WhatsApp : ವಾಟ್ಸಪ್ ನಲ್ಲಿ ಬರಲು ರೆಡಿಯಾಗಿದೆ ಅಚ್ಚರಿಯ ಫೀಚರ್ | ಬಳಕೆದಾರರು ಫುಲ್ ಖುಷ್

ಹೊಸ ಹೊಸ ವೈಶಿಷ್ಟ್ಯಗಳನ್ನು ನೀಡುತ್ತಿರುವ ಜನಪ್ರಿಯ ಮೆಸೇಜಿಂಗ್ ಫ್ಲಾಟ್ ಫಾರ್ಮ್ ವಾಟ್ಸಪ್ ದಿನದಿಂದ ದಿನಕ್ಕೆ ಹೊಸ ಹೊಸ ವೈಶಿಷ್ಟ್ಯಗಳ ಅಪ್ಡೇಟ್ ಮೂಲಕ ಸುದ್ದಿಯಾಗುತ್ತಲೇ ಇದೆ. ಈದೀಗ ಒಮ್ಮೆಲೆ 4,5 ಹೊಸ ಹೊಸ ಆಯ್ಕೆಯನ್ನು ನೀಡುತ್ತಿರುವ ವಾಟ್ಸ್​ಆ್ಯಪ್​ನಲ್ಲಿ ಸಾಲು ಸಾಲು ಅಪ್ಡೇಟ್​ಗಳು ಬರಲು ತಯಾರಾಗಿ ನಿಂತಿದೆ.

ನಿಮ್ಮ ವಾಟ್ಸ್​ಆ್ಯಪ್​ನಲ್ಲಿ ನಿಮಗೆ ನೀವೇ ಮೆಸೇಜ್ ಮಾಡಲು ಗ್ರೂಪ್ ಒಂದನ್ನು ರಚಿಸಿ ನೀವೊಬ್ಬರೇ ಆ ಗ್ರೂಪ್​ನ ಸದಸ್ಯರಾಗಿ ಮೆಸೇಜ್ ಮಾಡಬಹುದಾದ ಆಯ್ಕೆಯಿದೆ. ಆದರೀಗ ವಾಟ್ಸ್​ಆ್ಯಪ್​ ‘ಮೆಸೇಜ್ ವಿಥ್ ಯುವರ್​ಸೆಲ್ಫ್’ ಎಂಬ ಹೊಸ ಫೀಚರ್ ಅನ್ನು ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಪರಿಚಯಿಸುವ ಬಗ್ಗೆ ಕೆಲಸ ಮಾಡುತ್ತಿದೆ.

ವಾಟ್ಸ್​ಆ್ಯಪ್ ನೀಡಲಿರುವ ಈ ಹೊಸ ಆಯ್ಕೆಯಲ್ಲಿ ಕಾಂಟೆಕ್ಟ್​ ಲಿಸ್ಟ್​ನಲ್ಲಿ ಬೇರೆಯವರ ನಂಬರ್ ಜೊತೆ ನಿಮ್ಮ ನಂಬರ್ ಕೂಡ ಕಾಣಲಿದೆ. ನಿಮ್ಮ ನಂಬರ್​ಗೆ ನೀವೇ ಮೆಸೇಜ್ ಮಾಡಬಹುದಾದ ಆಯ್ಕೆಯನ್ನು ವಾಟ್ಸ್​ಆ್ಯಪ್ ನೀಡಲು ಮುಂದಾಗಿದೆ. ಸದ್ಯಕ್ಕೆ ಬೀಟಾ ವರ್ಷನ್​ನಲ್ಲಿ ಈ ಆಯ್ಕೆ ಕಾಣಿಸಿಕೊಂಡಿದೆ.

ಇದಲ್ಲದೆ ಇನ್ನೊಂದು ನೂತನ ಅಪ್ಡೇಟ್ ನೀಡಲು ವಾಟ್ಸ್​ಆ್ಯಪ್ ಸಜ್ಜಾಗಿದ್ದು, ಇದರಲ್ಲಿ ನೀವು ಫೋಟೋ, ವಿಡಿಯೋ ಅಥವಾ ಜಿಫ್ ಫೈಲ್​ಗಳನ್ನು ಫಾರ್ವರ್ಡ್ ಮಾಡುವಾಗ ಅದರ ಜೊತೆಗಿದ್ದ ಕಾಪ್ಷನ್ ಕೂಡ ಸೆಂಡ್ ಆಗುತ್ತದೆ. ಸದ್ಯಕ್ಕೆ ಈ ಆಯ್ಕೆ ಕೆಲ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಲಭ್ಯವಾಗುತ್ತಿದೆ.

ಅಂತೆಯೇ ಡಾಕ್ಯುಮೆಂಟ್ ಕಳುಹಿಸುವಾಗ ಈ ಆಯ್ಕೆ ಕಾಣಿಸುತ್ತಿರಲಿಲ್ಲ. ಇದೀಗ ವಾಟ್ಸ್​ಆ್ಯಪ್ ತನ್ನ ನೂತನ ಅಪ್ಡೇಟ್​ನ ಮೂಲಕ ಡಾಕ್ಯುಮೆಂಟ್ ಕಳುಹಿಸುವಾಗಲೂ ಕಾಪ್ಷನ್ ಆಯ್ಕೆ ನೀಡಲಿದೆ.

ಮೆಟಾ-ಮಾಲೀಕತ್ವದ ವಾಟ್ಸ್​ಆ್ಯಪ್ ತನ್ನ ಬಳಕೆದಾರರಿಗಾಗಿ ಕಮ್ಯುನಿಟಿ ಎನ್ನುವ ಹೊಸ ಫೀಚರ್​ ಅನ್ನು ಪರಿಚಯಿಸಿದೆ. ಈ ಹೊಸ ಫೀಚರ್ ಮೂಲಕ ನೀವು 50 ವಾಟ್ಸ್​ಆ್ಯಪ್ ಗುಂಪುಗಳನ್ನು ಒಟ್ಟಿಗೆ ಸೇರಿಸಲು ಸಾಧ್ಯವಾಗುತ್ತದೆ.

ಇಷ್ಟು ದಿನ ಕೇವಲ ಗ್ರೂಪ್ ಕ್ರಿಯೇಟ್ ಮಾಡಿ ಅದರಲ್ಲಿ ನಿಮಗೆ ಬೇಕಾದವರ ನಂಬರ್​ ಅನ್ನು ಆಡ್ ಮಾಡುವ ಅವಕಾಶವಿತ್ತು. ಆದರೆ ಮುಂದಿನ ದಿನಗಳಲ್ಲಿ ಬೇರೆ ಬೇರೆ ಗ್ರೂಪ್​ಗಳನ್ನು ಈ ಕಮ್ಯುನಿಟಿಯಲ್ಲಿ ಸೇರಿಸಬಹುದಾಗಿದೆ.

Leave A Reply

Your email address will not be published.