Viral Video : ಸೊಸೆಯ ಮಸ್ತ್ ಡ್ಯಾನ್ಸ್ ಅತ್ತೆ ಮುಂದೆ | ಅತ್ತೆಯ ರಿಯ್ಯಾಕ್ಷನ್ ಏನು? ಈ ವೀಡಿಯೊ ನೋಡಿ!

ಎಷ್ಟೋ ಮನೆಗಳಲ್ಲಿ ಅತ್ತೆ ಮತ್ತು ಸೊಸೆಗೆ ಏನು ಮಾಡಿದರೂ ಹೊಂದಾಣಿಕೆ ಆಗುವುದಿಲ್ಲ. ಅತ್ತೆ, ಸೊಸೆ ಜಗಳ ಎಲ್ಲಾ ಮನೆಗಳಲ್ಲೂ ಸಾಮಾನ್ಯವಾಗಿರುತ್ತದೆ. ಅದರಲ್ಲಿ ಎಲ್ಲೋ ಒಂದೆರಡು ಮನೆಗಳಲ್ಲಿ ಅತ್ತೆ, ಸೊಸೆ ಅನ್ಯೋನ್ಯವಾಗಿರುತ್ತಾರೆ. ಆದರೆ ಇಲ್ಲೊಂದು ಮನೆಯಲ್ಲಿ ಅತ್ತೆ, ಸೊಸೆ ನಡುವಿನ ಬಾಂಧವ್ಯ ನೋಡಿದರೆ ಅಚ್ಚರಿಯಾಗುತ್ತದೆ. ಹಾಗಾದರೆ ಅವರ ಬಾಂಧವ್ಯ ಹೇಗಿದೆ ಎಂದು ನೋಡೋಣ.

 

ಇನ್ನೂ, ಈ ವೀಡಿಯೋ ವೈರಲ್ ಆಗಿದ್ದು, ಅತ್ತೆ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಮತ್ತು ಸೊಸೆ ಸೀರೆ ತೊಟ್ಟು ಅಡುಗೆ ಮನೆಯ ಮುಂದೆ ಬಂದು ಫುಲ್ ಖುಷಿಯಿಂದ ಹಿಂದಿಯ ಐಟಂ ಸಾಂಗ್ ಒಂದಕ್ಕೆ ಡ್ಯಾನ್ಸ್ ಮಾಡಲು ಪ್ರಾರಂಭಿಸುತ್ತಾಳೆ.

ನಂತರ ಸೊಸೆ ಅಡುಗೆ ಮನೆಯಲ್ಲಿರುವ ಅತ್ತೆಯ ಬಳಿ ಹೋಗಿ ಕುಣಿಯಲು ಪ್ರಾರಂಭಿಸುತ್ತಾಳೆ. ಇದನ್ನು ನೋಡಿ ಅತ್ತೆ ಕೂಡ ಸೊಸೆಯ ಡ್ಯಾನ್ಸ್ ಗೆ ಖುಷಿಯಿಂದ ಮುಗುಳ್ನಕ್ಕರು. ಅತ್ತೆ ಸೊಸೆಯ ನೃತ್ಯಕ್ಕೆ ಇಷ್ಟು ಕೂಲ್ ಆಗಿರುವುದು ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ಇನ್ನೂ, ಅತ್ತೆಯ ಪ್ರತಿಕ್ರಿಯೆಗಾಗಿ ಕಾಯಿರಿ ಎಂದು ಈ ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಹಾಗೂ ಆಕೆ ಅದೃಷ್ಟವಂತಳು ಅಂತಹ ಅತ್ತೆಯನ್ನು ಪಡೆಯಲು ಎಂದೂ ಕೂಡ ಬರೆಯಲಾಗಿದೆ.

https://www.instagram.com/reel/Cja2t9Kqrm3/?igshid=YmMyMTA2M2Y=

ಇನ್ನೂ, ಅತ್ತೆ ಮತ್ತು ಸೊಸೆಯ ಈ ಜೋಡಿ ಜನರನ್ನು ಸಾಕಷ್ಟು ರಂಜಿಸುತ್ತಿದೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಹಲವಾರು ಜನರು ಈ ವೀಡಿಯೋ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಸಾಕಷ್ಟು ಜನರು ಲೈಕ್ಸ್ ಮತ್ತು ಕಾಮೆಂಟ್ಗಳನ್ನೂ ನೀಡಿದ್ದಾರೆ. ಕಾಮೆಂಟ್ ನಲ್ಲಿ ಜನರು ವಿಭಿನ್ನ ಮತ್ತು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

Leave A Reply

Your email address will not be published.