Ayushman Bharat : ಆಯುಷ್ಮಾನ್ ಕಾರ್ಡ್ ಹೊಂದಿರುವವರೇ ನಿಮಗೊಂದು ಮುಖ್ಯವಾದ ಮಾಹಿತಿ!

ನೀವು ಆಯುಷ್ಮಾನ್ ಕಾರ್ಡ್ ಹೊಂದಿದವರಾಗಿದ್ದರೆ ನಿಮಗೊಂದು ಮುಖ್ಯವಾದ ಮಾಹಿತಿ ಇಲ್ಲಿದೆ. ನಿಮ್ಮ ಆರೋಗ್ಯ ಡೇಟಾವನ್ನು ಸುರಕ್ಷಿತವಾಗಿರಿಸಲು ಹೊಸ ಸೌಲಭ್ಯವೊಂದನ್ನು ಪ್ರಾರಂಭಿಸಲಾಗಿದೆ. ಇದರಿಂದ ಸುಲಭವಾಗಿ ನಿಮ್ಮ ಆರೋಗ್ಯ ಡೇಟಾವನ್ನು ಡಿಜಿಟಲ್ ರೂಪದಲ್ಲಿ ಭದ್ರವಾಗಿ ಇರಿಸಿಕೊಳ್ಳಬಹುದು.

ಆರೋಗ್ಯ ಯೋಜನೆಗೆ ಸಂಬಂಧಿಸಿದ ಸದಸ್ಯರು ಆರೋಗ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸೇಫ್ ಆಗಿ ಇಡಲು ಡಿಜಿಲಾಕರ್‌ನ ಪ್ರಯೋಜನವನ್ನು ಪಡೆಯಬಹುದಾಗಿದೆ. ಇನ್ನೂ, ಆರೋಗ್ಯ ಸಚಿವಾಲಯದ ಪ್ರಕಾರ, ಡಿಜಿಲಾಕರ್ ಬಳಕೆದಾರರು ತಮ್ಮ ಆರೋಗ್ಯ ದಾಖಲೆಗಳನ್ನು ಡಿಜಿಟಲ್ ಆಗಿ ಸುರಕ್ಷಿತವಾಗಿರಿಸಬಹುದು.

ಹಾಗೂ ಅವುಗಳನ್ನು ಆಯುಷ್ಮಾನ್ ಭಾರತ್ ಆರೋಗ್ಯ ಖಾತೆಗೆ (ABHA) ಲಿಂಕ್ ಮಾಡಬಹುದಾಗಿದೆ. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM) ನೊಂದಿಗೆ ಡಿಜಿಲಾಕರ್ ತನ್ನ ಎರಡನೇ ಹಂತದ ಏಕೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಹಾಗಾಗಿ ಡಿಜಿಲಾಕರ್ ಅನ್ನು ಈಗ ಆರೋಗ್ಯ ಲಾಕರ್ ಆಗಿ ಬಳಸಬಹುದಾಗಿದೆ.

ಡಿಜಿಲಾಕರ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇವೆರಡೂ ಸಚಿವಾಲಯದ ಅಡಿಯಲ್ಲಿ ಅಧಿಕೃತ ದಾಖಲೆ ವಿನಿಮಯ ವೇದಿಕೆಯಾಗಿದೆ. ಡಿಜಿಲಾಕರ್ ಅಧಿಕೃತ ದಾಖಲೆಗಳನ್ನು ಸಂಗ್ರಹಣೆ ಮಾಡಲು ಮತ್ತು ಸ್ವೀಕರಿಸಲು ಉತ್ತಮ ಮತ್ತು ಜನಪ್ರಿಯ ಅಪ್ಲಿಕೇಶನ್ ಆಗಿದೆ. ಡಿಜಿಲಾಕರ್‌ನ ಸುರಕ್ಷಿತ ಕ್ಲೌಡ್ ಆಧಾರಿತ ಸ್ಟೋರೇಜ್ ಪ್ಲಾಟ್‌ಫಾರ್ಮ್ ಅನ್ನು ಈಗ ರೋಗನಿರೋಧಕ ದಾಖಲೆಗಳು, ವೈದ್ಯರ ಪ್ರಿಸ್ಕ್ರಿಪ್ಷನ್‌ಗಳು, ಪ್ರಯೋಗಾಲಯ ವರದಿಗಳು, ಆಸ್ಪತ್ರೆಯ ಡಿಸ್ಚಾರ್ಜ್ ಮಾಹಿತಿಗಳು ಸೇರಿದಂತೆ ಹಲವು ಆರೋಗ್ಯ ದಾಖಲೆಗಳನ್ನು ಸಂಗ್ರಹಿಸಲು ಮತ್ತು ಸ್ವೀಕರಿಸಲು ಬಳಸಲಾಗುತ್ತದೆ.

ಆಯುಷ್ಮಾನ್ ಭಾರತ್ ಆರೋಗ್ಯ ಖಾತೆದಾರರು ತಮ್ಮ ಆರೋಗ್ಯ ದಾಖಲೆಗಳನ್ನು ವಿವಿಧ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ನೋಂದಾಯಿತ ಆರೋಗ್ಯ ಸೌಲಭ್ಯಗಳಾದ ಆಸ್ಪತ್ರೆಗಳು ಹಾಗೂ ಪ್ರಯೋಗಾಲಯದೊಂದಿಗೆ ಲಿಂಕ್ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ, ಅವುಗಳನ್ನು ಡಿಜಿಲಾಕರ್ ಮೂಲಕ ಪ್ರವೇಶಿಸಬಹುದು.

ಬಳಕೆದಾರರು ತಮ್ಮ ಹಳೆಯ ಆರೋಗ್ಯ ದಾಖಲೆಗಳನ್ನು ಈ ಅಪ್ಲಿಕೇಶನ್‌ನಲ್ಲಿ ಸ್ಕ್ಯಾನ್ ಮಾಡಬಹುದು ಮತ್ತು ಅಪ್‌ಲೋಡ್ ಕೂಡ ಮಾಡಬಹುದಾಗಿದೆ. ಇದಿಷ್ಟೇ ಅಲ್ಲದೆ, ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ನೋಂದಾಯಿತ ಆರೋಗ್ಯ ವೃತ್ತಿಪರರೊಂದಿಗೆ ಆಯ್ದ ದಾಖಲೆಗಳನ್ನು ಸುಲಭವಾಗಿ ಹಂಚಿಕೊಳ್ಳಬಹುದಾಗಿದೆ.

ಡಿಜಿಲಾಕರ್ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ) ನೊಂದಿಗೆ ಮೊದಲ ಹಂತದ ಏಕೀಕರಣವನ್ನು ಸಂಪೂರ್ಣಗೊಳಿಸಿದೆ. ಇನ್ನೂ ಇದರಲ್ಲಿ 13 ಕೋಟಿ ಬಳಕೆದಾರರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ರಚನೆ ಸೌಲಭ್ಯವನ್ನು ಸೇರಿಸಲಾಗಿದೆ. ಈ ಏಕೀಕರಣವು ಈಗ ಡಿಜಿಲಾಕರ್ ಅನ್ನು ವೈಯಕ್ತಿಕ ಆರೋಗ್ಯ ದಾಖಲೆ (PHR) ಅಪ್ಲಿಕೇಶನ್‌ನಂತೆ ಬಳಸಲು ಬಳಕೆದಾರರನ್ನು ಸಕ್ರಿಯಗೊಳಿಸುತ್ತದೆ. ಇದು ಆಯುಷ್ಮಾನ್ ಕಾರ್ಡ್ ಹೊಂದಿರುವವರು ತಿಳಿದುಕೊಳ್ಳಬೇಕಾದ ವಿಷಯವಾಗಿದೆ. ಮತ್ತು ನಿಮ್ಮ ಆರೋಗ್ಯ ದಾಖಲೆಗಳನ್ನು ಸುರಕ್ಷಿತವಾಗಿರಿಸಿಕೊಳ್ಳಿ

Leave A Reply

Your email address will not be published.