ಚಾರ್ಮಾಡಿಘಾಟ್ ನಲ್ಲಿ ಮತ್ತೆ ಪ್ರತ್ಯಕ್ಷವಾದ ಹೆಬ್ಬಾವು! ಆತಂಕದಲ್ಲಿ ಜನ!

ಇತ್ತೀಚಿಗೆ ಮನುಷ್ಯನ ಸ್ವಾರ್ಥ ಮತ್ತು ದುರಾಸೆಯಿಂದ ಮರಗಿಡಗಳು, ಬೆಟ್ಟ ಕಾಡುಗಳು ಕಣ್ಮರೆ ಆಗುತ್ತಿದೆ. ಒಂದು ಕಡೆಯಲ್ಲಿ ಪರಿಸರ ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತಿದೆ. ಈ ಕಾರಣವಾಗಿ ಕಾಡಿನ ಪ್ರಾಣಿಗಳು ಪಕ್ಷಿಗಳು ನಾಡಿನತ್ತ ಮುಖ ಮಾಡಿದ ಎಷ್ಟೋ ನಿದರ್ಶನಗಳನ್ನು ಕೇಳಿದ್ದೇವೆ ಮತ್ತು ನೋಡಿದ್ದೇವೆ.

ಹೌದು ಕಳೆದ ಒಂದು ವಾರದ ಹಿಂದೆ ಚಾರ್ಮಾಡಿ ಘಾಟ್ ನಲ್ಲಿ ಕಾಣಿಸಿಕೊಂಡಿದ್ದ ಹೆಬ್ಬಾವೊಂದು ಮತ್ತೆ ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಕಾಣಿಸಿಕೊಂಡು ಪ್ರವಾಸಿಗರಿಗೆ ನಡುಕ ಮೂಡಿಸಿದೆ.

ಹೆಬ್ಬಾವು ಒಂದು ತನ್ನ ಆಹಾರವನ್ನು ಅರಸಿಕೊಂಡು ಬಂದು ಯಾವುದೋ ಪ್ರಾಣಿಯೊಂದನ್ನು ಬೇಟೆಯಾಡಿ ನುಂಗಿ ರಸ್ತೆಯ ಒಂದು ಬದಿಯಲ್ಲಿ ಮಲಗಿಕೊಂಡಿದೆ.

ಇದೀಗ ಹೆಬ್ಬಾವಿನ ವೀಡಿಯೋವನ್ನು ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿಗರೊಬ್ಬರು ಸೆರೆ ಹಿಡಿದಿದ್ದಾರೆ. ವಾರದ ಹಿಂದೆಯಷ್ಟೆ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಹೆಬ್ಬಾವು ಮತ್ತೆ ರಸ್ತೆಯಲ್ಲಿ ಕಾಣಿಸಿಕೊಂಡಿದೆ ಎಂದು ತಿಳಿದ್ದಾರೆ.
ಹೆಬ್ಬಾವಿನ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ ಮತ್ತು ಈ ವೀಡಿಯೊ ವೈರಲ್ ಆಗಿದೆ.

ವಾಹನಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ.

Leave A Reply

Your email address will not be published.