ಅಬ್ಬಾ | ಬಸ್ ನಲ್ಲಿ ಪ್ರಯಾಣ ಮಾಡುವಾಗ ಲ್ಯಾಪ್‌ಟಾಪ್ ಗೆ ಹೆಚ್ಚುವರಿ ರೂ.10 ಟಿಕೆಟ್ ಕೇಳಿದ ಕಂಡಕ್ಟರ್ | ಅವಕ್ಕಾದ ಪ್ರಯಾಣಿಕ

ಬಸ್ ನಲ್ಲಿ ಪ್ರಯಾಣ ಮಾಡುವಾಗ ಪ್ರಯಾಣಿಕರಿಗೆ ಮಾತ್ರ ಟಿಕೆಟ್ ಎಂಬ ಒಂದು ರೂಲ್ಸ್ ಇತ್ತು. ಅನಂತರ ಅದು ಕೋಳಿಗೆ ಗಿಣಿಗಳಿಗೆ ಟಿಕೆಟ್ ಕೊಡಬೇಕು ಎಂಬ ವಿಷಯ ಕೂಡಾ ಬಂತು. ಆದರೆ ಈಗ ಇಲ್ಲಿ ನಡೆದಿರೋದೇನಂದರೆ ಓರ್ವ ಕಂಡಕ್ಟರ್ ಲ್ಯಾಪ್‌ಟಾಪ್ ಗೆ ಟಿಕೆಟ್ ಕೇಳಿದ್ದಾನೆ. ಇದನ್ನು ಕೇಳಿದ ಪ್ರಯಾಣಿಕ ನಿಜಕ್ಕೂ ನಂಬಲು ಅಸಾಧ್ಯ ಎಂಬಂತಹ ನೋಟ ಬೀರಿದ್ದಾನೆ.


Ad Widget

Ad Widget

Ad Widget

Ad Widget
Ad Widget

Ad Widget

ಹೌದು, ಬಸ್‌ನಲ್ಲಿ ಪ್ರಯಾಣಿರೊಬ್ಬರ ಲ್ಯಾಪ್​ಟಾಪ್​ಗೆ ಕಂಡಕ್ಟರ್ 10 ರೂಪಾಯಿ ಹೆಚ್ಚುವರಿ ಹಣ ಕೇಳಿರುವ ಪ್ರಸಂಗ ಗದಗದಲ್ಲಿ ನಡೆದಿದೆ. ಆಶ್ಚರ್ಯ ಅನ್ನಿಸಿದರೂ ಸತ್ಯ. NWKRTC ಬಸ್​ನಲ್ಲಿ ಗದಗನಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಲ್ಯಾಪ್​ಟಾಪ್ ಓಪನ್ ಮಾಡಿದ್ದಕ್ಕೆ ಕಂಡಕ್ಟರ್ ಹೆಚ್ಚುವರಿಯಾಗಿ 10 ಕೇಳಿದ್ದಾನೆ. ಇದರಿಂದ ಪ್ರಯಾಣಿಕ ಒಂದು ಕ್ಷಣ ಗಾಬರಿ ಆಗಿದ್ದಾರೆ.


Ad Widget

ಗದಗದಿಂದ ಹುಬ್ಬಳ್ಳಿಗೆ ಹೊರಟ್ಟಿದ್ದ ಪ್ರಯಾಣಿಕರೊಬ್ಬರು ಕೆಎಸ್​ಆರ್​ಟಿಸಿ ಬಸ್​ನಲ್ಲಿ ಲ್ಯಾಪ್​ಟಾಪ್ ಆನ್ ಮಾಡಿದ್ದಾರೆ. ಇದನ್ನು ಗಮನಿಸಿದ ಕಂಡಕ್ಟರ್ ಪ್ರಯಾಣಿಕರನ ಹತ್ತಿರ ಬಂದು ಲ್ಯಾಪ್‌ಟಾಪ್ ತೆಗೆದುಕೊಂಡು ಹೋಗಲು ಹೆಚ್ಚುವರಿ 10 ರೂ ನೀಡುವಂತೆ ಕೇಳಿದ್ದಾರೆ. ಆದರೆ ಪ್ರಯಾಣಿಕನು ಹಣ ಪಾವತಿಸಲು ನಿರಾಕರಿಸಿದ್ದಾರೆ.

ಇನ್ನು ಈ ಬಗ್ಗೆ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಹೆಸರು ಹೇಳಲು ಇಚ್ಛಿಸದ ವೃತ್ತಿನಿರತ ಪ್ರಯಾಣಿಕ, ಹುಬ್ಬಳ್ಳಿ ಕಡೆಗೆ ಪ್ರಯಾಣಿಸುವಾಗ ಬಸ್​ನಲ್ಲಿ ಕೆಲಸ ಮಾಡಲು ಲ್ಯಾಪ್‌ಟಾಪ್ ಆನ್ ಮಾಡಿದ್ದೇನೆ. ಅದನ್ನು ಗಮನಿಸಿದ ಕಂಡಕ್ಟರ್ ಬಂದು ಲ್ಯಾಪ್‌ಟಾಪ್ ಒಯ್ಯಲು 10 ರೂಪಾಯಿಗಳನ್ನು ಹೆಚ್ಚುವರಿಯಾಗಿ ನೀಡುವಂತೆ ಕೇಳಿದ್ದಾರೆ ಎಂದು ತಿಳಿಸಿದ್ದಾರೆ.

NWKRTC ಯ ಅಧಿಕಾರಿ ಪ್ರಕಾರ ಲ್ಯಾಪ್‌ಟಾಪ್‌ಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲು ಅಂತಹ ಯಾವುದೇ ನಿಯಮವಿಲ್ಲ. ಲ್ಯಾಪ್‌ಟಾಪ್ ಮೊಬೈಲ್ ಫೋನ್‌ನಂತೆಯೇ ಒಂದು ಸಾಧನವಾಗಿರುವುದರಿಂದ ಪ್ರಯಾಣಿಕರ ಲಗೇಜ್‌ನ ಒಂದು ಭಾಗವಾಗಿದೆ. ಹಾಗಾಗಿ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದಿದ್ದಾರೆ.

ಈ ವಿಷಯ ಕುರಿತು ಪ್ರಯಾಣಿಕರು ತಮ್ಮ ಗೆಳೆಯರಾದ ಕಂಡಕ್ಟರ್ ನ್ನು ವಿಚಾರಿಸಿದಾಗ ಪ್ರಯಾಣ ಮಾಡುವಾಗ ಲ್ಯಾಪ್‌ಟಾಪ್ ಬಳಸುವ ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕ ವಿಧಿಸಲು ಸಾರಿಗೆ ಅಧಿಕಾರಿಗಳು ಹೇಳಿದ್ದಾರೆ. ಒಂದು ವೇಳೆ ಹೆಚ್ಚುವರಿ ಹಣ ಚಾರ್ಜ್ ಮಾಡದಿದ್ದರೆ ದಂಡ ಪಾವತಿಸಬೇಕಾಗುತ್ತದೆ ಎನ್ನುವುದು ನನ್ನ ಗಮನಕ್ಕೆ ಬಂತು ಎಂದು ತಿಳಿಸಿದ್ದಾರೆ.

ಅದಲ್ಲದೆ ಇದರ ಬಗ್ಗೆ ಗದಗ ಡಿಪೋ ವಿಭಾಗದ ನಿಯಂತ್ರಣಾಧಿಕಾರಿ ಜಿ.ಸೀನಯ್ಯ ಅವರು ಸುತ್ತೋಲೆಯ ಪ್ರಕಾರ ಟಿವಿ, ರೆಫ್ರಿಜರೇಟರ್, ಡೆಸ್ಕ್‌ಟಾಪ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳಿಗೆ ಘಟಕಗಳ ಸಂಖ್ಯೆ ಮತ್ತು ದೂರದ ಆಧಾರದ ಮೇಲೆ 5 ರೂ.ನಿಂದ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಆದಾಗ್ಯೂ, ಲ್ಯಾಪ್‌ಟಾಪ್‌ಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಲ್ಯಾಪ್‌ಟಾಪ್‌ಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದು ಕಂಡುಬಂದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅದಲ್ಲದೆ ಕೆಎಸ್ಆರ್‌ಟಿಸಿ ನಿಯಮ ಅನುಸಾರ 30 ಕೆಜಿಯ ಮಿತಿಯನ್ನು ದಾಟದ ಉಚಿತವಾಗಿ ಸಾಗಿಸಬಹುದಾದ ಲಗೇಜ್‌ಗಳ ಪಟ್ಟಿಯಲ್ಲಿ ಲ್ಯಾಪ್‌ಟಾಪ್‌ ಆದೇಶದಲ್ಲಿ ಉಲ್ಲೇಖಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.

error: Content is protected !!
Scroll to Top
%d bloggers like this: