Fake Pregnancy : ಮಗು ಆಗಲಿಲ್ಲ ಎಂಬ ಮೂದಲಿಕೆ ಮಾತಿಗೆ ಅಪಹಾಸ್ಯಕ್ಕೆ ಬೇಸತ್ತು ಗರ್ಭಿಣಿ ಎಂದು ಸುಳ್ಳು ಹೇಳಿದ ಮಹಿಳೆ | ನಂತರ ಏನಾಯ್ತು?

ಮದುವೆಯಾಗದಿದ್ದರೆ ಯಾಕೆ ಮದುವೆಯಾಗಲಿಲ್ಲ ಎಂದು ಮದುವೆಯಾದರೆ ಮಗು ಯಕಾಗಿಲ್ಲ ಎಂಬ ಚುಚ್ಚು ಮಾತುಗಳನ್ನು ಈ ಸಮಾಜದಲ್ಲಿ ಕೇಳ್ತಾ ಇರ್ತೀವಿ. ಹೆಣ್ಣುಮಕ್ಕಳಿಗಂತೂ ಇದು ನಿಜಕ್ಕೂ ಅಸಹನೀಯ ಪಾಡು. ಕುಟುಂಬಸ್ಥರು, ಸಂಬಂಧಿಕರು, ಅಕ್ಕಪಕ್ಕದ ಮನೆಯವರು ಗುಡ್ ನ್ಯೂಸ್ ಯಾವಾಗ ಪ್ರಶ್ನೆ ಕೇಳಲು ಆರಂಭಿಸುತ್ತಾರೆ. ಅದರಲ್ಲೂ, ಮದುವೆಯಾಗಿ 10-15 ವರ್ಷವಾಗಿ ಮಕ್ಕಳಾಗದಿದ್ದರಂತೂ ಸಂಬಂಧಿಕರು ಅಪಹಾಸ್ಯ ಮಾಡಲು ಆರಂಭಿಸುತ್ತಾರೆ.

ಇಂತಹುದೇ ಒಂದು ಘಟನೆಯಲ್ಲಿ, ಗರ್ಭ ಧರಿಸದ ಕುರಿತು ಅಪಹಾಸ್ಯಕ್ಕೆ ಬೇಸತ್ತ ಉತ್ತರ ಪ್ರದೇಶದ ಮಹಿಳೆಯೋರ್ವಳು ಗರ್ಭಿಣಿ ಎಂದು ಸುಳ್ಳು (Fake Pregnancy) ಹೇಳಿದ್ದಾರೆ. ಆದರೆ ಈ ಮಹಿಳೆಯು ಗರ್ಭವತಿ ಎಂದು ಸುಳ್ಳು ಹೇಳಿದ್ದು ನಂತರ ಆರು ತಿಂಗಳ ಬಳಿಕ ನಿಜಾಂಶ ಬಯಲಾಗಿದೆ.

ಉತ್ತರ ಪ್ರದೇಶದ ಎತಾವಾಹ್ ನಿವಾಸಿಯಾದ 40 ವರ್ಷದ ಮಹಿಳೆಗೆ ಮದುವೆಯಾಗಿ 18 ವರ್ಷವಾದರೂ ಮಕ್ಕಳಾಗಿರಲಿಲ್ಲ. ಮಕ್ಕಳಾಗಿಲ್ಲ ಎಂಬುದರ ಕುರಿತು ಕುಟುಂಬಸ್ಥರು, ಸಂಬಂಧಿಕರು ಹಾಗೂ ನೆರೆಹೊರೆಯವರ ಮೂದಲಿಕೆಯ ಮಾತುಗಳಿಂದ ಮಹಿಳೆ ಬೇಸತ್ತಿದ್ದಾರೆ. ಕೊನೆಗೆ ಮಹಿಳೆಯು ತಾನು ಗರ್ಭ ಧರಿಸಿದ್ದೇನೆ ಎಂದು ಆರು ತಿಂಗಳ ಹಿಂದೆ ಘೋಷಿಸಿದ್ದಾರೆ. ಇದರಿಂದ ಮನೆಯವರೂ ಖುಷಿಪಟ್ಟಿದ್ದಾರೆ.

ಗರ್ಭ ಧರಿಸಿದ್ದೇನೆ ಎಂದು ಆರು ತಿಂಗಳಿಂದ ಕುಟುಂಬಸ್ಥರನ್ನು ನಂಬಿಸಿದ ಮಹಿಳೆಯು ತಿಂಗಳು ತಿಂಗಳು ವೈದ್ಯರ ಬಳಿ ತೆರಳುತ್ತೇನೆ ಎಂದು ಮನೆಯಲ್ಲಿ ತಿಳಿಸಿದ್ದಾಳೆ. ಹೀಗೆ, ಆರು ತಿಂಗಳು ಸುಳ್ಳು ಹೇಳಿದ ಮಹಿಳೆಯು ಇತ್ತೀಚೆಗೆ ಹೊಟ್ಟೆನೋವು ಎಂದಿದ್ದು,
ಇದಾದ ಬಳಿಕ ನಿಗದಿತ ಸಮಯಕ್ಕಿಂತ ಮೊದಲೇ ಅಂದರೆ, ಆರು ತಿಂಗಳಿಗೇ ಮಗುವಿಗೆ ಜನ್ಮ ನೀಡಿದ್ದೇನೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾಳೆ‌

ಕುಟುಂಬಸ್ಥರು ಕೊನೆಗೆ ಆರು ತಿಂಗಳಿಗೆ ಹುಟ್ಟಿದೆ ಎನ್ನಲಾದ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪ್ರಕರಣ ಬಯಲಾಗಿದೆ. ಅದು ಮಗುವಲ್ಲ, ಪ್ಲಾಸ್ಟಿಕ್ ಗೊಂಬೆ ಎಂದು ವೈದ್ಯರು ತಿಳಿಸಿದ್ದಾರೆ. ಹಾಗೆಯೇ, ಮಹಿಳೆಯು ತೆಗೆಸಿಕೊಂಡ ಎಕ್ಸ್ ರೇಗಳು ಕೂಡಾ ನಕಲಿ ಎಂದು ಹೇಳಿದ್ದಾರೆ.

ಜನರಾಡುವ ಮೂದಲಿಕೆಯ ಮಾತುಗಳಿಂದ ನೊಂದ ಮಹಿಳೆಯು ಇದರಿಂದ ಪಾರಾಗಲು ಈ ದಾರಿ ಹಿಡಿದಿದ್ದು, ಕುಟುಂಬಸ್ಥರು ನಿಜಕ್ಕೂ ಈ ಘಟನೆಯಿಂದ ಮೌನಿಯಾಗಿದ್ದಾರೆ. ಇನ್ನಾದರೂ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಇಂತಹ ಮೂದಲಿಕೆಯ ಮಾತುಗಳನ್ನಾಡುವುದು ನಿಲ್ಲಿಸಿ ಆಕೆಯನ್ನು ಸ್ವಾವಲಂಬಿಯಾಗಿ ಬದುಕಲು ಬಿಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

Leave A Reply

Your email address will not be published.