“ಸೀತೆ ನಾಯಿ ನೆಕ್ಕಿದ ತುಪ್ಪದಂತಾಗಿದ್ದಾಳೆ ಎಂದು ರಾಮ ಹೇಳಿದ್ದ” – ಸಾಕ್ಷಿ ಇದೆ ಎಂದ ಡಾ. ವಿಕಾಸ್ ದಿವ್ಯಕೃತಿ | ವೀಡಿಯೊ ವೈರಲ್

ಇತ್ತೀಚಿನ ದಿನಗಳಲ್ಲಿ ಎಲುಬಿಲ್ಲದ ನಾಲಿಗೆಯ ಹರಿಬಿಟ್ಟು ಬಾಯಿಗೆ ಬಂದಂತೆ ಹೇಳಿಕೆ ನೀಡುವವರೆ ಹೆಚ್ಚಾಗಿದ್ದಾರೆ. ರಾಮಾಯಣದ ಪಾತ್ರಗಳ ಬಗ್ಗೆ ಜನರಿಗೆ ವಿಶೇಷ ಗೌರವವಿದೆ. ಅದರಲ್ಲೂ ಕೂಡ ರಾಮ, ಸೀತೆಯನ್ನು ದೇವರಂತೆ ಪೂಜಿಸುವವರು ಇದ್ದಾರೆ. ಈ ನಡುವೆ ನವದೆಹಲಿಯ ಯುಪಿಎಸ್ಸಿ ತರಬೇತುದಾರರೊಬ್ಬರು ಯುಪಿಎಸ್​ಸಿ ಕೋಚಿಂಗ್​ ಸೆಂಟರ್​​ನ ತರಗತಿಯಲ್ಲಿ ಪಾಠ ಮಾಡುವಾಗ ರಾಮಾಯಣದ ಬಗ್ಗೆ ಆಕ್ಷೇಪಾರ್ಹ ವಿವರಣೆ ನೀಡಿದ್ದು, ವಿಕಾಸ್ ದಿವ್ಯಕೃತಿ ಎಂಬವರ ವಿರುದ್ಧ ಇದೀಗ ಭಾರೀ ಆಕ್ರೋಶ ವ್ಯಕ್ತವಾಗಿದೆ.

ರಾವಣ ಅಪಹರಿಸಿದ ಸೀತೆ ನಾಯಿ ನೆಕ್ಕಿದ ತುಪ್ಪದಂತಾಗಿದ್ದಾಳೆ ಎಂದು ರಾಮ ಹೇಳಿದ್ದ ಎಂಬುದಾಗಿ ರಾಮಾಯಣದ ಬಗ್ಗೆ ಉಲ್ಲೇಖ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಐಎಎಸ್ ಆಕಾಂಕ್ಷಿಗಳಿಗೆ ಟ್ಯೂಷನ್ ನೀಡುವ ದೃಷ್ಟಿ ಐಎಎಸ್ ಕೋಚಿಂಗ್ ಸೆಂಟರ್‌ನ ಮಾಲೀಕ ಮತ್ತು ನಿರ್ದೇಶಕರೂ ಆಗಿರುವ ಡಾ. ವಿಕಾಸ್ ದಿವ್ಯಕೃತಿ ಅವರು ಶಿಕ್ಷಣತಜ್ಞರಾಗಿದ್ದಾರೆ.

ದೆಹಲಿಯ ಜನಪ್ರಿಯ ಯುಪಿಎಸ್‌ಸಿ ಕೋಚಿಂಗ್ ಸೆಂಟರ್ ‘ದೃಷ್ಟಿ ಐಎಎಸ್‌’ ವಿರುದ್ಧ ಶುಕ್ರವಾರ ಬೆಳಗ್ಗೆಯಿಂದ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ರಾವಣ ಅಪಹರಿಸಿದ ಸೀತೆ ನಾಯಿ ನೆಕ್ಕಿದ ತುಪ್ಪದಂತಾಗಿದ್ದಾಳೆ. ನಾನು ಸೀತೆಗಾಗಿ ರಾವಣನೊಂದಿಗೆ ಯುದ್ಧ ಮಾಡಲಿಲ್ಲ ಎಂದು ಶ್ರೀರಾಮ ಸೀತೆಗೆ ಹೇಳಿದ್ದ ಎಂದು ರಾಮಾಯಣದ ಬಗ್ಗೆ ವಿವರಣೆ ನೀಡಿದ್ದ ಯುಪಿಎಸ್​ಸಿ ತರಬೇತುದಾರ ಡಾ. ವಿಕಾಸ್ ದಿವ್ಯಕೃತಿ ವಿಡಿಯೋ ಭಾರೀ ವೈರಲ್ ಆಗಿದ್ದು, ಜನರ ಕೋಪಕ್ಕೆ ತುತ್ತಾಗಿದೆ.

ದಿವ್ಯಕೃತಿ ಭೋಧಿಸಿದ ಮಾತಿನ ಬಗ್ಗೆ ವೀಡಿಯೋದಲ್ಲಿ “ಹಿಂದಿ ಚಲನಚಿತ್ರಗಳಲ್ಲಿ ನಾಯಕ ಮತ್ತು ನಾಯಕಿ ಕೊನೆಯಲ್ಲಿ ಭೇಟಿಯಾದಾಗ ಅವರು ಎದುರು ಬದುರಿನಿಂದ ಓಡಿ ಬರುತ್ತಾರೆ. ಆದರೆ, ಇಲ್ಲಿ ರಾಮನು ರಾವಣನನ್ನು ಸೋಲಿಸಿದನೆಂದು ಸೀತೆ ಸಂತೋಷಪಟ್ಟಿದ್ದಳು. ಈ ಬಳಿಕ ಆಕೆ ಅನೇಕ ದಿನಗಳ ಬಳಿಕ ಮನೆಗೆ ಹೋಗುತ್ತಾಳೆ. ಹೀಗಾಗಿ, ರಾಮನಿಗೆ ಸೀತೆಯನ್ನು ನೋಡಿ ಸಂತೋಷವಾಗುತ್ತದೆ ಎಂದು ಭಾವಿಸಿದ್ದಾಳೆ.

ಆದರೆ, ರಾಮ ಅವಳನ್ನು ತಡೆದು ನನಗೆ ಈ ಮಾತುಗಳನ್ನು ಹೇಳಲು ತುಂಬ ಕಷ್ಟವಾಗುತ್ತಿದೆ. ಆ ಮಾತುಗಳನ್ನು ಹೇಳಿದರೆ ನನ್ನ ನಾಲಿಗೆ ಉದುರುತ್ತದೆ. ಆದರೆ ನಾನು ಹೇಳಲೇಬೇಕಾಗಿದೆ. ಏನು ಮಾಡಲಿ? ಎಂದು ರಾಮ ಸೀತೆಯನ್ನು ಕೇಳಿದನು ಎಂದು ವಿಕಾಸ್ ದಿವ್ಯಕೃತಿ ಹೇಳಿದ್ದಾರೆ. ಆಗ ಅವನು “ರಾಮನಾದ ನಾನು ಸೀತೆಗಾಗಿ ಯುದ್ಧ ಮಾಡಿಲ್ಲ. ನಾನು ನನ್ನ ವಂಶಕ್ಕಾಗಿ ಯುದ್ಧ ಮಾಡಿದೆ. ನಾಯಿಯಿಂದ ನೆಕ್ಕಲ್ಪಟ್ಟ ನಂತರ ತುಪ್ಪವು ಸೇವನೆಗೆ ಅನರ್ಹವಾಗುತ್ತದೆ. ನೀನು ಈಗ ನನಗೆ ಅರ್ಹರಲ್ಲ.” ಎಂದು ಸೀತೆಗೆ ಹೇಳಿದ್ದಾನೆ. ರಾಮನ ಮಾತನ್ನು ಕೇಳಿ ಸೀತೆ ನೊಂದುಕೊಂಡಳು ಎಂದು ವಿಕಾಸ್ ದಿವ್ಯಕೃತಿ ಹೇಳಿದ್ದಾರೆ.

https://twitter.com/Sadhvi_prachi/status/1590894018162208768?ref_src=twsrc%5Etfw%7Ctwcamp%5Etweetembed%7Ctwterm%5E1590894018162208768%7Ctwgr%5Ef13dc93f63852825a590a9c98bece91ea93fb3cc%7Ctwcon%5Es1_c10&ref_url=https%3A%2F%2Ftv9kannada.com%2Fnational%2Fcontroversy-over-dr-vikas-divyakriti-statement-on-ramayana-sita-says-i-have-proof-kannada-news-sct-au49-469139.html

ಯುಪಿಎಸ್‌ಸಿ ತರಬೇತುದಾರ ವಿಕಾಸ್ ದಿವ್ಯಕೃತಿ ಎಂಬುವವರ ಉಪನ್ಯಾಸದ ವಿಡಿಯೋ ವೈರಲ್ ಆದ ನಂತರ #BanDrishtiIAS ಎಂಬ ಹ್ಯಾಷ್​ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದು, ಈ ವಿಡಿಯೋದಲ್ಲಿ ವಿಕಾಸ್ ದಿವ್ಯಕೃತಿ ಅವರು ತಮ್ಮ ಯುಪಿಎಸ್‌ಸಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಮಹಾಕಾವ್ಯ ರಾಮಾಯಣವನ್ನು ಬೋಧಿಸುವಾಗ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವ ದೃಶ್ಯ ಕಾಣಬಹುದಾಗಿದೆ. ಇದರಿಂದ ಆಕ್ರೋಶಗೊಂಡ ಟ್ವಿಟ್ಟರ್ ಬಳಕೆದಾರರು ಕೋಚಿಂಗ್ ಸಂಸ್ಥೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.

ಅನೇಕ ಟ್ವಿಟ್ಟರ್‌ ಬಳಕೆದಾರರು ವಿಕಾಸ್ ಹೇಳಿಕೆಯಿಂದ ಮನನೊಂದು ಯುಪಿಎಸ್‌ಸಿ ತರಬೇತುದಾರ ಹಿಂದೂ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿದ್ದು, ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಡಾ. ದಿವ್ಯಕೃತಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಹಾಗೇ, ಕೋಚಿಂಗ್ ಸಂಸ್ಥೆಯನ್ನು ಬ್ಯಾನ್ ಮಾಡಲು ಒತ್ತಾಯಿಸಿದ್ದಾರೆ.

ಸಾಧ್ವಿ ಪ್ರಾಚಿಯಂತಹ ಹಿಂದುತ್ವವಾದಿ ನಾಯಕರ ನೇತೃತ್ವದಲ್ಲಿ ನಡೆಯುತ್ತಿರುವ ಈ ಟ್ವಿಟ್ಟರ್ ಅಭಿಯಾನಕ್ಕೆ ಸಾಥ್ ನೀಡುತ್ತಿದ್ದು, ಅನೇಕ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಬೆಂಬಲವಾಗಿ ಬಂದು ಪೂರ್ಣ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ. ಈ ವಿವರಣೆಯ ಬಗ್ಗೆ ಸ್ಪಷ್ಟನೆ ನೀಡಿರುವ ಡಾ. ವಿಕಾಸ್ ದಿವ್ಯಕೃತಿ, ನಾನು ಹೇಳಿರುವ ಮಾಹಿತಿಗೆ ನನ್ನ ಬಳಿ ಸಾಕ್ಷಿ ಇದೆ ಎಂದಿದ್ದು, ಸಂದರ್ಶನವೊಂದರಲ್ಲಿ ಡಾ. ವಿಕಾಸ್ ದಿವ್ಯಕೃತಿ ಅವರು ಪುರುಷೋತ್ತಮ್ ಅಗರ್ವಾಲ್ ಅವರ ಪುಸ್ತಕದಿಂದ ಈ ಮಾಹಿತಿ ಪಡೆದಿದ್ದಾಗಿ ಉಲ್ಲೇಖಿಸಿದ್ದಾರೆ.

“ನಾನು ಸಾಕ್ಷಿಗಳಿಲ್ಲದೆ ಮಾತನಾಡುವುದಿಲ್ಲ. ಪುರುಷೋತ್ತಮ್ ಅವರು UPSC ಸದಸ್ಯರಾಗಿದ್ದು, ನಾವು ನಮ್ಮ ಅಧ್ಯಯನದಲ್ಲಿ ಅವರನ್ನು ಉಲ್ಲೇಖಿಸಬಹುದಾಗಿದೆ. ನಾನು ಸಂಸ್ಕೃತದಲ್ಲಿ ರಾಮಾಯಣ ಅಥವಾ ಮಹಾಭಾರತವನ್ನು ಓದಿಲ್ಲ. ವಾಲ್ಮೀಕಿ ರಾಮಾಯಣವನ್ನು ಉಲ್ಲೇಖಿಸುವ ಈ ಪುಸ್ತಕದಲ್ಲಿ ನಾನು ಈ ಮಾಹಿತಿಯನ್ನು ನೋಡಿದ್ದೇನೆ. ಅದನ್ನೇ ನಾನು ಹೇಳಿದ್ದೇನೆ” ಎಂದು ಡಾ. ದಿವ್ಯಾಕೃತಿ ಸ್ಪಷ್ಟನೆ ನೀಡಿದ್ದಾರೆ.

Leave A Reply

Your email address will not be published.