ತೆಲುಗು ಸ್ಟಾರ್ ನಾಗ ಶೌರ್ಯ ಹಾಗೂ ಅನುಷಾ ಶೆಟ್ಟಿ ಮದುವೆ!

ತೆಲುಗು ಸ್ಟಾರ್ ನಟ, ಮೋಸ್ಟ್ ಎಲಿಜೆಬೆಲ್ ಬ್ಯಾಚುಲರ್ ಆಗಿದ್ದ ನಾಗ ಶೌರ್ಯ ಇದೀಗ ಹಸೆಮಣೆ ಏರಲು ತಯಾರಾಗಿದ್ದಾರೆ. ಈ ತೆಲುಗು ಸ್ಟಾರ್, ಕರ್ನಾಟಕದ ಯುವತಿಯ ಕೈ ಹಿಡಿಯುತ್ತಿದ್ದಾರೆ. ಕರ್ನಾಟಕ ಮೂಲದ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುವ ಅನುಷಾ ಶೆಟ್ಟಿ ಜೊತೆ‌ ನಾಗ ಶೌರ್ಯ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಈಗಾಗಲೇ ಮದುವೆ ಡೇಟ್ ಕೂಡ ಫಿಕ್ಸ್ ಆಗಿದ್ದು, ಇವರಿಬ್ಬರ ವಿವಾಹ ಬೆಂಗಳೂರಿನಲ್ಲಿ ಇದೇ ತಿಂಗಳು ನವೆಂಬರ್ 20ರಂದು ಅದ್ದೂರಿಯಾಗಿ ನಡೆಯಲಿದೆ.

ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಈ ಶುಭ ಸಮಾರಂಭ ನಡೆಯುತ್ತದೆ. ಹಾಗಾಗಿ ನಾಗ ಶೌರ್ಯ ಕುಟುಂಬ ಬೆಂಗಳೂರಿಗೆ ಶಿಫ್ಟ್ ಆಗುತ್ತಿದ್ದಾರೆ. ಇನ್ನೂ ಈ ಮದುವೆಗೆ ಕುಟುಂಬದ ಜೊತೆಗೆ ಸಿನಿಮಾರಂಗದ ಗಣ್ಯ ವ್ಯಕ್ತಿಗಳು ಕೂಡ ಹಾಜರಾಗುತ್ತಿದ್ದಾರೆ. ಹಾಗೇ ತೆಲುಗು ಇಂಡಸ್ಟ್ರಿಯಿಂದ ಯಾರೆಲ್ಲ ಈ ಶುಭ ಸಮಾರಂಭದಲ್ಲಿ ಪಾಲ್ಗೊಳ್ಳಬಹುದು ಎಂಬ ಕುತೂಹಲ ಹೆಚ್ಚಾಗಿದೆ.

ನವೆಂಬರ್ 19 ಮತ್ತು 20 ರಂದು ಬೆಂಗಳೂರಿನ ವಿಟ್ಟಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‌ನಲ್ಲಿ ಸಮಾರಂಭವನ್ನು ಆಯೋಜಿಸಲಾಗಿದೆ. ನವೆಂಬರ್ 20 ರಂದು ಬೆಳಿಗ್ಗೆ 11.25ರ ಮುಹೂರ್ತದಲ್ಲಿ ನಾಗ ಶೌರ್ಯ, ಅನುಷಾ ಶೆಟ್ಟಿಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ನಾಗ ಶೌರ್ಯ ಮತ್ತು ಅನುಷಾ ಶೆಟ್ಟಿ ಅವರ ಮದುವೆಯ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಇನ್ನೂ, ಅಭಿಮಾನಿಗಳು ಈ ಮುದ್ದಾದ ಜೋಡಿಗೆ ಶುಭ ಹಾರೈಕೆಯ ಮಳೆ ಸುರಿಸುತ್ತಿದ್ದಾರೆ.

ನಾಗ ಶೌರ್ಯ ಮತ್ತು ಅನುಷಾ ಶೆಟ್ಟಿ ಅವರ ಮದುವೆಯ ಆಮಂತ್ರಣ ಪತ್ರದಲ್ಲಿ ಸಮಾರಂಭದ ಮತ್ತು ಡ್ರೆಸ್ ಕೋಡ್ ಬಗ್ಗೆ ವಿವರಗಳನ್ನು ನೀಡಲಾಗಿದೆ. ನವೆಂಬರ್ 19 ರಂದು ಮೆಹಂದಿ ಕಾರ್ಯಕ್ರಮ ನಡೆಯಲಿದ್ದು, ಇದು ಮಧ್ಯಾಹ್ನ 3.30 ಕ್ಕೆ ಪ್ರಾರಂಭವಾಗಲಿದೆ. ಬಳಿಕ ರಾತ್ರಿ ‘ಕಾಕ್‌ಟೈಲ್ ಪಾರ್ಟಿ’ ಕೂಡ ಆಯೋಜಿಸಲಾಗಿದೆ. ಮತ್ತು ಎಲ್ಲರೂ ಎದುರು ನೋಡುತ್ತಿರುವ ಸಮಯ, ಮದುವೆ ನವೆಂಬರ್ 20ಕ್ಕೆ ನಡೆಯಲಿದೆ.

Leave A Reply

Your email address will not be published.