ಸಾಕು ನಾಯಿ ಕಚ್ಚಿದರೆ ಮಾಲೀಕರಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ!

ಮನುಷ್ಯ ಮತ್ತು ಪ್ರಾಣಿಗಳಿಗೆ ಹಲವಾರು ವ್ಯತ್ಯಾಸಗಳಿವೆ. ಮನುಷ್ಯ ಬುದ್ಧಿ ಜೀವಿ ಆಗಿದ್ದಾನೆ ಆದರೆ ಪ್ರಾಣಿಗಳಿಗೆ ಮನುಷ್ಯರಷ್ಟು ಬುದ್ಧಿ ಇರಲು ಸಾಧ್ಯ ಇಲ್ಲ. ಆದರೆ ಮನುಷ್ಯನಿಗೆ ಮತ್ತು ಕೆಲವು ಪ್ರಾಣಿಗಳ ನಡುವೆ ಒಂದು ನಂಟು ಇದೆ. ಅಂದರೆ ನಾಯಿಗಳನ್ನು ಮನುಷ್ಯರು ಹೆಚ್ಚಾಗಿ ಸಾಕುತ್ತಾರೆ ಅಲ್ಲದೆ ನಂಬಿಕಸ್ತ ಪ್ರಾಣಿ ಎಂದು ಸಹ ನಂಬಿಕೆಯಿಂದ ಹೇಳುವರು.

ಆದರೆ ಪ್ರಸ್ತುತ ನಾಯಿ-ಬೆಕ್ಕುಗಳಂತ ಪ್ರಾಣಿಗಳನ್ನು ಸಾಕಲು ಸ್ಥಳೀಯ ಆಡಳಿತದಲ್ಲಿ ನೋಂದಾಯಿಸಿಕೊಳ್ಳಬೇಕು ಎಂಬ ನಿಯಮವಿದ್ದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದರೆ ನೊಯ್ದಾದಲ್ಲಿ ಈ ನಿಯಮವನ್ನೂ ಕಠಿಣಗೊಳಿಸಿದ್ದಾರೆ. ಯಾರೆಲ್ಲ ಪ್ರಾಣಿಗಳನ್ನು ಸಾಕುತ್ತಿದ್ದಾರೋ ಅವರು 2023ರ ಜನವರಿ 31ರೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಈ ನಿಯಮ ಮೀರಿದವರು ರೂ 10 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ನೊಯ್ಡಾ ಪ್ರಾಧಿಕಾರ ಹೇಳಿದೆ.

ಹೌದು ನೊಯ್ಡಾದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕುನಾಯಿಗಳ ದಾಳಿ ಹೆಚ್ಚುತ್ತಿದೆ. ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾದಲ್ಲಿ ಸೆಕ್ಯೂರಿಟಿ ಗಾರ್ಡ್‌ವೊಬ್ಬರಿಗೆ, ಮನೆಯೊಂದರಲ್ಲಿ ಸಾಕಿದ ನಾಯಿ ಕಚ್ಚಿತ್ತು. ಒಬ್ಬರ ಮನೆಯಲ್ಲಿ ಸಾಕಿದ ನಾಯಿ, ಇನ್ನೊಂದು ಮನೆಯವರನ್ನು ಕಚ್ಚುವುದು, ದಾರಿ ಹೋಕರ ಮೇಲೆ ದಾಳಿ ಮಾಡುವುದೆಲ್ಲ ಇಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ನೊಯ್ಡಾ ಆಡಳಿತ ಅಲ್ಲಿ ನಾಯಿ- ಬೆಕ್ಕು ಸಾಕುವ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ತಂದಿದೆ.

ಹಾಗೇ, ಬೀದಿ ನಾಯಿಗಳ ಹಾವಳಿ ತಡೆಯಲೂ ಕೆಲವು ಕ್ರಮಗಳನ್ನು ಕೈಗೊಂಡಿದ್ದಾಗಿ ಹೇಳಿದ್ದಾರೆ. ಅಲ್ಲದೆ ಆಯಂಟಿ ರೇಬಿಸ್ ಲಸಿಕೆಗಳನ್ನು ಕಡ್ಡಾಯವಾಗಿ ಹಾಕಲು ಮಾಲೀಕರಿಗೆ ಸೂಚಿಸಿದ್ದಾರೆ.

ನೊಯ್ಡಾ ಪ್ರಾಧಿಕಾರದ ಸಿಇಒ ರಿತು ಮಹೇಶ್ವರಿ ಪ್ರಕಾರ ‘ಯಾರೇ ಸಾಕಿದ ನಾಯಿ-ಬೆಕ್ಕುಗಳು ಇನ್ನೊಬ್ಬರ ಮೇಲೆ ದಾಳಿ ಮಾಡುವುದು, ಕಚ್ಚುವುದು ಮಾಡಿದರೆ, ಅವುಗಳ ಮಾಲೀಕರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಲು ನಿರ್ಧರಿಸಿದ್ದಾರೆ.

ಮನುಷ್ಯರ ಮೇಲೆ ಅಷ್ಟೇ ಅಲ್ಲ, ಸಾಕು ನಾಯಿಗಳು ಇನ್ನೊಬ್ಬರ ಮನೆಯ ಪ್ರಾಣಿಗಳ ಮೇಲೆ ದಾಳಿ ಮಾಡಿದರೂ ದಂಡ ತುಂಬ ಬೇಕಾಗಿದೆ. ಬರೀ ಇಷ್ಟೇ ಅಲ್ಲ, ‘ಸಾಕಿದ ನಾಯಿ-ಬೆಕ್ಕುಗಳ ದಾಳಿಯಿಂದ ಗಾಯಗೊಂಡವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನೂ ಮಾಲೀಕರು ಭರಿಸಬೇಕು’ ಎಂದು ನೊಯ್ಡಾ ಪ್ರಾಧಿಕಾರದ ಸಿಇಒ ರಿತು ಮಹೇಶ್ವರಿ ಆದೇಶಿಸಿದ್ದಾರೆ.

ನೊಯ್ಡಾ ಪ್ರಾಧಿಕಾರದ ಸಿಇಒ ರಿತು ಮಹೇಶ್ವರಿ, ‘ಹೊಸ ಓಕ್ಲಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (NOIDA)ದ 207ನೇ ಬೋರ್ಡ್ ಮೀಟಿಂಗ್‌ನಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದೇವೆ ಎಂದಿದ್ದಾರೆ.

ಅಲ್ಲದೆ ಬೀದಿನಾಯಿ ಹಾಗೂ ಸಾಕು ನಾಯಿಗಳು ಮತ್ತು ಬೆಕ್ಕುಗಳಿಗೆ ಸಂಬಂಧಪಟ್ಟ ನಿಯಮಗಳನ್ನು ಕಠಿಣಗೊಳಿಸಲಾಗಿದೆ. ಈ ಮೇಲಿನ ದಂಡ ಕಟ್ಟುವ ನಿಯಮ ಮತ್ತು ಸಾಕು ಪ್ರಾಣಿಗಳ ನೋಂದಣಿ ಪ್ರಕ್ರಿಯೆ 2023ರ ಜನವರಿ 31ರಿಂದ ಕಡ್ಡಾಯವಾಗಿ ಜಾರಿಯಲ್ಲಿ ಬರುತ್ತದೆ’ ಎಂದು ಆದೇಶ ಹೊರಡಿಸಿದ್ದಾರೆ.

Leave A Reply

Your email address will not be published.