್ಲಿದೆ.

ಈ ನೇಮಕಾತಿ ಪ್ರಕ್ರಿಯೆಯೂ ರಾಷ್ಟ್ರಾದ್ಯಂತ 23 ವೃತ್ತದ (ಸರ್ಕಲ್) ಅಂಚೆ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಒಳಗೊಂಡಿದ್ದು, ಆದಷ್ಟು ಶೀಘ್ರವೇ ಅವುಗಳ ಭರ್ತಿ ಕಾರ್ಯ ನಡೆಯಲಿದೆ. ದೇಶಾದ್ಯಂತ ಪೋಸ್ಟ್ ಮನ್, ಮೇಲ್ ಗಾರ್ಡ್ ಸೇರಿದಂತೆ ಒಟ್ಟು 98,083 ವಿವಿಧ ಖಾಲಿ ಹುದ್ದೆಗಳಿಗೆ ಅರ್ಹ ಆಸಕ್ತರು ಅರ್ಜಿ ಸಲ್ಲಿಬಹುದಾಗಿದೆ.

ಭಾರತದೆಲ್ಲೆಡೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ನವೆಂಬರ್ 30, 2022.

ಪೋಸ್ಟಮನ್: 59,099
ಮೇಲ್ ಗಾರ್ಡ್ ಹುದ್ದೆ: 1445

ವಿದ್ಯಾರ್ಹತೆ: ಆಹ್ವಾನಿಸಿರುವ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದ್ದು, ಕೆಲವು ಹುದ್ದೆಗಳಿಗೆ ದ್ವಿತೀಯ ಪಿಯುಸಿ ತೇರ್ಗಡೆ ಆಗಿರಬೇಕು. ಪ್ರತೀಹುದ್ದೆಗೂ ಭಿನ್ನ ವಿದ್ಯಾರ್ಹತೆ ಇದ್ದು, ಅಭ್ಯರ್ಥಿಗಳು ಶೈಕ್ಷಣಿಕ ಅಗತ್ಯತೆ ಅನುಗುಣವಾಗಿ ಮೊದಲು ಅರ್ಜಿ ಸಲ್ಲಿಕೆ ವಿಧಾನ ಖಚಿತಪಡಿಸಿಕೊಂಡು ಸಲ್ಲಿಸಬೇಕು.

ವಯೋಮಿತಿ : 18ರಿಂದ 32ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆಗೆ ಭಾರತೀಯ ಅಂಚೆ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಇಲಾಖೆ ತಿಳಿಸಿದೆ.

Leave A Reply

Your email address will not be published.