Complaint On BT Lalitha Naik : ಭೂತಾರಾಧನೆ ಸುಳ್ಳು ಎಂದಿದ್ದ ಸಾಹಿತಿ ಬಿ ಟಿ ಲಲಿತಾ ನಾಯಕ್ ವಿರುದ್ಧ ದೂರು ದಾಖಲು!

ಕೆಜಿಎಫ್ ಹಾಗೂ ಕಾಂತಾರ ಸೃಷ್ಟಿಮಾಡಿದ ಹವಾ ಅಷ್ಟಿಷ್ಟಲ್ಲ. ಚಂದನವನದ ಹೆಸರು ಚಂದ ಮಾಡಿದ ಹೆಗ್ಗಳಿಕೆ ಈ ಸಿನಿಮಾಗಳಿಗೆ ಸಲ್ಲುತ್ತೆ ಅಂದರೆ ತಪ್ಪಾಗಲಾರದು. ಸ್ಯಾಂಡಲ್‌ವುಡ್‌ ಬಗ್ಗೆ ಅಸಡ್ಡೆ ತೋರುತ್ತಿದ್ದ ಜನಗಳು ಈಗ ಕನ್ನಡ ಸಿನಿಮಾಗಳನ್ನು ನೋಡಿ ಹುಬ್ಬೇರಿಸುವಂತೆ ಮಾಡಿದೆ ಈ ಸಿನಿಮಾ. ಅದ್ಭುತ ಅತ್ಯದ್ಭುತ ಸಿನಿಮಾಗಳ ಪಾಲಿಗೆ ಇದು ಸೇರಿದೆ ಎಂದೇ ಹೇಳಬಹುದು.

ಬಾಲಿವುಡ್‌ ಸೆಲೆಬ್ರಿಟಿಗಳು ಕೂಡಾ ಹೊಗಳುತ್ತಿರುವ ಈ ಸಿನೊಮಾ ಬಗ್ಗೆ ಕೆಲವರು ನೆಗೆಟಿವ್ ಆಗಿ ಮಾತಾಡಿದ್ದಾರೆ ಕೂಡಾ. ಒಂದು ಕಡೆ ಚೇತನ್, ಭೂತಾರಾಧನೆ ಹಿಂದೂ ಸಂಸ್ಕ್ರತಿ ಅಲ್ಲ ಎಂದು ಹೇಳಿದ್ದು, ನಂತರ ಇದು ವ್ಯಾಪಾಕ ಟೀಕೆಗೆ ಗುರಿಯಾಗಿ ಹಲವು ಕೇಸುಗಳು ಚೇತನ್ ಮೇಲೆ ಬಿತ್ತು. ನಂತರ ಬಂದವರೇ ಸಾಹಿತಿ ಬಿ.ಟಿ. ಲಲಿತಾ ನಾಯಕ್‌. ಕರಾವಳಿಯಲ್ಲಿ ಬಹಳ ಹಿಂದಿನಿಂದಲೂ ಭೂತರಾಧನೆ ಸಂಸ್ಕೃತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಬಿ.ಟಿ. ಲಲಿತಾ ನಾಯಕ್‌ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ , ಭೂತದ ಕೋಲ ಆಚರಣೆ ಬಗ್ಗೆ ನೆಗೆಟಿವ್‌ ಆಗಿ ಮಾತನಾಡಿದ್ದರು.
ಈಗ ಇವರ ವಿರುದ್ಧ ಕೂಡಾ ದೂರು ದಾಖಲಾಗಿದೆ.

‘ಭೂತಾರಾಧನೆ ಎಂಬುದು ಮೂಢನಂಬಿಕೆ, ದೇವರು ಮೈ ಮೇಲೆ ಬರುವುದು ಸುಳ್ಳು’ ಎಂದು ಹೇಳಿದ್ದರು. ಲಲಿತಾ ನಾಯಕ್‌ ಅವರ ಹೇಳಿಕೆಯನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆಯು ಉಡುಪಿ ಪೊಲೀಸ್‌ ಠಾಣೆಗೆ ಭಾರತೀಯ ದಂಡಸಂಹಿತೆ 295 ಎ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಲಿಖಿತ ದೂರು ನೀಡಿದೆ. ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿರುವ ಲಲಿತಾ ನಾಯಕ್‌ ಅವರ ಹೇಳಿಕೆಯಿಂದ ಧಾರ್ಮಿಕ ನಂಬಿಕೆಗೆ, ತುಳುನಾಡಿನ ಜನರ ಭಾವನೆಗೆ ಧಕ್ಕೆಯುಂಟಾಗಿದೆ. ಲಲಿತಾ ನಾಯಕ್‌ ಅವರಿಗೆ ಶಿಕ್ಷೆ ಆಗಬೇಕು ಎಂದು ಹಿಂದೂ ಜಾಗರಣಾ ವೇದಿಕೆ ತಾಲೂಕು ಸಂಚಾಲಕ ಉಮೇಶ್ ಪಕ್ಕಲು ಒತ್ತಾಯಿಸಿದ್ದಾರೆ.

ಲಲಿತಾ ನಾಯಕ್‌, ಕರಾವಳಿ ಆಚರಣೆ ಮಾತ್ರವಲ್ಲ, ಗಣೇಶ, ಹನುಮಂತನ ಬಗ್ಗೆ ಕೂಡಾ ವಿರೋಧವಾಗಿ ಮಾತನಾಡಿದ್ದರು. ”ಹಿಂದಿನ ಕಾಲದಲ್ಲಿ ಜಮೀನ್ದಾರರು, ಶೋಷಿತ ವರ್ಗದವರಿಗೆ ಬಹಳ ಹಿಂಸೆ ನೀಡುತ್ತಿದ್ದರು. ಅವರೆಲ್ಲಾ ಆಕ್ರೋಶದಿಂದ ಚೀರುತ್ತಿದ್ದರು. ಆ ಕೂಗುವುದು ಈಗಲೂ ಮುಂದುವರೆದಿದೆ. ಜನರು ಅದನ್ನೇ ದೇವರೆಂದು ನಂಬುತ್ತಿದ್ದಾರೆ. ಅದನ್ನೇ ‘ಕಾಂತಾರ’ ಚಿತ್ರದಲ್ಲಿ ತೋರಿಸಲಾಗಿದೆ. ಆನೆಯನ್ನು ಗಣೇಶ, ಮಂಗನಿಗೆ ಹನುಮಂತ, ಹಂದಿಗೆ ಪಂಜುರ್ಲಿ ಎಂದು ಹೆಸರಿಟ್ಟುಕೊಂಡಿದ್ದಾರೆ. ಹನುಮಂತನಿಗೆ ಬಾಲ ಇದೆ ಎಂದರೆ ಅವನ ಹೆಂಡತಿಗೂ ಬಾಲ ಇರಬೇಕಿತ್ತು. ಹಾಸನ ಅನ್ನೋದು ಊರು, ಆದರೆ ಜನರು ಹಾಸನಾಂಬೆ ಎಂಬ ಹೆಸರಿನಲ್ಲೇ ಪೂಜೆ ಮಾಡಲು ಆರಂಭಿಸಿದ್ದಾರೆ, ಇದು ತಪ್ಪು” ಎಂದು ಲಲಿತಾ ನಾಯಕ್‌ ದೇವರು ಹಾಗೂ ನಂಬಿಕೆ ವಿರುದ್ಧವಾಗಿ ಮಾತನಾಡಿದ್ದರು.

ಲಲಿತಾ ನಾಯಕ್‌ ಅವರ ಮಾತಿಗೆ ಪರ-ವಿರೊಧ ಚರ್ಚೆ ಉಂಟಾಗಿದ್ದು, ನಾಸ್ತಿಕರು, ಅವರು ಹೇಳಿದ್ದೇ ಸರಿ ಎಂದರೆ ಆಸ್ತಿಕರು ಲಲಿತಾ ನಾಯಕ್‌ ಅವರು ಮಾತುಗಳಿಂದ ಬೇಸರ ವ್ಯಕ್ತಪಡಿಸಿದ್ದಾರೆ. ನಿಮಗೆ ನಂಬಿಕೆ ಇಲ್ಲದಿದ್ದರೆ ಬೇಡ. ಆದರೆ ನಮ್ಮ ನಂಬಿಕೆಯನ್ನು ಹಾಳುಮಾಡುವ ಪ್ರಯತ್ನ ಮಾಡಬೇಡಿ ಎನ್ನುತ್ತಿದ್ದಾರೆ.

Leave A Reply

Your email address will not be published.