OnePlus 11 ಮತ್ತು Oppo Find N2 ಸ್ಮಾರ್ಟ್ ಫೋನ್ ಹೆಚ್ಚಿಸಿದ ಭಾರೀ ಕುತೂಹಲ | ಹೆಚ್ಚಿನ ಮಾಹಿತಿ ಇಲ್ಲಿದೆ!

ಒಪ್ಪೋ(oppo) ಕಂಪನಿಯ ಒಪ್ಪೋ ಫೈಂಡ್ ಎನ್ 2 (Oppo Find N2) ಹಾಗೂ ಒನ್ ಪ್ಲಸ್ (OnePlus) ಕಂಪನಿಯ ಒನ್ ಪ್ಲಸ್ 11 (OnePlus 11) ಎರಡೂ ಬಹು ನಿರೀಕ್ಷೆಯ ಸ್ಮಾರ್ಟ್‌ಫೋನುಗಳಾಗಿದ್ದೂ, ಬಳಕೆದಾರರಲ್ಲಿ ಈಗಾಗಲೇ ತೀವ್ರ ಕುತೂಹಲ ಸೃಷ್ಟಿಯಾಗಿದೆ. ಅದರಲ್ಲೂ OnePlus 11 ಸ್ಮಾರ್ಟ್‌ಫೋನ್ ಬಗ್ಗೆ ಆನ್‌ಲೈನ್‌ನಲ್ಲಿ ಸಾಕಷ್ಟು
ಮಾಹಿತಿ ಸೋರಿಕೆಯಾಗುತ್ತಿದ್ದಂತೆ ಮತ್ತಷ್ಟು ನಿರೀಕ್ಷೆಗಳು ಹೆಚ್ಚಾಗಿವೆ.

ಎರಡೂ ಫೋನ್‌ಗಳಲ್ಲಿ ಒಂದು ಫೋಲ್ಡಬಲ್ ಫೋನ್ ಆಗಿದೆ. ಕ್ಯಾಮೆರಾ ವಿಷಯದಲ್ಲಿ ನೋಡಿದ್ರೆ, ಒನ್ ಪ್ಲಸ್ 11 ಮತ್ತು ಒಪ್ಪೋ ಫೈಂಡ್ ಎನ್ 2 ಎರಡೂ ಫೋನ್‌ಗಳು ಸೇಮ್ ಟು ಸೇಮ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಇದರಲ್ಲಿ 50 ಮೆಗಾ ಪಿಕ್ಸೆಲ್ ಸೋನಿ IMX890 ಪ್ರಾಥಮಿಕ ಕ್ಯಾಮೆರಾ, 48 ಮೆಗಾ ಪಿಕ್ಸೆಲ್ ಸೋನಿ IMX581 ಅಲ್ಪಾವೈಡ್ ಕ್ಯಾಮೆರಾ ಮತ್ತು 32 ಮೆಗಾ ಪಿಕ್ಸೆಲ್ ಸೋನಿ IMX709 2x ಜೂಮ್ ಕ್ಯಾಮೆರಾ ಇರಲಿವೆ ಎಂದು ಹೇಳಲಾಗುತ್ತಿದೆ. ಆದರೆ, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ನಲ್ಲಿ ಮಾತ್ರ ವ್ಯತ್ಯಾಸವಿರಬಹುದು.

OnePlus 11 ಈ ಕ್ಯಾಮೆರಾ ಮಾತ್ರ ಈ ವೈಶಿಷ್ಟ್ಯವನ್ನು ಹೊಂದಿರುವ ಸಾಧ್ಯತೆಗಳಿಲ್ಲ ಎನ್ನಲಾಗುತ್ತಿದೆ. ಈ ಫೋನ್ 6.7- ಇಂಚಿನ QHD+ OLED ಡಿಸ್ ಪ್ಲೇ ಹೊಂದಿರಬಹುದು. OnePlus 11 ಫೋನ್ Snapdragon 8 Gen 2 ಪ್ರೊಸೆಸರ್ ಮತ್ತು 16 GB RAM ಅನ್ನು ಬಳಸಬಹುದು. 100 W ಕೇಬಲ್ ಚಾರ್ಜಿಂಗ್ ಸಾಮರ್ಥ್ಯಗಳೊಂದಿಗೆ 5000 mAh ಬ್ಯಾಟರಿಯನ್ನು ಫೋನಿನಲ್ಲಿ ಬಳಸಲಾಗಿದೆ. ಬ್ಯಾಟರಿ ದೃಷ್ಟಿಯಿಂದ ತೀರಾ ಅಂಥ ಕಳಪೆ ಏನಲ್ಲ ಎಂದು ಸೋರಿಕೆಯಾದ ಮಾಹಿತಿಗಳು ಹೇಳುತ್ತಿದೆ.

ಮೂಲಗಳು ಮತ್ತು ಸೋರಿಕೆಯ ಮಾಹಿತಿಗಳ ಪ್ರಕಾರ, Oppo Find N2 ಸ್ನಾಪ್ಪಾಗನ್ 8+ Gen 1 ಚಿಪ್ಸೆಟ್ ಅನ್ನು ಬಳಸುವ ನಿರೀಕ್ಷೆಯಿದೆ. ಆದರೆ OnePlus 11 ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 Gen 2 ಬಳಸಿರುವ ಸಾಧ್ಯತೆ ಇದೆ. OnePlus OnePlus 11 Series 11 ಅಡಿಯಲ್ಲಿ ಪ್ರೊ ಮಾದರಿಯ ಬದಲಿಗೆ Pro ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲಾಗುತ್ತಿದೆ. ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 OS ಒಳಗೊಂಡಿರುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಇನ್ನು ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ, Wi-Fi 6E, ಬ್ಲೂಟೂತ್ 5.2, GPS ಮತ್ತು USB ಟೈಪ್-C ಕನೆಕ್ಟ‌ರ್ ಇರಬಹುದು.

ಜನಪ್ರಿಯ ಟಿಪ್ಸಟರ್ ಮ್ಯಾಕ್ಸ್ ಜಂಬೋರ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಮೊದಲಿಗೆ ಸುದ್ದಿ ಹರಿಬಿಟ್ಟಿದ್ದಾರೆ. ಆದರೆ ಕಂಪನಿಗಳು ಮಾತ್ರ ಈ ಬಗ್ಗೆ ಯಾವುದೇ ಮಾಹಿತಿಯನ್ನು ಖಚಿತಪಡಿಸಿಲ್ಲ. ಚೀನಾ ಮೂಲದ ಒನ್ ಪ್ಲಸ್ ಕಂಪನಿಯು OnePlus 11R ಎಂದು ಕರೆಯಲಾಗುವ ಮತ್ತೊಂದು ಫೋನಿನ ತಯಾರಿಕೆಯಲ್ಲಿ ಮಗ್ನವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಖಚಿತ ಮಾಹಿತಿಗಳಿಲ್ಲ. ಆದರೂ ಈ ಫೋನ್ ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಕಂಪನಿಯು OnePlus 11 ಸರಣಿ ಅಥವಾ ಅದರ ಕೊಡುಗೆಗಳಿಗೆ ಸಂಬಂಧಿಸಿದ ಯಾವುದೇ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ ಎಂಬುದನ್ನು ವೀಕ್ಷಕರು ಗಮನಿಸಬೇಕು.

Leave A Reply

Your email address will not be published.